ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ನವಮೀ ತಿಥಿ, ಬುಧವಾರ ಕಳಕದಿಂದ ಮುಕ್ತಿ, ಮಕ್ಕಳ ಬೇಸರ ದೂರ, ಸಂಗಾತಿಯ ಜೊತೆ ಕಲಹ, ಅಪ್ರಾಮಾಣಿಕತೆಯಿಂದ ಜಯ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 : 58 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:31 – 14:08, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:54 – 12:31
ಮೇಷ ರಾಶಿ: ಉದ್ದೇಶ ಶುದ್ಧವಿರುವ ಕಾರ್ಯಕ್ಕೆ ಅನೇಕರ ಸಹಕಾರ ಲಭ್ಯವಾಗುವುದು. ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಒಳ್ಳೆಯ ಸುದ್ದಿಯನ್ನು ಇರುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ಅದು ಕೊನೆಗೊಳ್ಳುತ್ತದೆ. ಬಂದ ಕಳಂಕವನ್ನು ಯಾವುದಾರೂ ರೀತಿಯಲ್ಲಿ ತೊಳೆಯುವ ಪ್ರಯತ್ನ ಮಾಡುವಿರಿ. ಕೆಲಸದಲ್ಲಿ ಒತ್ತಡ ತಕ್ಷಣ ಉಂಟಾಗಬಹುದು ಆದರೆ ನಿರ್ವಹಿಸಬಹುದಾದ ಮಟ್ಟದಲ್ಲಿದೆ. ಸಹೋದ್ಯೋಗಿಗಳ ಸಹಕಾರಕ್ಕೆ ಬೇಸರ. ಆರ್ಥಿಕ ಚಟುವಟಿಕೆಗಳಲ್ಲಿ ನಿಷ್ಠೆ ಅಗತ್ಯ. ಕುಟುಂಬದ ಮಾತುಗಳಿಗೆ ಗೌರವ ನೀಡಿ. ಮನಸ್ಸಿನಲ್ಲಿ ಶಾಂತಿ ಕಾಣಬಹುದು. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ನೀವು ಒಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಿರಿ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ನಂಬಿಕೆಯಲ್ಲಿ ಪಕ್ವತೆ ಇರಲಿದೆ.
ವೃಷಭ ರಾಶಿ: ಅಪರಿಪೂರ್ಣ ದಾಖಲೆಯಿಂದ ಸರ್ಕಾರದ ಕೆಲಸವು ಆಗದು. ಇಂದು ಯಾರದ್ದೋ ಮಾತನ್ನು ಕೇಳಿ ಕೆಲಸವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಎಲ್ಲ ವಿಷಯಗಳಲ್ಲಿ ಸ್ಪಷ್ಟತೆಯೊಂದಿಗೆ ನಡೆದುಕೊಳ್ಳಿ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಕಾಣಬಹುದು. ಆದರೂ ಕೆಲವು ಕೆಲಸಗಳಲ್ಲಿ ವಿಳಂಬ ಸಂಭವಿಸಬಹುದು. ಉತ್ಸಾಹವಿಲ್ಲದಂತೆ ಇದ್ದರೂ ಕೆಲಸಗಳು ಒಂದರಹಿಂದೆ ಬರುತ್ತಲೇ ಇರುವುದು. ಹಿರಿಯರಿಂದ ಮಾರ್ಗದರ್ಶನ ಒಳಿತು. ಮಿತ್ರರೊಂದಿಗೆ ಮನೋರಂಜನೆಯ ಕಾಲ ಕಳೆಯಬಹುದು. ನಿಮಗೆ ಅಪಾಯವನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಿದರೆ, ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ನಿಮ್ಮನ್ನು ಆಡಿಕೊಳ್ಳುವರು. ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ.
ಮಿಥುನ ರಾಶಿ: ಪರರ ಗೌಪ್ಯತೆಯನ್ನು ಸಿಟ್ಟಿನಿಂದ ಹೊರಹಾಕುವರಿ. ನಿಮ್ಮಲ್ಲಿವರ ಅವಗುಣಗಳನ್ನು ನೀವೇ ಅರ್ಥ ಮಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಪ್ರಾಮಾಣಿಕ ಪ್ರಯತ್ನ ಯಶಸ್ಸಿಗೆ ದಾರಿ ಮಾಡಿಕೊಡಲಿದೆ. ಲಘು ಆರೋಗ್ಯ ಸಮಸ್ಯೆ ತೊಂದರೆ ಮಾಡಬಹುದು. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಾಗಲಿವೆ. ಹಣಕಾಸಿನಲ್ಲಿ ನಿರ್ವಹಣಾ ಜಾಣ್ಮೆ ಅಗತ್ಯ. ಸಹೋದರರೊಂದಿಗೆ ಮಾತುಕತೆ ಎಚ್ಚರಿಕೆಯಿಂದ ಇರಲಿ. ಜೀವನೋಪಾಯದ ಕ್ಷೇತ್ರದಲ್ಲಿ ನೀವು ಯಾವುದೇ ಹೊಸ ಪ್ರಯತ್ನವನ್ನು ಮಾಡುತ್ತಿದ್ದರೆ, ಅದು ಇಂದು ಫಲ ನೀಡುತ್ತದೆ. ನೀವು ಅಧಿಕಾರದ ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯೇ ಹೆಚ್ಚಾಗುವುದು. ನಿಮ್ಮ ಗುರಿಯನ್ನು ಸರಿಯಾಗಿ ನಿರ್ಧರಿಸಿಕೊಳ್ಳಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು.
ಕರ್ಕಾಟಕ ರಾಶಿ: ಸಂಗಾತಿಯ ಸಂಗತಿಗಳಿಗೆ ಬೆಲೆ ಹಾಗೂ ಸಮಯವನ್ನು ಕೊಡಬೇಕು. ಇಂದ ನಿಮಗೆ ಯಾರೋ ಮಾಡಿದ ತಪ್ಪಿಗೆ ನೀವು ತಲೆತಗ್ಗಿಸುವಂತೆ ಆಗುತ್ತದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಕರ್ಮದ ನಡುವೆ ಸಮತೋಲನ ಅಗತ್ಯ. ಕೆಲಸದಲ್ಲಿ ಹೊಸ ಅವಕಾಶಗಳು ಬರಬಹುದು. ಧೈರ್ಯದಿಂದ ಮಾತಾಡುವುದು ಉತ್ತಮ. ಸುಳ್ಳು ಸುದ್ದಿಗಳಿಗೆ ಮಾರುಹೋಗುವಿರಿ.ತ ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ. ಹಣಕಾಸಿನಲ್ಲಿ ತಾತ್ಕಾಲಿಕ ಒತ್ತಡ. ಮಕ್ಕಳು ನಿಮ್ಮನ್ನು ಪ್ರೇರೇಪಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವರು. ಕಿರಿಯರಿಂದ ನೀವು ಸಲ್ಲದ ಮಾತುಗಳನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸುವಿರಿ.
ಸಿಂಹ ರಾಶಿ: ಇನ್ನೊಬ್ಬರ ಅಂತಸ್ತನ್ನು ನೋಡಿ ಸಮಾಧಾನಗೊಳ್ಳುವಿರಿ. ನೀವು ಇಂದು ಯಾವುದೋ ವಿಷಯಕ್ಕೆ ಬೇರೆಯವರ ಬಗ್ಗೆ ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಯನ್ನು ಒಡೆಯುವಿರಿ. ಇದರಿಂದ ನೆಮ್ಮದಿ, ಸಂತೋಷಗಳು ತಾನಾಗಿಯೇ ಬರುವುವು. ಕೆಲಸದ ಸ್ಥಳದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಕೊಡಬೇಕು. ಹಳೆಯ ಸಮಸ್ಯೆ ಮತ್ತೆ ಎದುರಾಗಬಹುದು. ಧೈರ್ಯದಿಂದ ನಿಭಾಯಿಸಿದರೆ ಪ್ರಯೋಜನ ಸ್ನೇಹಿತರ ಸಲಹೆ ಉಪಯುಕ್ತ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ನಿಮಗೆ ಹಿಡಿಸದ ವ್ಯವಹಾರವನ್ನು ಕಠೋರವಾಗಿ ಠೀಕಿಸುವಿರಿ. ನಿಮ್ಮ ಅಭಿಪ್ರಾಯ ಭೇದವು ಮನಃಶಾಂತಿಯನ್ನು ಕೆಡಿಸುವುದು. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಯಾವುದೂ ಅಂತ್ಯವಲ್ಲ. ಮತ್ತೊಂದರ ಆರಂಭವೂ ಆಗಬಹುದು.
ಕನ್ಯಾ ರಾಶಿ: ಆಪತ್ತಿನ ಕಾಲಕ್ಕೆ ಬೇಕಾಗುವಂತೆ ಹಣದ ಸಂಗ್ರಹವಾಗಲಿದೆ. ನೀವು ಚೆನ್ನಾಗಿ ಮಾತನಾಡುತ್ತೀರೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ಮನಸ್ತಾಪವು ಆಸ್ತಿ ವಿಭಜನೆಯವರೆಗೆ ಹೋಗಬಹುದು. ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಬಗೆಯನ್ನು ಚಿಂತಿಸಿ. ಸಹೋದ್ಯೋಗಿಗಳಿಂದ ಮೆಚ್ಚುಗೆ. ಹಣಕಾಸು ನಿರ್ವಹಣೆಯಲ್ಲಿ ಯಶಸ್ಸು ಸಿಗಲಿದೆ. ಅತಿಯಾದ ಅಸೆಯನ್ನು ಪೂರೈಸಿಕೊಳ್ಳಲಾಗದು. ಮಕ್ಕಳ ಶಿಕ್ಷಣದ ವಿಚಾರದಲ್ಲಿ ತೃಪ್ತಿ, ಸ್ನೇಹಿತರ ಜೊತೆ ಉತ್ತಮ ಸಂವಾದ. ಇಂದು ನೀವು ಕೈಯಲ್ಲಿ ಸಾಕಷ್ಟು ಹಣದಿಂದ ಸಂತೋಷವಾಗಿರುತ್ತೀರಿ. ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ.
ತುಲಾ ರಾಶಿ: ದೊಡ್ಡ ಕಾರ್ಯಕ್ರಮದ ನಿರ್ವಹಣೆ ನಿಮಗೆ ಸಿಗುವುದು. ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ನಡವಳಿಕೆಯಲ್ಲಿ ಶಿಸ್ತು ಅಗತ್ಯ. ಹಣಕಾಸಿನಲ್ಲಿ ಸ್ವಲ್ಪ ಚಿಂತೆಗಳು ಎದುರಾಗಬಹುದು. ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಕೆಲವರಿಂದ ಅನಿರೀಕ್ಷಿತ ಸಹಾಯ ದೊರೆಯುತ್ತದೆ. ಯಾವುದೇ ವಿಚಾರಕ್ಕೆ ಮಿತವಾಗಿ ಮಾತನಾಡುವುದು ಒಳಿತು. ನಿಮ್ಮ ಮಕ್ಕಳ ಕಡೆಯವರು ಕೂಡ ಇಂದು ಬಲವಾಗಿ ಕಾಣುತ್ತಾರೆ. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ಸ್ಪರ್ಧಾತ್ಮಕ ಕ್ರಿಯೆಯಲ್ಲಿ ಸೋಲಾಗುವುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು.
ವೃಶ್ಚಿಕ ರಾಶಿ: ಭೂಮಿಯ ಮೇಲೆ ಹೂಡಿಕೆಗೆ ಕಾನೂನು ತೊಡಕು ಕಾಣಿಸುವುದು. ಇಂದು ನಿಮ್ಮ ದಿನದ ಕೆಲಸವನ್ನು ಒಮ್ಮೆ ಅವಲೋಕಿಸಿ ಅನಂತರ ಕಾರ್ಯದ ಕಡೆ ಮುನ್ನಡೆಯಿರಿ. ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಕೆಲಸದಲ್ಲಿ ನಿಖರತೆ ಅಗತ್ಯ. ಇಂದಿನ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಹಣಕಾಸಿನಲ್ಲಿ ಲಘು ವ್ಯತ್ಯಾಸವು ಚಿಂತೆಗಿಳಿಸುವುದು. ಮಕ್ಕಳ ವ್ಯವಹಾರದಲ್ಲಿ ಸಂತೋಷಕರ ಬೆಳವಣಿಗೆ. ಯಾವುದೇ ಬದಲಾವಣೆಗೆ ಸಿದ್ಧರಾಗಿರಿ. ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರಬಲ ವೈರಿಗಳನ್ನು ನೀವು ಮೆಟ್ಟಿನಿಲ್ಲುವ ಛಾತಿ ಇರಲಿದೆ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.
ಧನು ರಾಶಿ: ಇಷ್ಟವಾಗದವರ ಜೊತೆ ಹೆಚ್ಚು ಕಾಲ ಮಾತನಾಡಲಾಗದು. ಇಂದು ನಿಮ್ಮ ಮಕ್ಕಳಿಂದ ಸಂತೋಷದ ವಾರ್ತೆ ಗೊತ್ತಾಗುವುದು. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಸಮಯವನ್ನು ಬಳಸಿಕೊಳ್ಳುವುದನ್ನು ಕಲಿಯುವಿರಿ. ನಿಮ್ಮ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ, ಏಕೆಂದರೆ ಅನಂತರ ಆರೋಗ್ಯ ಸ್ವಲ್ಪ ಹದಗೆಡಬಹುದು. ಕುಟುಂಬ ಸಂಬಂಧಿ ವಿಚಾರದಲ್ಲಿ ಕೆಲಚರ್ಚೆಗಳು ನಡೆಯಬಹುದು. ಸಹೋದ್ಯೋಗಿಗಳ ಜೊತೆ ಮಾತುಗಳಲ್ಲಿ ತಾಳ್ಮೆ ಅಗತ್ಯ. ವಿದೇಶಿ ಪ್ರಯಾಣದ ಪರಿಸ್ಥಿತಿಯು ಆಹ್ಲಾದಕರ ಮತ್ತು ಲಾಭದಾಯಕವಾಗಿ ಕಾಣುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಯಾವುದಾದರೂ ಸಲಹೆಯನ್ನು ನೀಡುತ್ತಿದ್ದರೆ ಅದನ್ನು ಗಮನಿಸಿ. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು.
ಮಕರ ರಾಶಿ: ನಿಮ್ಮನ್ನು ನಂಬಿದವರಿಗೆ ಇಷ್ಟವಾಗುವಂತೆ ನಡೆಯುವಿರಿ. ಇಂದು ನಿಮ್ಮ ಕೆಟ್ಟ ಆರೋಗ್ಯವನ್ನು ಅರೆಕ್ಷಣದಲ್ಲಿ ಸರಿ ಮಾಡುವುದು ಕಷ್ಟ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಆತ್ಮವಿಶ್ವಾಸ ಕಾಪಾಡಿಕೊಳ್ಳಿ. ನಿಮ್ಮ ಲೆಕ್ಕಾಚಾರವನ್ನು ವ್ಯತ್ಯಾಸ ಆಗಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷಕರ ಕ್ಷಣಗಳು ಕಳೆಯಬಹುದು. ಮೇಲಧಿಕಾರಿಗಳ ಅಸಮಾಧಾನವನ್ನು ದೂರ ಮಾಡಿ. ಹಣಕಾಸು ಯೋಜನೆ ಹೊಸ ರೂಪ ಪಡೆಯಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಹೊಸ ಪರಿಚಯದಿಂದ ಲಾಭವಾಗಲಿದೆ. ಇಂದು ನೀವು ಶುಭ ಕಾರ್ಯಗಳನ್ನು ಪ್ರಚಾರ ಮಾಡುವಲ್ಲಿ ಪಾಲ್ಗೊಳ್ಳುವ ಸೌಭಾಗ್ಯವನ್ನು ಪಡೆಯುತ್ತೀರಿ. ಅತಿಯಾದ ಉತ್ಸಾಹ, ನಂಬಿಕೆಯಿಂದ ನೀವು ತೊಂದರೆಗೆ ಸಿಲುಕುವಿರಿ. ನಿಮ್ಮ ಮಾರ್ಗವು ನೇರವಾಗಿರಲಿ. ಜೊತೆಗಾರರು ನೀವು ಮಾಡುವ ಕಾರ್ಯಕ್ಕೆ ನಿರುತ್ಸಾಹ ತೋರಿಸುವರು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ.
ಕುಂಭ ರಾಶಿ: ಪ್ರತಿಷ್ಠಿತ ಸಂಸ್ಥೆಯಿಂದ ನಿಮಗೆ ಕರೆ ಬಂದು ಖುಷಿಯಾಗಲಿದೆ. ಇಂದು ಉದ್ಯೋಗದಲ್ಲಿ ಹತ್ತಾರು ಕೆಲಸಗಳು ಒಮ್ಮೆ ಬಂದು ಬೀಳಬಹುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ನಿಮ್ಮ ಉತ್ಸಾಹ ಉಳಿದಂತೆ ನೋಡಿಕೊಳ್ಳಿ. ಯತ್ನಿಸಿದ ಕೆಲಸಗಳಲ್ಲಿ ಹೆಚ್ಚಿನ ಪ್ರಯೋಜನ ದೊರೆಯಬಹುದು. ಸ್ನೇಹಿತರಿಂದ ಸಹಾಯ ಲಭ್ಯವಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವಿರಿ. ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ತಾಳ್ಮೆ ತಾಳಿದರೆ ಯಶಸ್ಸು ಖಚಿತ. ಯಾವುದೇ ಮೈತ್ರಿಗಳಿದ್ದರೆ ಅವುಗಳಿಂದ ಇಂದು ನೀವು ಲಾಭ ಪಡೆಯಬಹುದು. ನಿಮ್ಮ ಮನಶ್ಚಾಂಚಲ್ಯವನ್ನು ಕಡಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು.
ಮೀನ ರಾಶಿ: ಕೆಟ್ಟವರಿಂದ ಕೆಟ್ಟ ಅನುಭವವೇ ಆಗಲಿದೆ. ಇಂದು ನಿಮ್ಮಲ್ಲಿರುವ ತಿಳಿವಳಿಕೆಯ ಜೊತೆ ನಿಮ್ಮ ಪ್ರಯತ್ನವೂ ಯಶಸ್ಸಿನ ಮೆಟ್ಟಿಲೇರಲು ಸಹಕಾರಿ. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟಿನಿಂದ ಇನ್ನಷ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ಮುಂದಾಳುತ್ವ ವಹಿಸಿದರೆ, ನೀವೊಬ್ಬರೇ ಕೊನೆಗೆ ಉಳಿಯುವುದು. ತಾತ್ಕಾಲಿಕ ತೀರ್ಮಾನಗಳು ದೀರ್ಘಾವಧಿಯಲ್ಲಿ ಲಾಭಕಾರಿಯಾಗಬಹುದು. ನವೀನ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ಉತ್ತಮ ಸಹಕಾರ ಕಂಡುಬರಲಿದೆ. ಕುಟುಂಬದಲ್ಲಿ ಮಧುರತೆ ಹೆಚ್ಚುತ್ತದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಅದು ನಿಮ್ಮನ್ನು ಸ್ವಲ್ಪ ಚಿಂತಿತರನ್ನಾಗಿ ಮಾಡುತ್ತದೆ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಸಹಕಾರದ ಮನೋಭಾವವು ನಿಮ್ಮ ಮನಸ್ಸಿನಲ್ಲಿ ಇರುವುದು.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1