ಪ್ರತಿ ನಿತ್ಯ ಸೂಜಿಯಿಂದ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಇದಕ್ಕೆ ಇದೀಗ ಹೈದರಾಬಾದ್ ಕಂಪನಿ ಪರಿಹಾರ ಕಂಡು ಹಿಡಿದಿದೆ.

ಹೈದರಾಬಾದ್ : ಮಧುಮೇಹ ಅನೇಕ ಮಂದಿಯನ್ನು ಕಾಡುವ ಸಾಮಾನ್ಯ ರೋಗವಾಗಿದೆ. ಅಧಿಕ ಮಧುಮೇಹ ಹೊಂದಿರುವ ಜನರು ನಿತ್ಯ ಇನ್ಸುಲಿನ್ ಇಂಜೆಕ್ಷನ್ ಪಡೆಯುವ ಮೂಲಕ ಇದರ ನಿಯಂತ್ರಣಕ್ಕೆ ಮುಂದಾಗುತ್ತಾರೆ.
ಪ್ರತಿ ನಿತ್ಯ ಸೂಜಿಯಿಂದ ಈ ರೀತಿ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಈ ಸೂಜಿಯ ನೋವಿನಿಂದ ಅನೇಕ ಬಾರಿ ರೋಗಿ ಜರ್ಜರಿತನಾಗುತ್ತಾನೆ. ಇದಕ್ಕೆ ಇದೀಗ ಹೈದರಾಬಾದ್ ಕಂಪನಿ ಪರಿಹಾರ ಕಂಡು ಹಿಡಿದಿದೆ. ಇಂಜೆಕ್ಷನ್ ಬದಲಾಗಿ ಬಾಯಿಯ (ಓರಲ್) ಮೂಲಕವೇ ಸ್ಪ್ರೇ ಬಳಕೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
ಶೀಘ್ರದಲ್ಲೇ ಮಾನವರ ಮೇಲೆ ಪರೀಕ್ಷೆ: ಹೈದರಾಬಾದ್ನ ನೀಡಲ್ಫ್ರೀ ಟೆಕ್ನಾಲಾಜಿ ಓಜುಲೀನ್ ಎಂಬ ಸೂಜಿ ಮುಕ್ತವಾದ ಬಾಯಿಯ ಇನ್ಸುಲಿನ್ ಸ್ಪ್ರೇ ಅನ್ನು ಅಭಿವೃದ್ಧಿಪಡಿಸಿದೆ. ಇದು ನೋವು ರಹಿತ ಚಿಕಿತ್ಸೆಯಾಗಿದ್ದು. ಈಗಾಗಲೇ 40 ದೇಶಗಳಲ್ಲಿ ಅಂತಾರಾಷ್ಟ್ರೀಯ ರೋಗಿಗಳು ಓಜುನಿಲ್ ಅನ್ನು ಕಾಯ್ದಿರಿಸಿದ್ದಾರೆ ಎಂದು ನೀಡಲ್ಫ್ರೀ ಟೆಕ್ನಾಲಾಜಿಯ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಸಿಎಂಡಿ ಡಾ ಕೆ ಕೋಟೆಶ್ವರ ರಾವ್ ತಿಳಿಸಿದ್ದಾರೆ. ಈ ಸಂಸ್ಥೆ ಇದೀಗ ಈ ಔಷಧಿಯ ಸುರಕ್ಷಾ ಪರೀಕ್ಷೆಗೆ ಕೇಂದ್ರ ಔಷದ ಗುಣಮಟ್ಟ ನಿಯಂತ್ರಣ ಸಂಘಟನೆಗೆ ಅರ್ಜಿ ಸಲ್ಲಿಸಿದೆ. ಮಾನವನ ಮೇಲೆ ಔಷಧಿಯ ಪ್ರಯೋಗವನ್ನು ನಡೆಸಲು ಇದು ಕಡ್ಡಾಯವಾಗಿದೆ.
ಕ್ಯಾನ್ಸರ್, ಅಸ್ಟಿಯೊಪೊರೋಸಿಸ್, ಅಲ್ಝೈಮರ್ಗೂ ಸ್ಪ್ರೇ: ನೀಡಲ್ ಫ್ರಿ ಟೆಕ್ನಾಲಜಿ ಮಧುಮೇಹಿಗಳಿಗೆ ಮಾತ್ರವಲ್ಲ, ಕ್ಯಾನ್ಸರ್, ಅಸ್ಟಿಯೊಪೊರೋಸಿಸ್ ಮತ್ತು ಆಲ್ಝೈಮರ್ ರೋಗಿಗಳಿಗೆ ಸೂಜಿ ಹೊರತಾಗಿ ಔಷಧ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಸಂಸ್ಥೆ 225 ರಿಂದ 250 ಮಿಲಿಯನ್ ಡಾಲರ್ ಹೂಡಿಕೆ ಯನ್ನು ಮುಂದಿನ ಕೆಲವು ವರ್ಷದಲ್ಲಿ ಮಾಡಲಿದೆ. ಸೂಜಿ ರಹಿತ ಬಾಯಿ ಮೂಲಕ ಇನ್ಸುಲಿನ್ ಸ್ಪ್ರೆಯನ್ನು ಪ್ರಸ್ತುತ ಮಾನವ ಮತ್ತು ಪ್ರಾಣಿಗಳ ಮೇಲೆ ನೀಡಲ್ ಫ್ರೀ ಟೆಕ್ನಾಲಾಜಿ ಅಭಿವೃದ್ಧಿಪಡಿಸಲಾಗಿದೆ.
ಹೇಗೆ ಮಾಡಲಿದೆ ಕೆಲಸ: ವಿಶ್ವಾದ್ಯಂತ ಅನೇಕ ಬಯೋಫಾರಂ ಕಂಪನಿಗಳು ಬಾಯಿಯ ಇನ್ಸುಲಿನ್ ಅನ್ನು ಅಭಿವೃದ್ಧಿ ಮಾಡಲಿದೆ. ಆದಾಗ್ಯೂ, ರಕ್ತಕ್ಕೆ ಸಾಕಷ್ಟು ಇನ್ಸುಲಿನ್ ಪಡೆಯುವಲ್ಲಿ ಸೀಮಿತ ಯಶಸ್ಸನ್ನು ಹೊಂದಿದ್ದಾರೆ. ಓಜುಲಿನ್ ಶೇ 91ರಷ್ಟು ಜೈವಿಕ ಲಭ್ಯತೆ ಇದೆ. ಇದರ ಫಲಿತಾಂಶವೂ ಸಾಮರ್ಥ್ಯದಾಯಕವಾಗಿದೆ. ಈ ಓರಲ್ ಇನ್ಸುಲಿನ್ ಸ್ಪ್ರೇ ಅನ್ನು ನಾಯಿ ಮತ್ತು ಬೆಕ್ಕಿನ ಮೇಲೆ 2024-25ರಲ್ಲಿ ಪ್ರಯೋಗ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1