ನಟಿ ಆಥಿಯಾ ಶೆಟ್ಟಿ ಹಾಕಿದ್ದ ಲೆಹೆಂಗಾ ತಯಾರಿಸಲು ಎಷ್ಟು ಸಾವಿರ ಗಂಟೆ ಆಯ್ತು..? ಅದರ ರೇಟ್ ಎಷ್ಟು..? ಮಾಹಿತಿ ಇಲ್ಲಿದೆ

ಸಾಕಷ್ಟು ಗಾಸಿಪ್ ಗಳ ನಡುವೆ ಕಡೆಗೂ ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ ಎಲ್ ರಾಹುಲ್ ಮದುವೆ ಅದ್ದೂರಿಯಾಗಿ ನಡೆದಿದೆ. ಯಾವಾಗ..? ಎಲ್ಲಿಯೇ ಕೇಳಿದರೂ ಸುನೀಲ್ ಶೆಟ್ಟಿ ಮಗಳ ಮದುವೆ ವಿಚಾರಕ್ಕೆ ನೇರವಾಗಿ ಉತ್ತರ ಕೊಟ್ಟಿದ್ದೆ ಇಲ್ಲ. ಬದಲಿಗೆ ಮದುವೆಯೇ ಫಿಕ್ಸ್ ಆಗಿಲ್ಲವೇನೋ ಎಂಬಂತೆ ಉತ್ತರ ನೀಡುತ್ತಿದ್ದರು. ಆದರೆ ತೆರೆಮರೆಯಲ್ಲಿ ಮದುವೆಯ ಕೆಲಸ ಕಾರ್ಯಗಳು ನಡೆದಿವೆ.

ನಿನ್ನೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿರುವ ಸುನಿಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ಮದುವೆ ನಡೆದಿದೆ. ಆಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರ ಜೊತೆಗೆ ನಟಿ ಆಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಪಿಂಕ್ ಕಲರ್ ಲೆಹೆಂಗಾದಲ್ಲಿ, ಅದಕ್ಕೆ ಮ್ಯಾಚ್ ಆಗುವಂತ ಚೋಕರ್ ಬಳಸಿ, ಸುಂದರವಾಗಿ ಕಾಣುತ್ತಿದ್ದರು. ಆದರೆ ಈ ಲೆಹೆಂಗಾ ತಯಾರಿಸಲು ಆಗಿರುವ ಸಮಯ ಅಷ್ಟಿಷ್ಟಲ್ಲ. ಆ ಬಗ್ಗೆ ಫ್ಯಾಷನ್ ಡಿಸೈನರ್ ಮಾಹಿತಿ ನೀಡಿದ್ದಾರೆ. “ಆಥಿಯಾ ಅತ್ಯಂತ ಸೂಕ್ಷ್ಮ ಮತ್ತು ಅಭಿರುಚಿಯುಳ್ಳವರಾಗಿದ್ದಾರೆ. ಹೀಗಾಗಿಯೇ ಅವರಿಗಾಗಿಯೇ ಈ ಲೆಹೆಂಗಾವನ್ನು ಬಹಳ ಪ್ರೀತಿಯಿಂದ ತಯಾರಿಸಲಾಗಿದೆ. ಆಥಿಯಾ ಧರಿಸಿದ್ದ ಲೆಹೆಂಗಾದ ಮೇಲೆ ಹ್ಯಾಂಡ್ ಮೇಡ್ ವರ್ಕ್ ಮಾಡಲಾಗಿದೆ. ಅದಕ್ಕಾಗಿ 10 ಸಾವಿರ ಗಂಟೆಗಳನ್ನು ತೆಗೆದುಕೊಳ್ಳಲಾಯಿತು” ಎಂದಿದ್ದಾರೆ.

The post ನಟಿ ಆಥಿಯಾ ಶೆಟ್ಟಿ ಹಾಕಿದ್ದ ಲೆಹೆಂಗಾ ತಯಾರಿಸಲು ಎಷ್ಟು ಸಾವಿರ ಗಂಟೆ ಆಯ್ತು..? ಅದರ ರೇಟ್ ಎಷ್ಟು..? ಮಾಹಿತಿ ಇಲ್ಲಿದೆ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/cTwYlX5
via IFTTT

Leave a Reply

Your email address will not be published. Required fields are marked *