2024 ಮೇ 22ರ ದಿನ ಭವಿಷ್ಯ: ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
![](https://samagrasuddi.co.in/wp-content/uploads/2024/03/image-140.png)
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41ರಿಂದ ಬೆಳಗ್ಗೆ 9:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:29ರ ವರೆಗೆ.
ಮೇಷ ರಾಶಿ :ಇಂದಿನ ಎಲ್ಲ ಕಾರ್ಯಗಳೂ ಸಮಯ ಮೀರುವ ಸಾಧ್ಯತೆ ಇದೆ. ಅಷ್ಟಾದರೂ ನಿಮ್ಮ ಪಾಲಿನದ್ದು ಸಿಕ್ಕೆ ಸಿಗುವುದು. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ಕಛೇರಿಯಲ್ಲಿ ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ. ಶರೀರಕ್ಕೆ ಆದ ಘಾಸಿಯನ್ನಿ ಮದ್ದಿನ ಮೂಲಕ ಸರಿ ಮಾಡಿಕೊಳ್ಳಬಹುದು. ಮನಸ್ಸಿಗೆ ಬೇರೆ ರೀತಿಯಲ್ಲಿ ನೋಡುವ ಅವಶ್ಯಕತೆ ಇರಲಿದೆ. ನಿಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅವರ ಸಂಪೂರ್ಣ ಬೆಂಬಲವೂ ಸಿಗಲಿದೆ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ದಿನದ ಕಾರ್ಯವನ್ನು ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಸ್ನೇಹಿತರಲ್ಲಿ ಆದ ಬದಲಾವಣೆಯು ನಿಮ್ಮ ಗಮನಕ್ಕೆ ಬಾರದು.
ವೃಷಭ ರಾಶಿ :ಇಂದು ನಿಮ್ಮ ಬಳಿ ಯಾರಾದರೂ ಸಮಸ್ಯೆಗಳನ್ನು ಹೇಳುತ್ತ ಬರಬಹುದು. ಅದನ್ನು ಜಾಣ್ಮೆಯಿಂದ ಬಗೆ ಹರಿಸಿ. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ಉನ್ನತ ಅಧಿಕಾರಿಗಳು ನಿಮಗೆ ಆಗಬೇಕಾದ ಕೆಲಸದಲ್ಲಿ ಸಹಾಯ ಮಾಡುವರು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ಪರಿಸ್ಥಿತಿಯು ಮತ್ತೇನೋ ಆಗುವುದು. ಕಚೇರಿಯಲ್ಲಿನ ಸೂಕ್ಷ್ಮ ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು. ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ.
ಮಿಥುನ ರಾಶಿ :ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಬೇಕಾಗಬಹುದು, ಕೊಡಿ. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ನಿಮಗೆ ಅತೃಪ್ತಿಯ ಭಾವವು ಕಾಡಲಿದೆ. ಪಕ್ಕದರ ಪರಿಚಯವು ಸ್ನೇಹವಾಲಿದೆ. ಇಂದೇ ಶುಭದಿನವೆಂದು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ವಸ್ತ್ರಗಳನ್ನು ಖರೀದಿ ಮಾಡುವ ಸಂಭ್ರಮದಲ್ಲಿ ಇರುವಿರಿ. ಕಛೇರಿಯಲ್ಲಿ ಸಂತೋಷದ ವಾತಾವರಣ ಇದ್ದು ನಿಮಗೆ ಕೆಲಸವನ್ನು ಮಾಡಲು ಅನುಕೂಲವಾಗುವುದು. ಇಷ್ಟು ದಿನ ಮಾತಮಾಡದೇ ಇರುವವರು ಇಂದು ಮಾತನಾಡುವರು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ.
ಕಟಕ ರಾಶಿ :ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಅಥವಾ ಧ್ಯಾನವನ್ನು ಮಾಡುವುದು ಉತ್ತಮ. ನಿಮಗೆ ಪ್ರಿಯವಾದದ್ದನ್ನು ಪಡೆದುಕೊಳ್ಳುವಿರಿ. ಬಹಳ ಕಾಲದಿಂದ ಮಾಡುತ್ತಿರುವ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳದೇ ಸಮಸ್ಯೆ ಆದೀತು. ಆಪ್ತರ ಮಾತನ್ನು ಕೇಳಬೇಕೆಂದು ಅನ್ನಿಸಬಹುದು. ಸ್ವಾತಂತ್ರ್ಯವನ್ನು ಬಯಸುವಿರಿ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು.
ಸಿಂಹ ರಾಶಿ :ಇಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸಂಶೋಧನೆ ಮಾಡುತ್ತಿರುವವರಿಗೆ ಶುಭವಾರ್ತೆ ಇರಲಿದೆ. ಪ್ರೀತಿಪಾತ್ರರ ಜೊತೆ ಉದ್ವೇಗದಿಂದ ಮಾತನಾಡಿ ದೂರ ಮಾಡಿಕೊಳ್ಳುವಿರಿ. ನಿಮ್ಮ ಹಾಸ್ಯ ಸ್ವಭಾವವು ಜನರಿಗೆ ಮೆಚ್ಚುಗೆ ಆಗಲಿದೆ. ಸಹೋದ್ಯೋಗಿಗಳ ಜೊತೆ ಸಣ್ಣ ವಿವಾದ ಆಗಬಹುದು. ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ. ಕೆಲವು ಘಟನೆಗಳು ನೀವು ಅಂದಿಕೊಂಡಂತೆ ಆಗುವುದು. ಆದಾಯದ ಭಾಗವನ್ನು ದಾನ ಮಾಡುವ ಆಸೆ ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಕಲಾವಿದರಿಗೆ ಪ್ರಶಂಸೆಯು ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಜೊತೆ ಗೌರವದಿಂದ ವರ್ತಿಸಿ.
ಕನ್ಯಾ ರಾಶಿ :ನಿಮ್ಮ ವೃತ್ತಿಜೀವನವನ್ನು ಯಶಸ್ಸನ್ನು ಸಾಧಿಸಲು ಶ್ರಮವಹಿಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡಯುವಿರಿ. ಅವರಿಂದ ಮೆಚ್ಚುಗೆ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಸಂಕಷ್ಟವಾಗಲಿದೆ. ಸಂಗಾತಿಯ ಜೊತೆ ಸಮಯ ಚೆನ್ನಾಗಿರಲಿದೆ ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧವು ಮತ್ತಷ್ಟು ಆಪ್ತವಾಗಲು ಯೋಚಿಸುವಿರಿ. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದೇ ಕಲಹವಾಗುವುದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು.
ತುಲಾ ರಾಶಿ :ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಲಿದೆ. ಇಂದು ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಅನಿರೀಕ್ಷಿತ ಶುಭ ಸುದ್ದಿಗಳು ಮನೆಯಲ್ಲಿ ಸಂತೋಷವನ್ನು ಉಂಟುಮಾಡಲಿದೆ. ಪೂರ್ವಜರ ಆಸ್ತಿಯನ್ನು ಪಡೆಯುವ ಬಗ್ಗೆ ಮಾತುಕತೆಗಳು ನಡೆಯಲಿವೆ. ನಿಮ್ಮ ಪ್ರೀತಿಯಲ್ಲಿ ನೀವು ಯಾವುದೇ ಮಹತ್ವದ ಬದಲಾವಣೆ ಇಲ್ಲದೇ ಸಪ್ಪೆ ಎನಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ವಿವಾದವನ್ನು ಮಾಡುವಿರಿ. ದೂರದೂರಿಗೆ ಪ್ರಯಾಣ ಮಾಡುವ ನಿಮಗೆ ಕೆಲವು ಸಲಹೆಗಳು ಬೇಕಾಗುವುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ಅತಿಯಾದ ಮೋಹವು ಬೇಡ.
ವೃಶ್ಚಿಕ ರಾಶಿ :ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ಇದಕ್ಕಾಗಿ ಮನೆಯವರ ಜೊತೆ ಕಲಹವಾಗಬಹುದು. ಇಷ್ಟು ಬಹಳ ಸಹನೆಯಿಂದ ಇದ್ದ ನೀವು ಇಂದು ಸಹನೆಯ ಕಟ್ಟೆ ಒಡೆದುಹೋಗಲಿದೆ. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವನ್ನು ಸತತ ಪ್ರಯತ್ನದಿಂದ ಪೂರ್ಣಮಾಡುವಿರಿ. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು.
ಧನು ರಾಶಿ :ಇಂದು ನೀವು ಹೊಸ ಉತ್ಸಾಹದಿಂದ ಏನನ್ನಾದರೂ ಅಸಂಬದ್ಧ ಮಾಡಬಹುದು. ಆದಷ್ಟು ನಿಮ್ಮ ನಿಯಂತ್ರಣವನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ದಿನವು ಉತ್ತಮ. ಇಂದು ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ನಿಮ್ಮ ಸಾವಧಾನತೆಯು ಕಿರಿಕಿರಿಯನ್ನು ಇತರರಿಗೆ ಕೊಟ್ಟೀತು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು.
ಮಕರ ರಾಶಿ :ಯಾರನ್ನೋ ಅಪಹಾಸ್ಯ ಮಾಡಲು ಹೋಗಿ ನೋವನ್ನು ಕೊಡುವಿರಿ. ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಪ್ರವಾಸವನ್ನು ಮಾಡಿ ಆನಂದಿಸುವಿರಿ. ವಿದ್ಯಾರ್ಥಿಗಳು ಅಧ್ಯಯನ ಪರರಾಗಿ ಇರುವವರು. ಪರೀಕ್ಷೆಯ ಭಯವೂ ಇರಲಿದೆ. ಉದ್ಯೋಗಕ್ಕೆ ಸಂಬಂಧಿಸದಂತೆ ಸಂದರ್ಶನವಾಗಿ ಕೈತಪ್ಪುವ ಸಾಧ್ಯತೆ ಇದೆ. ವಾಹನ ಖರೀದಿಯಿಂದ ಮೋಸ ಹೋಗುವಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಯಾರದೋ ಅನುಭವವು ನಿಮ್ಮದಾಗದು. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ದೂರದೃಷ್ಟಿಯು ನಿಮ್ಮ ಚಿಂತನೆಗೆ ಇರಲಿ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಉತ್ಸಾಹವು ಇತರರಿಗೆ ಮಾರ್ಗದರ್ಶನವಾದೀತು.
ಕುಂಭ ರಾಶಿ :ನಿಮ್ಮ ಸಮಸ್ಯೆಗಳನ್ನು ತಾಳ್ಮೆಯಿಂದ ಗಮನಿಸುಕೊಂಡು. ಕೆಟ್ಟ ಸಮಯವು ಬರಬಾರದೆಂದು ಇಷ್ಟದೇವರನ್ನು ಪಾರ್ಥಿಸಿ. ನೂತನ ಗೃಹಾರಂಭದ ಕನಸು ಕಾಣಲಿದ್ದೀರಿ. ನಿಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ಇಂದು ಉತ್ಸಾಹದಿಂದ ನೀವು ಕೆಲಸವನ್ನು ಮಾಡಲು ಬಯಸುವುದಿಲ್ಲ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಹೋದರೆ ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಬೇರೆಯವರ ನಕಾರಾತ್ಮಕ ಮಾತುಗಳಿಗೆ ಕಿವಿಗೊಟ್ಟರೆ ನಿಮ್ಮ ಕೆಲಸ ಹಿಂದುಳಿಯುವುದು. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು.
ಮೀನ ರಾಶಿ :ಇಂದು ನೀವು ಅಕಾರಣವಾಗಿ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ಭವಿಷ್ಯದ ತುಂಬಾ ಆಲೋಚನೆಗಳನ್ನು ಮಾಡುವ ಅವಶ್ಯತೆ ಇಲ್ಲ. ಎಲ್ಲವನ್ನೂ ತಿಳಿದಿದ್ದರೂ ವಾದದಲ್ಲಿ ಸೋಲಬೇಕಾದ ಸ್ಥಿತಿ ಇದೆ. ವಿವಾದವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಗುರಿಯ ಸಾಧನೆಯವರೆಗೆ ಮೌನವಿದ್ದಷ್ಟೂ ಒಳ್ಳೆಯದೇ. ವಿವಾಹದ ಸಂಭ್ರಮ ಮನೆಯಲ್ಲಿ ಇರುವುದು. ಗೌರವವನ್ನು ನಿರೀಕ್ಷಿಸದಿದ್ದರೂ ನಿಮಗೆ ಇಂದು ಲಭ್ಯವಾಗಲಿದೆ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಎಲ್ಲದಕ್ಕೂ ಮಾರ್ಗದರ್ಶನ ಬೇಕು ಎನಿಸುವುದಕ್ಕಿಂತ ಸ್ವಂತವಾಗಿ ಆಲೋಚಿಸುವುದೂ ಮುಖ್ಯವಾಗುವುದು.