Horoscope Today June 13, 2024: ಈ ರಾಶಿಯವರು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮಘಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 2:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಮೇಷ ರಾಶಿ: ಇಂದಿನ‌ ನಿಮ್ಮ ಅವಸರವಸರದ ಕಾರ್ಯಗಳಿಂದ ಜೊತೆಗಾರರಿಗೆ ಕಷ್ಟವಾಗುವುದು. ನಿಮ್ಮ ಉದ್ಯೋಗವು ಅನ್ಯರ ಪಿತೂರಿಯಿಂದ ನಷ್ಟವಾಗಬಹುದು. ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ‌. ಮೇಲಧಿಕಾರಿಗಳನ್ನು ಮೆಚ್ಚಿಸಲು ಹೋಗಿ ನಿಮ್ಮ ಸಮಯವನ್ನು ವ್ಯರ್ಥಮಡಿಕೊಳ್ಳುವಿರಿ. ಅದರತ್ತ ಗಮನವಿರಲಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಅನ್ಯರ ಮೂದಲಿಕೆಗೆ ಸಿಕ್ಕುವಿರಿ. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ಯಾರನ್ನೂ ಸರಿಯಾಗಿ ಊಹಿಸಲಾರಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ನಿಮ್ಮನ್ನು ನೀವೇ ಒತ್ತಡದಲ್ಲಿ ಸಿಲುಕಿಸಿಕೊಂಡು ಸಮಯವಿಲ್ಲದಂತೆ ವರ್ತಿಸುವಿರಿ.

ವೃಷಭ ರಾಶಿ: ಮಾಡಿಕೊಂಡ ಹೊಂದಾಣಿಕೆಯಿಂದ ನಿಮಗೆ ಬೇಸರವಾಗುವುದು. ಹೊಸತನ್ನು ಹುಡುಕಲು ಆರಂಭಿಸುವಿರಿ. ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ ಮಾಡುವುದು ಸರಿಕಾಣದು. ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ಕ್ಲೇಶವು ಬರಬಹುದು. ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿ ಅಗೌರವವನ್ನು ತರಬಹುದು. ತನ್ನದು ಇಷ್ಟೇ ಸಾಮರ್ಥ್ಯ ಎಂಬ ತೀರ್ಮಾನಕ್ಕೆ ಬರುವಿರಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿರುವುದು. ಉದ್ಯೋಗಿಗಳು ಪರಿಶ್ರಮವನ್ನು ಬಿಟ್ಟು ಲಾಭ ಗಳಿಸಲು ಬೇರೆ ದಾರಿ ಇರದು. ಯಾರನ್ನೂ ಅನವಶ್ಯಕವಾಗಿ ದೂರಬೇಡಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು.

ಮಿಥುನ ರಾಶಿ: ಕುಟುಂಬದಲ್ಲಿ ಬರುವ ಮಾತಿಗೆ ನೀವು ಪ್ರತಿಕ್ರಿಯೆ ಕೊಡುವುದು ಬೇಡ. ನಂಬಿಕೆ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಸಹೋದರ ಜೊತೆ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಪ್ರಶಂಸೆಯನ್ನು ಇಷ್ಟಪಡುವ ನೀವು ಯಾರೂ ಪ್ರಶಂಸಿಸದಿದ್ದರೆ ಬೇಸರಿಸುವಿರಿ. ಊರಿನಲ್ಲಿ ನಿಮ್ಮ ಬಗ್ಗೆ ಅತ್ಯಂತ ಗೌರವವಿರಲಿದೆ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ನಿಮಗಿರಲಿದೆ. ಉತ್ತಮವಾದ ಸಂಜೆಯನ್ನು ನೀವು ಸ್ನೇಹಿತರ ಜೊತೆ ಕಳೆಯುವಿರಿ. ವಾಹನಭೀತಿಯಿಂದ ನೀವು ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು. ಒಳ ಜಗಳದಿಂದ ನಿಮಗೆ ಎಲ್ಲ ಕಾರ್ಯದಲ್ಲಿ ತೊಂದರೆಯಾಗುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು.

ಕಟಕ ರಾಶಿ: ನಿಮ್ಮ ಆದಾಯದ ಮೂಲವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ಕೇಳಬಹುದು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ವ್ಯವಹಾರದಿಂದ ಅರ್ಧಕ್ಕೆ ಕೈಬಿಡುವ ಸಾಧ್ಯತೆ ಇದೆ. ಅನಗತ್ಯ ತಿರುಗಾಟ, ಖರ್ಚುಗಳು ಜೀವನಕ್ಕೆ ದಿಕ್ಕು ಸಿಗಬಹುದು. ನಿಮ್ಮ ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು. ಬೇಕಾದುದನ್ನು ಕೇಳಿ ಪಡೆಯಿರಿ. ಭೂಮಿಯ ವ್ಯವಹಾರವು ಬಹಳ ಕಷ್ಟವೆನಿಸಿ ಬಿಡುವ ಸಾಧ್ಯತೆ ಇದೆ. ಆಪ್ತರನ್ನು ಕಳೆದುಕೊಳ್ಳಬೇಕಾಗುವುದು. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು.

ಸಿಂಹ ರಾಶಿ: ಇಂದು ಸಣ್ಣ ಮೊತ್ತವಾದರೂ ಅದನ್ನು ಉಳಿಸುವ ಬಗ್ಗೆ ಯೋಚಿಸುವಿರಿ‌. ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಹಿತೈಷಿಗಳನ್ನು ದೂರಮಾಡಿಕೊಳ್ಳುವ ಸಾಧ್ಯತೆ ಇದೆ. ಈ ವಿಷಯಕ್ಕೆ ಮನೆಯಲ್ಲಿ ತಂದೆಯ ಜೊತೆ ಮಾತುಕತೆಗಳು ನಡೆಯಬಹುದು. ಸಂಗಾತಿಯಿಂದ ಆದ ಅಪಮಾನವನ್ನು ಸಹಿಸಲಾರಿರಿ. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು. ನಿಮ್ಮ ಮಾರ್ಗದರ್ಶನ ಯಾರಿಗಾದರೂ ಬೇಕಾದೀತು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಉನ್ನತ

ಕನ್ಯಾ ರಾಶಿ: ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ. ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಅನಿರೀಕ್ಷಿತವಾಗಿ ಹಣ ಬೇಕಾಗಿದ್ದು ಮಿತ್ರನಿಂದ ಹಣವನ್ನು ಪಡೆದು ಸದ್ಯದ ಸಂಕಟವನ್ನು ಸರಿಮಾಡಿಕೊಳ್ಳುವಿರಿ. ನಿಮ್ಮ ವಸ್ತುಗಳ ಹುಡುಕಾಟದಲ್ಲಿ ಸಮಯ ಕಳೆಯುವಿರಿ. ಇಲ್ಲವಾದರೆ ಅದಕ್ಕೆ ಅಧಿಕವಾದ ಹಣವು ವ್ಯಯವಾದೀತು. ಕರ್ತವ್ಯವನ್ನು ಬಿಡಸೇ ನಿರ್ವಹಿಸಿ. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ. ಅಸಾಧ್ಯ ಎನಿಸಿರುವುದನ್ನು ಬಲವಂತವಾಗಿ ಮಾಡುವುದು ಬೇಡ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ.

ತುಲಾ ರಾಶಿ: ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳುರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ನೂತನ ಗೃಹನಿರ್ಮಾಣವನ್ನು ಮಾಡಲು ಹೋಗಿ ನಷ್ಟವನ್ನೇ ಅನುಭವಿಸುವಿರಿ. ನಿಮ್ಮನ್ನು ಯಾರಾದರೂ ವೀಕ್ಷಿಸುತ್ತಿರಬಹುದು. ಇದರಿಂದ ಮೋಸ ಹೋಗುವ ಸಾಧ್ಯತೆ ಇದೆ.‌ ವ್ಯಾಪಾರದಲ್ಲಿ ಚೇತರಿಕೆಯನ್ನು ಇಂದು ಕಾಣಬಹುದಾಗಿದೆ. ಜನರೊಡನೆ ವ್ಯಾವಹಾರಿಕವಾದ ಬಾಂಧವ್ಯವು ಚೆನ್ನಾಗಿರಲಿದೆ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಹಿರಿಯರ ಸೇವೆಯನ್ನು ಕೆಲಸವೆಂದು ಮಾಡದೇ ಕರ್ತವ್ಯವೆಂದು ಮಾಡಿ. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ. ದಾಖಲೆಗಳ ಬಗ್ಗೆ ಎಚ್ವರಿಕೆ ಅಗತ್ಯ. ವಿರುದ್ಧ ವಂಚನೆಯ ಆರೋಪವು ಬರಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.

ವೃಶ್ಚಿಕ ರಾಶಿ: ಸ್ವಾಭಿಮಾನವನ್ನು ಮರೆತು ನೀವು ಜೀವನ ಸಾಗಿಸುವುದು ಕಷ್ಟವಾದೀತು. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ಸಂಗಾಯನ್ನು ಹೊರಗೆ ಕರೆದುಕೊಂಡುಹೋಗುವ ಸನ್ನಿವೇಶ ಬರಬಹುದು. ಓಡಾಟದ ಸುಸ್ತು ಅಧಿಕವಾಗಲಿದೆ. ಯಾರ ಮೇಲಾದರೂ ನಂಬಿಕೆಯನ್ನು ಇಡುವಾಗ ಮುನ್ನೆಚ್ಚರೊಕೆ ಇರಲಿ. ಪ್ರಣಯ ಪ್ರಸಂಗದಲ್ಲಿ ಅನಿರೀಕ್ಷಿತ ತಿರುವುಗಳು ಇರಬಹುದು. ದುಃಖವನ್ನೂ ಅನುಭವಿಸುವ ಸಂಗತಿಗಳು ಬರಬಹುದು. ಅದೃಷ್ಟವು ಕೈಕೊಡುವ ಸಾಧ್ಯತೆ ಇದೆ. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು.

ಧನು ರಾಶಿ: ನೀವು ಕಾರ್ಯದ ಕಾರಣ ಸಹೋದ್ಯೋಗಿಗಳ ಜೊತೆ ದೂರ ಪ್ರಯಾಣಮಾಡಬೇಕಾಗುವುದು. ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಪ್ರತಿಭೆಯ ಪ್ರದರ್ಶನಕ್ಕೆ ಹಿಂದೇಟು ಹಾಕುವಿರಿ. ಇಷ್ಟು ದಿನ ಸ್ತಬ್ಧವಾಗಿದ್ದ ಕುಟುಂಬವು ಆಸ್ತಿಯ ವಿಚಾರದಿಂದ ಪ್ರಕ್ಷುಬ್ಧವಾಗಲಿದೆ. ಹೆಸರು ಗಳಿಸುವ ಮಹದಾಸೆ ನಿಮಗಿರಲಿದೆ. ಹಿತಶತ್ರುಗಳಿಂದ ನಿಮ್ಮ ಯೋಜನೆ ಹಾಳಾಗುವುದು. ಯಂತ್ರದಿಂದ ಅಥವಾ ವಾಹನದಿಂದ ನಷ್ಟವಾಗಬಹುದು. ಮಕ್ಕಳಿಂದ‌ ಸಂತೋಷವಾರ್ತೆ ಬರಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಕೆಲಸದಲ್ಲಿ ಆಸಕ್ತಿ ಬರಲಿದೆ. ಮನಸ್ಸನ್ನು ಏಕಾಗ್ರಗೊಳಿಸುವತ್ತ ಗಮನಹರಿಸಿ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು.

ಮಕರ ರಾಶಿ: ನಿಮಗೆ ಇಂದು ಅವ್ಯಕ್ತ ಭಯವು ಕಾಡುವುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ. ಸ್ವಾಭಿಮಾನಿಯಾಗಿ ನೀವು ಅನೇಕ ಕಷ್ಟವನ್ನೂ ಹಸಿವನ್ನೂ ಅನುಭವಿಸುವಿರಿ. ಅನಾರೋಗ್ಯದಿಂದ ವೈದ್ಯರ ಭೇಟಿಯಾಗಲಿದ್ದೀರಿ. ಯಂತ್ರಜ್ಞರಾದ ನಿಮಗೆ ಕೆಲಸವು ಹೆಚ್ಚಾಗಬಹುದು. ಹೆಂಡತಿಯ ಕಡೆಯಿಂದ ಏನಾದರೂಉ ಕಿರಿಕಿರಿ ಉಂಟಾಗಬಹುದು‌. ನೌಕರರ ಬಗ್ಗೆ ಪ್ರೀತಿ ಇರುವುದು. ಕಛೇರಿಯಲ್ಲಿ ಸಮಾಧಾನ ತರುವ ವಿಚಾರಗಳು ಇರಬಹುದು. ಸಂಗಾತಿಯ ಜೊತೆ ಹರಟೆ ಹೊಡೆಯುವಷ್ಟು ಅವಕಾಶ ಸಿಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು.

ಕುಂಭ ರಾಶಿ: ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯೇ ಬೇರೆ. ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಇಂದು ಯಾರ ಜೊತೆಯಾದರೂ ವಾದವನ್ನು ಮಾಡಬೇಕು ಎಂದುಕೊಂಡಿರುತ್ತೀರಿ. ಸಂಧಾನದ ವಿಷಯದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಇಂದು ಸಮಯಯನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೂ ಸುಮ್ಮನಿರುವಿರಿ. ಮನೆಯಲ್ಲಿ ಇದ್ದು ಎಲ್ಲರಿಗೂ ಸಹಾಯ ಮಾಡುವಿರಿ. ಕಷ್ಟವಾದರೂ ಇಂದು ಪ್ರಯಾಣವನ್ನು ಮಾಡಲೇ ಬೇಕಾಗಬಹುದು. ಎಲ್ಲರೂ ಇಂದು ಎಂದಿನಂತೆ ಇರುವುದಿಲ್ಲ. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ.

ಮೀನ ರಾಶಿ: ನೀವು ಬಂಧುಗಳಿಂದ ಯಾವುದಾದರೂ ಸಹಾಯವನ್ನು ಬಯಸುವಿರಿ. ಇಂದು ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸುವುದೇ ಉತ್ತಮ.‌ ಅನವಶ್ಯಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಪಮಾನವಾಗ ಅದಕ್ಕೆ ಉತ್ತರಿಸಲು ಹೋಗಿ ಇನ್ನೊಂದಿಷ್ಟು ಕೆಸರನ್ನು ಮೈಗೆ ಹಚ್ಚಿಕೊಳ್ಳುವ ಕೆಲಸವಾದೀತು. ಆರ್ಥಿಕ ಸಂಕಷ್ಟಕ್ಕೆ ಇಂದೇ ಯೋಜನೆಯನ್ನು ರೂಪಿಸಿ. ಆಸ್ತಿ ವ್ಯವಹಾರದಲ್ಲಿ ದಾಯಾದಿ ಕಲಹವು ಬಗೆ ಹರಿಯದೇ ಚಿಂತೆ ಇರುವುದು. ಅನಿರೀಕ್ಷಿತ ಸುದ್ದಿಗೆ ಆತಂಕಪಡುವುದು ಬೇಡ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುತ್ತದೆ. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ.

Source : https://tv9kannada.com/horoscope/rashi-bhavishya-aries-to-pisces-2024-june-13-zodiac-signs-in-kannada-news-ggs-849230.html

Leave a Reply

Your email address will not be published. Required fields are marked *