Ghibli Images Free: ಇತ್ತೀಚಿನ ದಿನಗಳಲ್ಲಿ ಘಿಬ್ಲಿ ಚಿತ್ರಗಳು ಬಹಳಷ್ಟು ಜನಪ್ರಿಯಗೊಳ್ಳುತ್ತಿವೆ. ಅಷ್ಟೇ ಅಲ್ಲ, ಸದ್ಯ ಚಾಟ್‌ಜಿಪಿಟಿಯಲ್ಲಿ ಚಿತ್ರಗಳನ್ನು ರಚಿಸುವುದು ಈಗ ಎಲ್ಲಾ ಬಳಕೆದಾರರಿಗೆ ಉಚಿತವಾಗಿಸಿದ್ದಾರೆ.

Ghibli Images Free: ಇತ್ತೀಚಿನ ದಿನಗಳಲ್ಲಿ ಘಿಬ್ಲಿ ಇಮೇಜಸ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಫೋಟೋವನ್ನು ಘಿಬ್ಲಿ ಆವೃತ್ತಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಘಿಬ್ಲಿಯ ಚಿತ್ರಗಳು ಸಾಮಾಜಿಕ ಮಾಧ್ಯಮದ ಬಹುತೇಕ ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ ಟ್ರೆಂಡಿಂಗ್ ಆಗುತ್ತಿವೆ. ChatGPT ಅನ್ನು ರಚಿಸಿದ OpenAI ಕಂಪನಿಯು ತನ್ನ ಬಳಕೆದಾರರಿಗೆ ತನ್ನ AI ಮಾದರಿ ChatGPT ಯಲ್ಲಿಯೇ ಘಿಬ್ಲಿ ಚಿತ್ರಗಳನ್ನು ರಚಿಸುವ ಸೌಲಭ್ಯವನ್ನು ನೀಡಿದೆ.

ಈಗ ಓಪನ್‌ಎಐನ ಸಿಇಒ ಎಲ್ಲಾ ಬಳಕೆದಾರರಿಗೆ ಚಾಟ್‌ಜಿಪಿಟಿ ಉಚಿತ ಎಂದು ಘೋಷಿಸಿದ್ದಾರೆ. ಇದರರ್ಥ ಈಗ ಬಳಕೆದಾರರು ಡೈರೆಕ್ಟ್ ಆಗಿ ChatGPT ಗೆ ಹೋಗಿ ಅವರ ಯಾವುದೇ ಚಿತ್ರಗಳನ್ನು ಘಿಬ್ಲಿ ಚಿತ್ರವನ್ನಾಗಿಸ ಬಹುದಾಗಿದೆ. ಚಿತ್ರದ ಘಿಬ್ಲಿ ಚಿತ್ರವನ್ನು ರಚಿಸಲಾಗುತ್ತಿತ್ತು, ಆದರೆ ಅದರ ನಂತರ ಅದನ್ನು ಎಡಿಟ್ ಮಾಡಲು ಆಗುತ್ತಿರಲಿಲ್ಲ ಮತ್ತು ಘಿಬ್ಲಿ ಚಿತ್ರದ ಹೋಲಿಕೆಯೂ ಒಂದೇ ಆಗಿರಲಿಲ್ಲ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದರು.
ಚಾಟ್‌ಜಿಪಿಟಿ ಇಮೇಜ್ ಉತ್ಪಾದನೆಯನ್ನು ಈಗ ಎಲ್ಲಾ ಬಳಕೆದಾರರಿಗೆ ಉಚಿತವಾಗಿ ಬಿಡುಗಡೆ ಮಾಡಲಾಗಿದೆ. ಚಾಟ್‌ಜಿಪಿಟಿಯಲ್ಲಿ ಉಚಿತವಾಗಿ ಚಿತ್ರಗಳನ್ನು ರಚಿಸುವ ಸೌಲಭ್ಯವನ್ನು ಮೊದಲು ಒದಗಿಸಲಾಗಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ಕಂಪನಿಯು ಸ್ಟುಡಿಯೋ ಘಿಬ್ಲಿ ಇಮೇಜ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು. ಅದು ವೈರಲ್ ಟ್ರೆಂಡ್ ಆಯಿತು. ಮಾರ್ಚ್ 31 ರಂದು ChatGPT ಬಳಕೆದಾರರ ಚಟುವಟಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ಸ್ಯಾಮ್ ಆಲ್ಟ್‌ಮನ್ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದೇ ಗಂಟೆಯಲ್ಲಿ 1 ಮಿಲಿಯನ್ ಹೊಸ ಬಳಕೆದಾರರು: ಚಾಟ್‌ಜಿಪಿಟಿ ಒಂದು ಗಂಟೆಯಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಪಡೆದಿದೆ. ನಾವು ಹಿಂದೆ 5 ದಿನಗಳಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಪಡೆದಿದ್ದೇವು. ಆದ್ರೆ ಇತ್ತೀಚೆಗೆ ಕೇವಲ ಒಂದು ಗಂಟೆಯಲ್ಲಿ ಒಂದು ಮಿಲಿಯನ್ ಯೂಸರ್ಸ್ ಅನ್ನು ಪಡೆದಿದ್ದೇವೆ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದರು.

ಮಾರ್ಚ್ 31 ರಂದು ಸ್ಯಾಮ್ ಆಲ್ಟ್‌ಮನ್ ಅವರು X ನಲ್ಲಿ ಪೋಸ್ಟ್ ಮಾಡಿ, 26 ತಿಂಗಳ ಹಿಂದೆ ChatGPT ಅನ್ನು ಪ್ರಾರಂಭಿಸಿದ ನಂತರದ ಅತ್ಯಂತ ಕ್ರೇಜಿಯಸ್ ವೈರಲ್ ಕ್ಷಣಗಳಲ್ಲಿ ಇದೊಂದು ಪ್ರಸ್ತುತ ಕ್ಷಣವಾಗಿದೆ. ಮೊದಲು ನಾವು 5 ದಿನಗಳಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಸೇರಿಸುತ್ತಿದ್ದೆವು. ಆದರೆ ಈಗ ನಾವು ಕಳೆದ ಒಂದು ಗಂಟೆಯಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಸೇರಿಸಿದ್ದೇವೆ ಎಂದು ಹೇಳಿದ್ದರು.
ಕಳೆದ ವಾರ ಓಪನ್‌ಎಐ, ಚಾಟ್‌ಜಿಪಿಟಿಗೆ ಇಮೇಜ್ ಜನರೇಷನ್ ವೈಶಿಷ್ಟ್ಯವನ್ನು ಸೇರಿಸಿದ್ದು, ಬಳಕೆದಾರರು ಜಿಪಿಟಿ-4o ತಾರ್ಕಿಕ ಮಾದರಿಯನ್ನು ಬಳಸಿಕೊಂಡು ಅಪ್ಲಿಕೇಶನ್‌ನೊಳಗೆ ನೇರವಾಗಿ ಚಿತ್ರಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು ಸ್ವಲ್ಪ ಸಮಯದೊಳಗೆ ಬಹಳ ಜನಪ್ರಿಯವಾಯಿತು. ಅದಾದ ನಂತರ, ಜಪಾನ್‌ನ ಪ್ರಸಿದ್ಧ ಅನಿಮೇಷನ್ ಸ್ಟುಡಿಯೋ ಈ ಸ್ಟುಡಿಯೋ ಘಿಬ್ಲಿಯ ಶೈಲಿಯಲ್ಲಿ ಮಾಡಿದ ಚಿತ್ರಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿ ತುಳುಕುತ್ತಿದ್ದವು.
ಪ್ರಪಂಚದಾದ್ಯಂತದ ಬಳಕೆದಾರರು ChatGPT ಯೊಂದಿಗೆ ಹೊಸ ಘಿಬ್ಲಿ ಪ್ರವೃತ್ತಿಯ ಚಿತ್ರಗಳನ್ನು ರಚಿಸಲು ಪ್ರಾರಂಭಿಸಿದರು. ChatGPT ಮತ್ತು ಸ್ಯಾಮ್ ಆಲ್ಟ್‌ಮ್ಯಾನ್ ಮೇಲೆ ತುಂಬಾ ಒತ್ತಡವಿತ್ತು. ಸ್ಯಾಮ್ ಸ್ವತಃ ಬಳಕೆದಾರರನ್ನು ಕಡಿಮೆ ಘಿಬ್ಲಿ ಚಿತ್ರಗಳನ್ನು ರಚಿಸಲು ವಿನಂತಿಸಿಕೊಂಡರು. ಏಕೆಂದರೆ ಅವರ ತಂಡವು ಅತಿಯಾದ ಒತ್ತಡದಿಂದಾಗಿ ನಿದ್ರಿಸಲು ಸಾಧ್ಯವಾಗಿರಲಿಲ್ಲ.

ಘಿಬ್ಲಿ-ಶೈಲಿಯ AI ಚಿತ್ರಗಳನ್ನು ರಚಿಸುವುದು ಹೇಗೆ? ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಯಾವುದೇ ಮೆಮೆ, ಚಲನಚಿತ್ರ ದೃಶ್ಯ ಅಥವಾ ನಿಮ್ಮ ಚಿತ್ರ ಸ್ಟುಡಿಯೋದಿಂದ ಘಿಬ್ಲಿ ಶೈಲಿಯ ಚಿತ್ರಗಳನ್ನು ಸುಲಭವಾಗಿ ರಚಿಸಬಹುದು.
ಹಂತ 1: ಮೊದಲು chatgpt.com ತೆರೆಯಿರಿ ಮತ್ತು ನಿಮ್ಮ OpenAI ಖಾತೆಯನ್ನು ಲಾಗಿನ್ ಮಾಡಿ.
ಹಂತ 2: ನಂತರ ಮಾಡಲ್ ಸೆಲೆಕ್ಷನ್ ಟ್ಯಾಬ್ನಿಂದ GPT-4o ಮಾದರಿಗೆ ಬದಲಿಸಿ.
ಹಂತ 3: ಈಗ ಚಾಟ್‌ಬಾಟ್‌ನೊಂದಿಗೆ ಹೊಸ ಸಂಭಾಷಣೆಯನ್ನು ಪ್ರಾರಂಭಿಸಿ. ಲಗತ್ತಿಸುವ ಫೈಲ್ ಐಕಾನ್ ಅನ್ನು ಒತ್ತುವ ಮೂಲಕ ನೀವು ರೀಸ್ಟೈಲ್ ಬಯಸುವ ಚಿತ್ರವನ್ನು ಅಪ್‌ಲೋಡ್ ಮಾಡಿ.
ಹಂತ 4: ಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರ, ಅದನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಆರ್ಟ್‌ಗೆ ರೀಸ್ಟೈಲ್ ಮಾಡಲು ChatGPT ಗೆ ಸೂಚಿಸುವ ಪ್ರಾಂಪ್ಟ್ ಅನ್ನು ನಮೂದಿಸಿ. ಇದಕ್ಕಾಗಿ ನೀವು ‘ಟರ್ನ್ ಥೀಸ್ ಫೋಟೋ ಇನ್ಟೂ ಎ ಘಿಬ್ಲಿ-ಸ್ಟೈಲ್ ಆನಿಮೆಟೆಡ್ ಪೋಟ್ರೇಟ್ ವಿತ್ ಸಾಫ್ಟ್ ಕಲರ್ಸ್, ಎಕ್ಸ್ಪ್ರೆಸಿವ್ ಫೀಚರ್ಸ್ ಆ್ಯಂಡ್ ಎ ಡ್ರೀಮಿ ಬ್ಯಾಕ್ ಗ್ರೌಂಡ್’ ಅಥವಾ ‘ಶೋ ಮಿ ಇನ್ ಸ್ಟುಡಿಯೋ ಘಿಬ್ಲಿ ಸ್ಟೈಲ್’ ಎಂದು ಪ್ರಾಂಪ್ಟ್‌ಗಳನ್ನು ಬಳಸಬಹುದು.
ಹಂತ 5: ಈಗ ರಚಿಸಿದ ಚಿತ್ರವನ್ನು ಪರಿಶೀಲಿಸಿ. ಅಗತ್ಯವಿದ್ದರೆ ಸುಧಾರಣೆಗಳನ್ನು ಮಾಡಲು ChatGPT ಅನ್ನು ಕೇಳಬಹುದು. ನಿಮ್ಮ ಇಚ್ಛೆಯಂತೆ ಚಿತ್ರವನ್ನು ರಚಿಸಿದ ನಂತರ, ಅದನ್ನು ನಿಮ್ಮ ಸಾಧನದಲ್ಲಿ ಸೇವ್ ಮಾಡಿಕೊಳ್ಳಿ.
Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1