ಕಾಮ ಕಸ್ತೂರಿಯ ಗಮ್ಮತ್ತು ನಿಮಗೆಷ್ಟು ಗೊತ್ತು..? 

Health: ನೀರಿನ ಜೊತೆಗೆ ಕಾಮ ಕಸ್ತೂರಿ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಹಾಗೆಯೇ ಕಾಮ ಕಸ್ತೂರಿಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.

  • ಕಾಮ ಕಸ್ತೂರಿಯು ವಿಟಮಿನ್ ಎ, ಕಬ್ಬಿಣ ಅಂಶ ಹಾಗೂ ಮುಂತಾದ ಪೋಷಕಾಂಶ ಒಳಗೊಂಡಿದೆ
  • ನೀರಿನ ಜೊತೆಗೆ ಕಾಮ ಕಸ್ತೂರಿ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸುತ್ತದೆ
  • ಕಾಮ ಕಸ್ತೂರಿಯು ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತವೆ

ಬೇಸಿಗೆ ಶುರುವಾಗುತ್ತಿದ್ದಂತೆ ದೇಹವು ಉಷ್ಣಾಂಶತೆಗೆ ತಿರುಗಿ ದೇಹವು ದಣಿವುವಾಗಲು ಶುರುವಾಗುತ್ತದೆ. ಅಂತಹ ಸಂದರ್ಭದಲ್ಲಿ ದೇಹವು  ಊಟದ ಬದಲಿಗೆ ಹೆಚ್ಚೆಚ್ಚು ನೀರನ್ನು ಬಯಸುತ್ತದೆ. ಕೆಲವೊಂದು ಬಾರಿ ತುಂಬಾ ನೀರು ಕುಡಿಯಲು ಆಗವುದಿಲ್ಲ ಅಂತಹ ಸಂದರ್ಭದಲ್ಲಿ ನೀರಿನ ಜೊತೆಗೆ ಕಾಮ ಕಸ್ತೂರಿ ಸೇವಿಸುವುದರಿಂದ  ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಹಾಗೆಯೇ ಕಾಮ ಕಸ್ತೂರಿಯ ನಿರಿನಲ್ಲಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.

ಕಾಮ ಕಸ್ತೂರಿಯ ಬೀಜಗಳು ವಿಟಮಿನ್ ಎ, ಇ, ವಿಟಮಿನ್ಗಳನ್ನು ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಅಂಶಗಳನ್ನು ಒಳಗೊಂಡಿದೆ. 

ದೇಹಕ್ಕೆ ನೀರಿನಾಂಶ ಒದಗಿಸುತ್ತದೆ.
ಕಾಮ ಕಸ್ತೂರಿಯು ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತವೆ. ಇದನ್ನು ನೀರು ಅಥವಾ ಜ್ಯೂಸ್‌ ನಲ್ಲಿ ಸೇವಿಸುವುದರಿಂದ ಇವು ಹೊಟ್ಟೆಯ  ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಪದೇ ಪದೇ ಆಗುವ ಹಸಿವನ್ನು ನಿಯಂತ್ರಿಸುತ್ತದೆ.  
ಕೆಲವೊಂದ ಬಾರಿ ಯಾವುದಾರು ಔಷಧಿಗೆ ಒಳಗಾಗಿದ್ದರೇ  ಅಂತಹ ಸಂದರ್ಭದಲ್ಲಿ ಊಟ ಮಾಡಿದ ಕೆಲವೇ ಹೊತ್ತಿಗೆ ಮತ್ತೆ ಹಸಿವು ಆಗುತ್ತದೆ. ಅದನ್ನು ನಿಯಂತ್ರಿಸಲು ಕಾಮ ಕಸ್ತೂರಿ ನೀರಿನಲ್ಲಿ ಬೆರಸಿ ಕುಡಿದರೆ ಹಸಿವನ್ನು ನೀಗಿಸುತ್ತದೆ. 

​ಮಧುಮೇಹ ನಿಯಂತ್ರಣ
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು  ಕಾಮ ಕಸ್ತೂರಿಯು ಸಹಕರಿಸುತ್ತದೆ. 

 ಮಲಬದ್ಧತೆ ಶಮನ
 ಮಲಬದ್ಧತೆಗೆ ಒಳಗಾಗಿ ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ತಂಪುಪಾನೀಯ ಸಹಕರಿಸುತ್ತವೆ.

ಸೂಚನೆ : (ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Samagrasuddi.co.in ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.) 

Source: https://zeenews.india.com/kannada/health/powerful-effective-health-benefits-of-basil-seeds-in-kannada-126399

Leave a Reply

Your email address will not be published. Required fields are marked *