ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ, ಶನಿವಾರ ಸಾಧನೆಗೆ ಚುರುಕುತನ, ರಾಜಕೀಯದಲ್ಲಿ ಇಬ್ಬಂದಿತನ, ಸಹೋದ್ಯೋಗಿಗಳ ಜೊತೆ ಮೊಂಡುತನ ಇವೆಲ್ಲ ಇರಲಿವೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ – 06 – 26 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:31 – 11:03, ಯಮಘಂಡ ಕಾಲ 14:08 – 15:40, ಗುಳಿಕ ಕಾಲ 06:27 – 07:59

ಮೇಷ ರಾಶಿ: ವಿನಾಕಾರಣ ವಾಗ್ವಾದದಿಂದ ನೀವು ಬೇಸರವಾಗಬಹುದು. ಇಂದು ನಿಮ್ಮ ಹಿಂದಿನ ಶ್ರಮಕ್ಕೆ ಫಲವು ಪ್ರಾಪ್ತವಾಗಿ ಖುಷಿ ಎನಿಸುವುದು. ಜೀವನದಲ್ಲಿ ನಮಗಾಗಿ ನಾವು ಬದುಕಬೇಕೆ ಹೊರತು ಬೇರೆಯವರಿಗೋಸ್ಕರವಲ್ಲ ಎಂಬ ಯೋಚನೆ ಬರುವುದು. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೇ. ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು. ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.
ವೃಷಭ ರಾಶಿ: ನೀವು ಹಾಕಿಕೊಂಡ ಗುರಿಯನ್ನು ಆದಷ್ಟು ಬೇಗ ಮುಟ್ಟಿ. ತಪ್ಪನ್ನು ಯಾರ ಮೇಲೋ ಹಾಕುವಿರಿ. ನಿಮ್ಮ ಸ್ವಭಾವಕ್ಕೆ ಜನರು ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಜನರು ಮುತ್ತುವರು. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ಸಂಗಾತಿಯೊಡನೆ ಸಲ್ಲಾಪ ಮಾಡುವಿರಿ. ಸಂಪತ್ತು ನಿಮ್ಮ ಶ್ರಮಕ್ಕನುಸಾರ ಸಿಗಲಿದೆ. ನಿಮ್ಮ ಬರೆವಣಿಗೆಯಿಂದ, ಮಾತಿನಿಂದ ನಿಮಗೆ ಕೀರ್ತಿಯು ಲಭ್ಯ. ಇಂದು ನೀವು ಯಾರದೋ ವಿರುದ್ಧವಾಗಿ ಹೋಗುವುದು ಬೇಡ. ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳಿ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ಕಷ್ಟವಾದೀತು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಇಲ್ಲವಾದರೆ ದೇಹಾರೋಗ್ಯ ಕೆಡಬಹುದು. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮವರ ಬಗ್ಗೆ ಸರಿಯಾದ ಭಾವನೆಯು ಇಲ್ಲದೇ ಇರಬಹುದು.
ಮಿಥುನ ರಾಶಿ: ಮನಸ್ಸಿನಲ್ಲಿಯೇ ಒದ್ದಾಡುವ ನಿಮಗೆ ಹಿತವಾದ ಸಂಘದ ಬರುವುದು. ಇಂದು ದಾಂಪತ್ಯಜೀವನದಲ್ಲಿ ಬಹಳ ಗೊಂದಲವಾಗಬಹುದು. ಇನ್ಮೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಾವಧಾನತೆಯಿರಲಿ. ಸ್ನೇಹಿತರ ಜೊತೆ ಸೇರಿ ಹಣವನ್ನು ಖರ್ಚು ಮಾಡಲು ಮುಂದಾಗುತ್ತೀರಿ. ನಿಮ್ಮ ನ್ಯೂನತೆಗಳು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ಇಂದು ನಿಮ್ಮ ಪೂರ್ವಜರ, ಹಿರಿಯರ ಕಾರ್ಯಗಳು ನೆನಪಾಗುವುದು. ಸಂಗಾತಿಯ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ನಿಮ್ಮ ಮಾತುಗಳನ್ನು ಹರಿ ಬಿಡುವುದು ಬೇಡ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಆರೈಕೆಯ ಬಗ್ಗೆ ಗಮನವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ: ನಿಮಗೆ ಪ್ರತಿ ಹಂತವೂ ಪರೀಕ್ಷೆಯ ಕಾಲವಾಗಿರುತ್ತದೆ. ಇಂದು ನೀವು ಒಪ್ಪಿಕೊಂಡ ಕಾರ್ಯವನ್ನು ಬಿಡದೆ ಮುನ್ನಡೆಸು ಛಾತಿ ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಗೊತ್ತಿದ್ದೂ ಉದ್ವೇಗಕ್ಕೆ ಒಳಗಾಗಬೇಡಿ. ಸಂಗಾತಿಯ ಬಗ್ಗೆ ಅಸೂಯೆ ಬರಬಹುದು. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ಇರುವಿರಿ. ಅಧ್ಯಾತ್ಮದ ಚಿಂತನೆಯಿಂದ ನಿಮ್ಮ ಬದುಕಿನ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಯಾರನ್ನೂ ನೀವು ಪೂರ್ಣವಾಗಿ ನಂಬಲಾರಿರಿ. ಸಂಗಾತಿಯ ಬಗ್ಗೆ ಕುತೂಹಲವಿರಬಹುದು. ಸ್ಪರ್ಧೆಯಲ್ಲಿ ಸಣ್ಣ ಅಂತರದಲ್ಲಿ ಸೋಲು. ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಸ್ಥಾನ, ನೆಮ್ಮದಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ನಿಮ್ಮ ತಿಳುವಳಿಕೆ ಎಲ್ಲರೂ ಬಹಳ ಪ್ರಭಾವಿತರಾಗಬಹುದು.
ಸಿಂಹ ರಾಶಿ: ಎಲ್ಲರ ವಿರೋಧದ ನಡುವೆಯೂ ನಿಮಗೆ ಅನಿಸಿದ್ದನ್ನು ಮಾಡುವಿರಿ. ಇಂದು ಯಾರದೋ ಜೊತೆ ವ್ಯಾಪಾರದ ಕಾರಣಕ್ಕೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ನೀವು ವಾಹನವನ್ನು ಚಾಲನೆ ಮಾಡುವುದು ಬೇಡ. ಸ್ಥಿರಾಸ್ತಿಯು ಕೈ ತಪ್ಪುವ ಸೂಚನೆ ಸಿಗಲಿದ್ದು, ಏನು ಮಾಡುವ ಆಲೋಚನೆ ಬರದು. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಎಲ್ಲ ಸೋಲುಗಳನ್ನು ಪಾಠವನ್ನಾಗಿ ಸ್ವೀಕರಿಸಿ, ಸಂತೋಷವೂ ಸಿಗುವುದು. ಪುತ್ರೋತ್ಸವದ ಆನಂದ ನಿಮ್ಮ ಪಾಲಿಗಿದೆ. ನೆರೆ-ಹೊರೆಯವರ ಜೊತೆ ಕಲಹವಾಗಬಹುದು. ನೀವು ಕೊಟ್ಟ ಹಣವು ಬರಬೇಕಾದ ಕಡೆಯಿಂದ ಬಾರದೇ ಇರಬಹುದು. ಮರೆವಿನ ಶಕ್ತಿ ಅತಿಯಾದಂತೆ ತೋರುವುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಯಾರಮೇಲೂ ಅವಲಂಬಿತವಾಗುವುದು ನಿಮಗೆ ಇಷ್ಟವಾಗದು.
ಕನ್ಯಾ ರಾಶಿ: ವೃತ್ತಿಯಲ್ಲಿ ಒತ್ತಡಕ್ಕೆ ಕೆಲವು ಕಾರ್ಯವನ್ನು ಮಾಡಬೇಕಾಗುವುದು. ನೀವು ಹೊಸ ವಸ್ತುಗಳನ್ನು ಖರೀದಿಸುವಿರಿ. ಇದರಿಂದ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳಿಂದ ಹೆಚ್ಚು ಲಾಭವಿರಲಿದೆ. ಆರೋಪಗಳನ್ನು ನೀವು ಸುಳ್ಳಾಗಿಸುವಿರಿ. ಯಾವ ಮಾತನ್ನೂ ಯೋಚಿಸದೇ ಕೊಡಬೇಡಿ. ಅದೇ ಮುಳುವಾದೀತು. ಸಂಗಾತಿಯ ಸೌಂದರ್ಯಕ್ಕೆ ಮಾರುಹೋಗಬೇಡಿ. ಎಲ್ಲರ ಜೊತೆ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಯಾವ ಕಾರ್ಯವನ್ನೂ ಪೂರ್ಣವಾದ ಮನಸ್ಸಿನಿಂದ ಮಾಡಲಾರಿರಿ. ನಿಮ್ಮ ಬಗ್ಗೆ ನಂಬಿಕೆ ಕಡಿಮೆ ಆಗಬಹುದು. ರಾಜಕೀಯ ನೇತಾರರಿಗೆ ಇಬ್ಬಂದಿತನ. ಕೇಳಿ ಬಂದವರಿಗೆ ಅಲ್ಪ ಸಹಾಯ. ಕುಟುಂಬದ ಬಗ್ಗೆ ನಿಮಗೆ ಹೆಮ್ಮೆ ಎನಿಸಬಹುದು. ಹಳೆಯ ಬಂಧುಗಳನ್ನು ಭೇಟಿಯಿಂದ ನಿಮ್ಮಲ್ಲಿ ಉತ್ಸಾವಿರುವುದು. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ.
ತುಲಾ ರಾಶಿ: ಹೂಡಿಕೆಯ ನಷ್ಟದಿಂದ ಆತಂಕ. ತೆರಿಗೆ ವಿಚಾರದಲ್ಲಿ ತಜ್ಞರ ಭೇಟಿ ಹಾಗೂ ಸೂಕ್ತ ಪಡೆಯುವಿರಿ. ಇಂದು ಮಂದಗತಿಯಲ್ಲಿ ಸಾಗುತ್ತಿದ್ದ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳು ವೇಗವನ್ನು ಪಡೆಯುವುವು. ವ್ಯರ್ಥ ಓಡಾಟಗಳು ಆಗುತ್ತವೆ. ಆ ಕಾರ್ಯಕ್ಕೊಸ್ಕರ ಖರ್ಚನ್ನೂ ಮಾಡುವಿರಿ. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯ ಸರಿಯುವುದು. ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ ನಿಮ್ಮ ಬೆಲೆಗೆ ಸರಿಹೊಂದುವಂತೆ ಖರೀದಿಯಾಗುವುದು. ಮನೆಯ ಹಿರಿಯರ ಜೊತೆ ಸಮಯ ಕಳೆಯುವಿರಿ, ಅವರ ಸೇವೆಗೆ ಅವಕಾಶ ಸಿಗುವುದು. ಅತಿಯಾದ ಮಾಧುರ್ಯವು ದೇಹವನ್ನು ಹಾಳುಮಾಡುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಮಾತುಗಳಿಗೆ ಪ್ರಾಶಸ್ತ್ಯ ಸಿಗಬಹುದು. ಜಟಿಲ ಸಮಸ್ಯೆಗಳನ್ನು ಸರಳಗೊಳಿಸುವಿರಿ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು.
ವೃಶ್ಚಿಕ ರಾಶಿ: ನೌಕರರು ಉದ್ಯೋಗದಾತಾರರಲ್ಲಿ ಸೌಲಭ್ಯಕ್ಕಾಗಿ ಬೇಡಿಕೆ ಇಡುವರು. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ ಕೂಡಿರುವವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಸಂಪಾದನೆ ಹೆಚ್ಚಾಗುವುದು. ಕಾನೂನಾತ್ಮಕ ಚಟುವಟಿಕೆಯಲ್ಲಿ ಚುರುಕು ಹೆಚ್ಚು. ಮನೋರಂಜನೆಯ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು. ಇಂದಿನ ನಿಮ್ಮ ಕಾರ್ಯಗಳ ಬಗ್ಗೆ ಸ್ಪಷ್ಟತೆ ಇರಲಿ. ಆರ್ಥಿಕ ವ್ಯವಹಾರಕ್ಕೆ ಮಾರ್ಗ ಸುಲಲಿತ. ಯಾವುದನ್ನೂ ಸಡಿಲ ಮಾಡಿಕೊಳ್ಳದೇ ಮುಗಿಸಿ. ಚರಾಸ್ತಿಯನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯಬಹುದು. ವೃತ್ತಿಯ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಅಧ್ಯಾತ್ಮಪ್ರಿಯರಿಗೆ ಉತ್ತಮ ಸಂಗಾತಿ ಲಭ್ಯ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಸಜ್ಜನರ ಕೂಟದಲ್ಲಿ ಭಾಗವಹಿಸುವಿರಿ.

ಧನು ರಾಶಿ: ಮಾಡಿದ ತಪ್ಪನ್ನು ಪ್ರಯತ್ನಪೂರ್ವಕವಾಗಿ ಹೊರಹಾಕಬೇಕಾಗುವುದು. ಬಹಳ ದಿನಗಳ ಅನಂತರ ನಿಮ್ಮ ವ್ಯಾಪಾರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುವುದು. ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ಸಹೋದರರ ನಡುವೆ ಸಮನ್ವಯದ ಕೊರತೆ ಕಾಣಿಸುವುದು. ಕುಟುಂಬಕ್ಕೆ ಸ್ವಲ್ಪ ಸಮಯವನ್ನು ಕೊಡಿ. ಅವರಿಗೆ ಏನು ಬೇಕು? ಏನು ಮಾಡಬೇಕು ಎಂಬುದನ್ನು ಅರಿತು ಕಾರ್ಯಪ್ರವೃತ್ತರಾಗಿ. ಕಾನೂನಿಗೆ ವಿರುದ್ಧವಾಗಿ ಏನನ್ನಾದರು ಮಾಡಿ ಸಿಕ್ಕಿಬೀಳುವಿರಿ. ನಂಬಿಕೆಯನ್ನು ಉಳಿಸಿಕೊಳ್ಳುವತ್ತ ನಿಮ್ಮ ಯೋಚನೆ ಇರಲಿದೆ. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಪುಣ್ಯಸ್ಥಳ ದರ್ಶನದಿಂದ ಮಾನಸಿಕ ನೆಮ್ಮದಿ. ಆತ್ಮಸ್ಥೈರ್ಯದ ವೃದ್ಧಿ. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಬಹುದು. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಬಂಧುಗಳ ಎದುರು ಸ್ವಾಭಿಮಾನದ ಪ್ರದರ್ಶನ.
ಮಕರ ರಾಶಿ: ಸಮಸ್ಯೆಯನ್ನು ಎದುರಿಸಲು ಕಟಿಬದ್ಧರಾಗಬೇಕು. ಸುಮ್ಮನೆ ಹತಾಶರಾಗಿ ಕುಳಿತರೆ ಫಲಸಿಗದು. ಅದನ್ನು ದೂರ ಮಾಡಿಕೊಳ್ಳಲು ಏನಾದರೂ ಇಷ್ಟವಾಗುವ ಚಟುವಟಿಕೆಯಲ್ಲಿ ಭಾಗವಹಿಸಿ. ಋಣಾತ್ಮಕ ಭಾವನೆಗಳೂ ದೂರವಾಗುವವು. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳ ಎನಿಸಬಹುದು. ಕುಟುಂಬದವರ ಜೊತೆ ನಗುತ್ತಾ ಇರಿ. ಕಲಾವಿದರಿಗೆ ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ಬರಬಹುದು. ವೈದ್ಯವೃತ್ತಿಯವರಿಗೆ ಕೃತಜ್ಞತೆಯ ಸಂತೃಪ್ತಿ. ಎಲ್ಲರಿಂದ ಪ್ರಶಂಸೆ. ಆತ್ಮತೃಪ್ತಿಯೇ ಅಧಿಕಲಾಭ. ಇಂದು ನಿಮ್ಮ ದೇಹಕ್ಕೆ ಪೀಡೆಯು ಅಧಿಕವಾದಂತೆ ತೋರುವುದು. ಏನನ್ನೂ ಮಾಡಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ಪ್ರಯಾಣದಲ್ಲಿ ಆಕಸ್ಮಿಕ ತೊಂದರೆಯನ್ನು ಎದುರಿಸಬೇಕಾಗುವುದು. ಒಳ್ಳೆಯ ಕಾರ್ಯಕ್ಕೆ ಸುತ್ತಮುತ್ತಲಿಂದ ಪ್ರಶಂಸೆ. ಬಾಕಿ ಇರುವ ಕೆಲಸದ ಕಡೆ ನಿಮ್ಮ ಗಮನ ಅವಶ್ಯಕ.

ಕುಂಭ ರಾಶಿ: ವಾಹನ ಚಾಲನೆ ಮಾಡುವಾಗ ವೇಗದ ಮೇಲೆ ನಿಯಂತ್ರಣವಿರಲಿ. ಇಂದು ನೀವು ಯಾರಮೇಲೋ ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಹಾಳಾಗುವುದು ಬಿಟ್ಟರೆ ಮತ್ತೇನೂ ಆಗದು. ಸಾಧ್ಯಾವಾದರೆ ಪ್ರೀತಿಸಿ, ಇಲ್ಲವೇ ತಟಸ್ಥವಾಗಿರಿ. ಬರುವ ಹಣವನ್ನು ನಿರೀಕ್ಷಿಸಬಹುದು. ಆಲಂಕಾರಿಕ ಸ್ಪರ್ಧೆಯಲ್ಲಿ ವಿಜಯಿಯಾಗುವಿರಿ. ಸಂಗಾತಿಯೊಂದಿಗೆ ಮನಸ್ತಾಪಗಳು ಏಳಬಹುದು. ಪ್ರೇಮನಿವೇದನೆಯನ್ನು ಮಾಡಲು ಹೋಗಬೇಡಿ. ತಿರಸ್ಕಾರಿಸಬಹುದು. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಉದ್ಯೋಗದಲ್ಲಿ ಕೆಲವು ಸವಾಲುಗಳು ಬರಬಹುದು. ಇಂದಿನ ಹಣದ ಅಗತ್ಯತೆಯನ್ನು ಸ್ನೇಹಿತರ ಮೂಲಕ ಪಡೆದುಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಇದ್ದವರಿಗೆ ಲಾಭ. ಬರಬೇಕಾದ ಹಣ ನಿಮ್ಮ ಜೇಬಿಗೆ ಬೀಳುವುದು. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ.
ಮೀನ ರಾಶಿ: ನೀವು ಮಾಡುವ ಕೆಲಸದಲ್ಲಿ ಅತೀವ ಆಸಕ್ತಿ ಉಂಟಾಗಲಿದ್ದು, ಅದನ್ನು ಬಿಟ್ಟು ಮತ್ತೊಂದು ಕಡೆ ತಲೆಹಾಕಲಾರಿರಿ. ಇಂದು ನೀವು ಸುಮ್ಮನೇ ಕೆಲಸವಿಲ್ಲದೇ ಕುಳಿತಿರುವ ಬದಲು ಏನನ್ನಾದರೂ ಮಾಡಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಆಹಾರವನ್ನು ಸರಿಯಾದ ಕಾಲಕ್ಕೆ ಸೇವಿಸಿ. ಆರೋಗ್ಯ ಹಾಳಾಗುವ ಸಂಭವವಿದೆ. ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಸಂಪತ್ತನ್ನು ಉಳಿಸಲು ಯತ್ನಿಸಿದಷ್ಟೂ ಯಾವುದಾದರೂ ಒಂದು ರೀತಿಯಲ್ಲಿ ಖರ್ಚಾಗುವುದು. ನಿದ್ರೆಯಲ್ಲಿ ಕಂಡ ಕನಸುಗಳೆಲ್ಲ ಸತ್ಯವಾಗದು. ನಿಮ್ಮ ಮಾತಿಗೆ ಅಪರಿಚಿತರೂ ಮೂಕವಿಸ್ಮತರಾದಾರು. ಮಕ್ಕಳ ವ್ಯವಹಾರಕ್ಕೆ ಬೇಕಾದ ಹಣಕಾಸು ನೆರವನ್ನು ನಿಜವು ನೀಡುವಿರಿ. ಮುಖಂಡರು ತಮ್ಮ ಆಸ್ತಿಯನ್ನು ಘೋಷಿಸಬೇಕಾಗುವುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.
Source: TV9
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1