Horoscope Today April 27 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಶುಭ ? ಯಾವ ರಾಶಿಗೆ ಅಶುಭ?

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಪರಿಘ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:56 ರ ವರೆಗೆ, ಯಮಘಂಡ ಕಾಲ 14:05 ರಿಂದ 15:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:13 ರಿಂದ 07:47 ರ ವರೆಗೆ

ಮೇಷ ರಾಶಿ :ನೀವು ಎಲ್ಲ ಕಾರ್ಯವನ್ನು ಪಾರದರ್ಶಕತೆಯಿಂದ ಇರಲು ಬಯಸುವಿರಿ.‌ ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮವಾದ ಮಾರ್ಗಾನ್ವೇಷಣೆಯಲ್ಲಿ ಇರಿ. ವೈದ್ಯರ ಬೇಟಿಯಿಂದಾಗಿ ನಮ್ಮ ಬಹುದಿನಗಳಿಂದ ಇದ್ದ ವ್ಯಾಧಿಯು ನಾಶವಾಗುವುದು. ನಿಮ್ಮ ಕೆಲಸದ ಪರಿಣತಿಯಿಂದ ಜವಾಬ್ದಾರಿಗಳು ಹೆಚ್ಚುವುದು. ಹಣದ ಹರಿವು ನಿಮ್ಮ ಉತ್ಸಾಹವನ್ನು ಕುಂಠಿತಗೊಳಿಸದು. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಯಾರಿಗೂ ಉಚಿತ ಸಲಹೆ ಬೇಡ.

ವೃಷಭ ರಾಶಿ :ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ತಂದೆಯಿಂದ ಧನವು ವಿಳಂಬವಾಗಿ ಬರಬಹುದು. ಅನ್ಯರ ಕುಮ್ಮಕ್ಕಿನಿಂದ ನ್ಯಾಯಾಲಯದ ಅಲೆದಾಟವನ್ನು ಮಾಡಿ ಹಣವನ್ನು ವ್ಯರ್ಥಮಾಡಿಕೊಳ್ಳಬೇಡಿ. ಪೂರ್ವಪರಿಚಿತರು ನಿಮ್ಮ ಭೇಟಿ ಮಾಡಿಯಾರು. ದಿನಚರಿಯಲ್ಲಿ ಆದ ವ್ಯತ್ಯಾಸದಿಂದ ಆರೋಗ್ಯವು ಕೆಡಬಹುದು. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಹಳೆಯದನ್ನು ಹೊಸತನ್ನಾಗಿ ಮಾಡವ ಬಗ್ಗೆ ಯೋಚಿಸುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ‌ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ :ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರಡ ಕಡೆ ಹೋಗುವುದು ಅನಿವಾರ್ಯ ಆಗಬಹುದು. ತಂದೆಯಿಂದ ಯಾವುದೋ ಕಾರ್ಯಕ್ಕೆ ಧನವನ್ನು ನಿರೀಕ್ಷಿಸುವಿರಿ. ನಿಮ್ಮ ವಿದ್ಯಾರ್ಥಿಗಳ ಶುಭವಾರ್ತೆಯಿಂದ‌ ನಿಮಗೆ ಖುಷಿಯಾಗಲಿದೆ. ಸಾಮಾಜಿಕ ಕಾರ್ಯದಿಂದ ಗೌರವವನ್ನು ಪಡೆಯಲಿದ್ದೀರಿ. ಸಹೋದರ ನಡುವೆ ನಡೆಯುತ್ತಿದ್ದ ಶೀಲತಲ ಸಮರವು ಇಂದು ಸ್ಫೋಟವಾಗಬಹುದು. ಮಧ್ಯವರ್ತಿಗಳ ಸಹಾಯದಿಂದ ಶಾಂತವಾಗಲಿದೆ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು. ಸಂಗಾತಿಯ ಖರ್ಚನ್ನು ನಿಭಾಯಿಸುವ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು.

ಕಟಕ ರಾಶಿ :ಇಂದು ನೀವು ಕಛೇರಿಯ ಕಾರಣಕ್ಕೆ ಪರ ಊರಿಗೆ ಹೋಗಬೇಕಾಗಿ ಬರಬಹುದು. ಹಸಿವಿನಿಂದ ನಿಮಗೆ ಇಂದು ಕಷ್ಟವಾಗುವುದು. ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಉತ್ತಮವಾದ ಫಲವೇ ನಿಮಗಾಗು ಕಾಯುತ್ತಿರುವುದು. ಕೃಷಿಯಲ್ಲಿ ನಿಮ್ಮ ಪ್ರಗತಿಯನ್ನು ಕಾಣಬಹುದಾಗಿದೆ. ವ್ಯಾಪರದಲ್ಲಿ ನಷ್ಟವನ್ನು ಅನುಭವಿಸಬೇಕಾಗಿಬರಬಹುದು. ವಿಘ್ನನಿವಾರಕನಿಗೆ ನಮಸಿ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆಯು ಹೆಚ್ಚಾಗುವುದು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು.

ಸಿಂಹ ರಾಶಿ :ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎನಿಸುವುದು. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಸರ್ಕಾರಿ ಕೆಲಸಗಳಿಗೆ ಓಡಾಟ‌ ಮಾಡುವಿರಿ. ಅಪ್ತರ ಮೇಲೆ ಅನುಮಾನವಿದ್ದು ಅದನ್ನು ಬಹಳ ಚಾತುರ್ಯದಿಂದ ನಿಭಾಯಿಸುವಿರಿ. ಅತಿಯಾಗಿ ಅನಾರೋಗ್ಯವು ಉಂಟಾದೀತು. ಪರಸ್ಥಳವಾಸವು ಎದುರಾಗಬಹುದು. ರಾಜಕಾರಣವನ್ನು ವೃತ್ತಿಯಾಗಿ ನೀವು ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು.

ಕನ್ಯಾ ರಾಶಿ :ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಮರ್ಯಾದೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳುವಿರಿ. ಇಂದು ಮನೆಗೆ ಅತಿಥಿಗಳ ಆಗಮನವಾಗಲಿದೆ. ಇಂದು ನಿಮ್ಮನ್ನು ಕಂಡರೆ ಸಮಸ್ಯೆಗಳು ಬಂದಂತೆ ಕಾಣಬಹುದು. ತಾಳ್ಮೆ ಬೇಕು. ಸಮಯವು ಎಲ್ಲವನ್ನೂ ಸರಿ ಮಾಡುತ್ತದೆ. ನೀವಾಗಿಯೇ ಕೆರೆದು ಮಾಯದ ಹುಣ್ಣನ್ನು ಮಾಡಿಕೊಳ್ಳಬೇಡಿ. ಕೇವಲ‌ ಕೊರತೆಯನ್ನು ನೀವು ಹೆಚ್ಚು ಚಿಂತಿಸುವಿರಿ. ವ್ಯಾಪರದ ನಷ್ಟಕ್ಕೆ ಸಮಸ್ತ ತಂತ್ರವನ್ನು ಮಾಡುವಿರಿ. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ನಿಮ್ಮ ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು.

ತುಲಾ ರಾಶಿ :ದೇಹಾಯಾಸದಿಂದ ವಿಶ್ರಾಂತಿಯನ್ನು ಪಡೆಯಬೇಕಾಗಿ ಬರಬಹುದು. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡಲಿದ್ದೀರಿ. ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಒತ್ತಡವಿದ್ದರೂ ಯುಕ್ತಿಯನ್ನು ಕಾರ್ಯವನ್ನು. ಇಂದು ನಿಮ್ಮ ಪರೀಕ್ಷಿಯೆ ಕಾಲವಾಗಿರುವುದು. ಹಣವನ್ನು ಬಹಳ ಗೌಪ್ಯವಾಗಿ ಇಟ್ಟುಕೊಳ್ಳುವಿರಿ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು. ಹಳೆಯ ಖಾಯಿಲೆಗೆ ಔಷಧವು ಸಿಗದೇ ಹೋಗಬಹುದು. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆಯಿರಿ.

ವೃಶ್ಚಿಕ ರಾಶಿ :ಮುಂದೆ ಆಗಬೇಕಾಸ ಕೆಲವು ಕಾರ್ಯಗಳ ನಿರ್ಧಾರವು ಮಾಡುವಿರಿ. ದೂರಪ್ರಯಾಣವು ನಿಮಗೆ ಕಷ್ಟವಾಗಬಹುದು. ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಬಂಧುಗಳ ಆಗಮನ ನಿಮಗೆ ಕಿರಿಕಿರಿಯನ್ನು ತರಬಹುದು. ಕರ್ಮಗಳು ನ್ಯಾಯೋಚಿತವಾಗಿ ಇರಲಿ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ನಟರಿಗೆ ಅವಕಾಶವು ಸಿಗಲಿದೆ. ಎಲ್ಲ ಘಟನೆಗಳನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಾಗದು.

ಧನು ರಾಶಿ :ಯಾವುದೇ ಒಪ್ಪಂದವನ್ನು ಮಾಡುವಾಗಲೂ ಅನುಭವಿಗಳ ಜೊತೆ ಚರ್ಚಿಸಿ. ಭೂಮಿಯ ವ್ಯವಹಾರವು ನಿಮಗೆ ಲಾಭವನ್ನು ತರುವುದು. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಇಂದಿನ ಹಗಲು ನಿಮಗೆ ನಿಧಾನವಾಗಿ ಇರುವಂತೆ ಅನ್ನಿಸಬಹುದು. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ಪ್ರೇಮದ ವಿಚಾರಕ್ಕೆ ನಿಮ್ಮ ಮನಸ್ಸು ಕರಗುವುವುದು‌.

ಮಕರ ರಾಶಿ :ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾಗುವುದು. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಸಮಯವನ್ನು ನಿರೀಕ್ಷಿಸುವುದು ಒಳ್ಳೆಯದು. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ. ಒಂಟಿತನವನ್ನು ಹೋಗಲಾಡಿಸಲು ಏನಾದರೂ ಮಾಡುವಿರಿ.

ಕುಂಭ ರಾಶಿ :ನೀವು ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ಅರಿತುಕೊಳ್ಳಲಾಗದು. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಕಛೇರಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಎಚ್ಚರಿಕೆ ಇರಲಿ. ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ. ಕಾಲು ಕೆರೆದುಕೊಂಡು ಯಾರೊಂದಿಗೂ ಜಗಳವಾಡಬೇಡಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಸದೀತು. ಬೇರೆಯವರು ನಿಮ್ಮನ್ನು ಹೀಗಳೆಯಬಹುದು.

ಮೀನ ರಾಶಿ :ಇಂದು ನಿಮ್ಮ ಮನಸ್ಸಿಗೆ ಶಾಂತಿಯೂ ನೆಮ್ಮದಿಯೂ ಇರುತ್ತದೆ. ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಧಾರ್ಮಿಕ ವಿಚಾರದಲ್ಲಿ ಭಕ್ತಿ ಇರದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ.

Source : https://tv9kannada.com/horoscope/horoscope-today-april-27-2024-and-astrology-prediction-for-aries-to-pisces-in-kannada-rbj-822161.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *