2024 ಮೇ 21ರ ದಿನ ಭವಿಷ್ಯ: ಮಂಗಳವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ 15:42 ರಿಂದ 17:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17ರಿಂದ ಬೆಳಗ್ಗೆ10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:06ರ ವರೆಗೆ.
ಮೇಷ ರಾಶಿ :ಇಂದು ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ಅತಿಯಾದ ಚಿಂತಯನ್ನು ಮಾಡಬೇಡಿ. ಬೆಳಗಿನ ಉತ್ಸಾಹವೇ ನಿಮ್ಮ ಕಾರ್ಯಗಳನ್ನು ಪೂರೈಸುವುದು. ಅಧಿಕಾರಿಗಳ ಕಡೆಯಿಂದ ನಿಮ್ಮ ಬಗ್ಗೆ ವಿಚಾರಣೆ ಇರಬಹುದು. ಯಾವುದೇ ಆಕಸ್ಮಿಕ ಘಟನೆಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ.ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು. ಯಾವುದರಿಂದಲಾದರೂ ನಿಮಗೆ ಘಾಸಿಯಾಗಬಹುದು.
ವೃಷಭ ರಾಶಿ :ಈ ದಿನ ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ಹೊಸ ಮನೆಯ ಖರೀದಿಯೇ ನಿಮಗೆ ಉತ್ತಮ ಎನಿಸಬಹುದು. ಹೊಸ ಉದ್ಯಮವನ್ನು ಪ್ರಾರಂಭಿಸಲೂ ಯೋಚಿಸಬಹುದು. ನಿಮ್ಮ ಬಂಧುಗಳು ನಿಮ್ಮನ್ನು ಇಷ್ಟ ಪಡುವರು. ನಿಮ್ಮ ಜೊತೆ ಸಲುಗೆಯಿಂದ ಮಾತನಾಡಲು ಬಯಸುವರು. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಿದ್ಧಿಸಿದ ಗುಣವಾಗಿದೆ. ಆಲಸ್ಯವು ಸ್ವಲ್ಪವಿದ್ದರೂ ನಿಮ್ಮ ಇಂದಿನ ಕಾರ್ಯಗಳು ನಿಮ್ಮನ್ನು ಚುರುಕಾಗಿಸುತ್ತವೆ. ಯಾವುದನ್ನೂ ಕೃತಕವಾಗಿ ತೋರಿಸಲು ಹೋಗುವುದು ಬೇಡ. ಸಹಜತೆಯು ನಿಮ್ಮ ಸ್ವಭಾವವಾಗಿರಲಿ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ಪೆಟ್ಟು ಬೀಳುವುದು.
ಮಿಥುನ ರಾಶಿ :ಇಂದು ನಿಮ್ಮ ಸಂಗಾತಿಯಿಂದ ಯಾವುದೇ ಸ್ಪಂದನೆಯು ಯಾವ ವಿಚಾರಕ್ಕೂ ಸಿಗದು. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಪ್ರೀತಿಯ ಕೊರತೆಯಿಂದ ಇಬ್ಬರ ನಡುವೆ ಅಸಮಾಧಾನವಾಗಲಿದೆ. ಯಾವ ವ್ಯವಹಾರವನ್ನೂ ಬಿಟ್ಟುಕೊಡಲಾರಿರಿ. ಪಾಲುದಾರಿಕೆಯ ಉದ್ಯಮವು ಹೆಚ್ಚು ಫಲಕಾರಿಯಾಗಲಿದೆ. ಕೆಲಸದ ವಿಷಯದಲ್ಲಿ ನೀವು ಬಹಳ ಚುರುಕಾಗಿ ಇರಲಿದ್ದೀರಿ. ನಿಮ್ಮ ಜೊತೆ ಸಂವಹನವನ್ನು ಮಾಡುವವರಿಗೆ ಖುಷಿ ಸಿಗಲಿದೆ. ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಎಲ್ಲದಕ್ಕೂ ಅಡ್ಡಿಯನ್ನು ಕೊಡುವುದು ಬೇಡ. ನಿಮಗೆ ಸಿಕ್ಕಷ್ಟನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚನೆ ಇರಲಿ.
ಕಟಕ ರಾಶಿ :ನೀವು ಕುಟುಂಬದವರ ಪ್ರೀತಿಯನ್ನು ಬಹಳ ಕಾಲದ ಅನಂತರ ಅನುಭವಿಸುವಿರಿ. ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ನಿಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಲು ಇಚ್ಛಿಸುವಿರಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವ ಅಥವಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿವ ಮನಸ್ಸು ಇರಲಿದೆ. ಅನ್ಯೋನ್ಯತೆಯ ಬಗ್ಗೆ ಕಣ್ಣು ಬೀಳಬಹುದು. ಆರ್ಥಿಕತೆ ಒಂದೇ ರೀತಿಯಲ್ಲಿ ಇರಲಿದೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು.
ಸಿಂಹ ರಾಶಿ :ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಹೆಚ್ಚು ಇರಲಿದೆ. ನಿಮಗಿಷ್ಟವಾದ ಸಮಾರಂಭಕ್ಕೆ ಭೇಟಿ ಕೊಡುವಿರಿ. ಆಪ್ತರನ್ನು ಭೇಟಿಯಾಗುವಿರಿ. ನಿಮ್ಮ ವಿರುದ್ಧ ಮಾತನಾಡಿದವರಿಗೆ ಬಹಳ ವೇಗವಾಗಿ ಪ್ರತಿಕ್ರಿಯೆ ನೀಡುವಿರಿ. ಸ್ನೇಹಕ್ಕೆ ಬೆಂಬಲವನ್ನು ಕೊಡಲು ಇಚ್ಛಿಸುವಿರಿ. ನಿಮ್ಮವರಿಂದ ಇಂದು ಯಾವುದನ್ನೂ ನಿರೀಕ್ಷಿಸದೇ ಇದ್ದರೂ ತಾನಾಗಿಯೇ ಬಂದು ಒದಗುವುದು. ತಪ್ಪು ಹಾದಿಗೆ ಯಾರಿಂದಲಾದರೂ ಪ್ರೇರಣೆ ಸಿಗಲಿದೆ. ನಿಮ್ಮ ವಿವೇಕವನ್ನು ಬಳಸಿ. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ.
ಕನ್ಯಾ ರಾಶಿ :ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುಬಿರಿ. ಯಾವದೇ ತಾಳ್ಮೆಯಿಂದ ಅವುಗಳನ್ನು ತಣ್ಣಗಾಗಿಸಿ. ಹೆಚ್ಚು ಮಾತನಾಡಿ ಇನ್ನೊಂದಕ್ಕೆ ನಾಂದಿ ಹಾಡಬೇಡಿ. ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ. ಕೆಲಸದ ಆಯಾಸವು ನಿಮಗೆ ನಿದ್ರೆಯ ಬೇಗ ತರುಸುತ್ತದೆ. ಕುಟುಂಬ ಜೀವನ ಸಾಮಾನ್ಯವಾಗಿರಲಿದೆ. ಎಲ್ಲದಕ್ಕೂ ಅಡ್ಡದಾರಿಯಲ್ಲೇ ಹೋಗಬೇಕು ಎಂಬ ತೀರ್ಮಾನ ಬೇಡ. ವಿಳಂಬವಾದರೂ ತೊಂದರೆ ಇಲ್ಲ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.
ತುಲಾ ರಾಶಿ :ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ಮತ್ತೆಲ್ಲವೂ ಮಾಯವಾಗುತ್ತದೆ. ಸಾರ್ವಜನಿಕವಾಗಿ ನಿಮಗೆ ಗೌರವಗಳು ಸಿಗಲಿವೆ. ವಿದ್ಯುದುಪಕರಣದಿಂದ ಹಣವು ಖರ್ಚಾಗುವುದು. ಮಕ್ಕಳಿಂದ ಸಂತಸದ ವಾತಾವರಣ ಇರಲಿದೆ. ದಾಂಪತ್ಯದಲ್ಲಿ ಬಿರುಕು ಸರಿಯಾಗಿ ಸಂತೋಷವನ್ನು ಅನುಭವಿಸುವಿರಿ. ಓದಿನ ಕಡೆ ಮನಸ್ಸನ್ನು ಕೊಡಲಾಗದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಅತಿಯಾದ ಲೋಭವು ನಿಮ್ಮ ಕಾರ್ಯವನ್ನು ಹಾಳು ಮಾಡುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು.
ವೃಶ್ಚಿಕ ರಾಶಿ :ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚನೆಗಳು ಒಂದೊಂದಾಗಿಯೇ ಬರಬಹುದು. ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಏನಾದರೂ ಕಾರ್ಯವನ್ನು ಮಾಡುತ್ತಲೇ ಇರಿ. ನಿಮಗಿಂದು ಹೆಚ್ಚು ಜವಾಬ್ದಾರಿಯ ಕೆಲಸ ಸಿಗಲಿದೆ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ. ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ಇಷ್ಟುದಿನ ಮಾಡುತ್ತಿದ್ದವರ ಬಳಿಯಿಂದ ಹಣಕಾಸಿನ ವ್ಯವಹಾರವನ್ನು ಬದಲಾಯಿಸುವಿರಿ. ನಿಮ್ಮ ಕಾರ್ಯದ ವೇಗವು ಹೆಚ್ಚುವ ಅವಶ್ಯಕತೆ ಇದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಯಾರದೋ ಕಾರಣಕ್ಕೆ ನೀವು ಸಿಟ್ಟಗುವಿರಿ.
ಧನು ರಾಶಿ :ಇಂದು ನಿಮ್ಗೆ ಸಹೋದ್ಯೋಗಿಗಳ ಸಹಕಾರವೂ ಸಿಕ್ಕಿ ಕಛೇರಿಯ ಇಂದಿನ ಕೆಲಸವನ್ನು ಇಂದೇ ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಸಂಗಾತಿಯ ಜೊತೆ ದೂರಪ್ರಯಾಣ ಮಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಆಡಿಕೊಳ್ಳುತ್ತಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದು ಸಿಗಲಿದೆ. ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು. ಯಾರಿಗೂ ಕೆಟ್ಟದ್ದನ್ನು ಮನಸ್ಸಿನಲ್ಲಿಯೂ ಅಂದುಕೊಳ್ಳುವುದು ಬೇಡ. ನಿಮ್ಮ ಕಾರ್ಯದಲ್ಲಿ ತೊಡಗಿ. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ ಧೈರ್ಯವು ಕುಂದಬಹುದು.
ಮಕರ ರಾಶಿ :ಇಂದು ನಿಮಗೆ ಕಛೇರಿಯಲ್ಲಿ ಕೆಲವು ಸವಾಲಗಳು ಇರಲಿವೆ. ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಸಮಾಲೋಚನೆ ಮಾಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಾಲಕೊಟ್ಟ ಹಣವು ನಿಮಗೆ ಸಿಗಲಿದೆ. ನಿಮ್ಮವರು ನಿಮಗೆ ಸಹಾಯ ಮಾಡಿದಂತೆ ಕಂಡರೂ ಅದು ಸುಳ್ಳಾಗಲಿದೆ. ನೀವಿಟ್ಟ ನಂಬಕೆ ಹುಸಿಯಾಗಬಹುದು. ಇದು ನಿಮಗೆ ಬಹಳ ನೋವಾಗಲಿದೆ. ಆದರೆ ಬೇಗ ತಿಳಿಯಿತು ಎಂಬ ಸಮಾಧನ ಮಾಡಿಕೊಳ್ಳಿ. ಏಕಾಗ್ರತೆಯ ಕೊರತೆ ಕಾಣಲಿದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು.
ಕುಂಭ ರಾಶಿ :ನೀವು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಹಂತ ಹಂತವಾಗಿ ಕ್ರಮಿಸುವಿರಿ. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ನೀವು ಸದ್ಯ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದತ್ತ ಗಮನ ಹರಿಸುವುದು ಉತ್ತಮ. ಆದಷ್ಟು ಹೊರಗಿನ ತಿಂಡಿಯನ್ನು ಕಡಿಮೆ ಮಾಡಿ. ಸೋಮಾರಿತನ ಮತ್ತು ಅಸಡ್ಡೆಯಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದನ್ನು ಗಮನಿಸಿಕೊಳ್ಳಿ. ಹೊಸ ವಸ್ತುಗಳು ನಿಮಗೆ ಸಂತೋಷ ಕೊಡಲಿದ್ದು ಅದನ್ನೇ ಹೆಚ್ಚು ಬಳಸುವಿರಿ. ಪತಿಯ ಪ್ರೀತಿ ಇಂದು ಸಿಗಲಿದೆ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.
ಮೀನ ರಾಶಿ :ಇಂದು ನಿಮಗೆ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ವ್ಯವಹಾರವು ನಿಮಗೆ ನಿಜವಾಗಿಯೂ ಸಂತೋಷವನ್ನು ನೀಡಲಿದೆ. ನಿಮ್ಮನ್ನು ಸುಧಾರಿಸಲು ಉದ್ದೇಶದಿಂದ ಕೆಲವು ಶಿಸ್ತಿನ ಕ್ರಮವನ್ನು ನೀವೇ ರೂಢಿಸಿಕೊಳ್ಳುವಿರಿ. ನಿಮ್ಮ ಅಧ್ಯಯನ ಶೀಲತೆಯಲ್ಲಿ ಹಿನ್ನಡೆ ಆಗಿರುವುದು ನಿಮ್ಮ ಅರಿವಿಗೆ ಬರಲಿದೆ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದಲ್ಲಿ ಯಾವ ತೀರ್ಮಾನವೂ ಬೇಡ.