ಮುಂಬೈ ಇಂಡಿಯನ್ಸ್ 18.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ಗಳ ಗುರಿ ತಲುಪಿತು. ವಿಲ್ ಜಾಕ್ಸ್ 36, ರಿಕಲ್ಟನ್ 31, ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ತಲಾ 26 ರನ್ಗಳಿಸಿ ಗೆಲುವಿನ ರೂವಾರಿಗಳಾದರು.

ಐಪಿಎಲ್ 2025ರ 33ನೇ ಪಂದ್ಯದಲ್ಲಿ ಗುರುವಾರ ಮುಂಬೈ ಇಂಡಿಯನ್ಸ್ (Mumbai Indians) ತಂಡ ತವರಿನ ಲಾಭ ಪಡೆದು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯಯುತ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 246 ರನ್ಗಳ ಗುರಿಯನ್ನ ಬೆನ್ನಟ್ಟಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ಇಂದು ಮುಂಬೈ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದ ಅಂತ್ಯದವರೆಗೂ ರನ್ಗಳಿಸಲು ಪರದಾಡಿದ್ದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ಗಳಿಸಿತ್ತು. ಬ್ಯಾಟಿಂಗ್ ಸ್ನೇಹಿ ವಿಕೆಟ್ನಲ್ಲಿ 163ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿ ಮುಂಬೈ ಇಂಡಿಯನ್ಸ್ 18.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
6ನೇ ವೈಫಲ್ಯ ಕಂಡ ರೋಹಿತ್ ಶರ್ಮಾ
163 ರನ್ಗಳ ಸುಲಭ ಚೇಸಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಿತಾದರೂ ದೊಡ್ಡದಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು. 16 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 26 ರನ್ಗಳಿಸಿದ್ದ ರೋಹಿತ್ ಶರ್ಮಾ 4ನೇ ಓವರ್ನಲ್ಲೆ ವಿಕೆಟ್ ಕಳೆದುಕೊಂಡರು. ಇದು ಅವರ ಸತತ 6ನೇ ವೈಫಲ್ಯವಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಒಂದು ಪಂದ್ಯದಲ್ಲೂ ಕೂಡ 50ರ ಜೊತೆಯಾಟ ಪಡೆಯಲಿಲ್ಲ. ಆದರೆ ರೋಹಿತ್ ವೈಫಲ್ಯ ಇಂದು ತಂಡಕ್ಕೆ ದೊಡ್ಡ ಹೊಡೆತ ನೀಡಲಿಲ್ಲ.

ಗೆಲುವಿನ ಗಡಿ ದಾಟಿಸಿದ ತಿಲಕ್ -ಪಾಂಡ್ಯ
ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದ ವಿಲ್ ಜಾಕ್ಸ್ ಬ್ಯಾಟಿಂಗ್ನಲ್ಲೂ ಮಿಂಚಿದರು. 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿದರು. ಔಟ್ ಆಗುವ ಮುನ್ನ ಜಾಕ್ಸ್- ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 52 ರನ್ ಜೊತೆಯಾಟ ಕಲೆಯಾಕಿದ್ದರು. ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 26 ರನ್ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿ 21 ರನ್ಗಳಿಸಿ ಗೆಲುವಿಗೆ 1ರನ್ ಬೇಕಿದ್ದಾಗ ಔಟ್ ಆದರು. ತಿಲಕ್ ವರ್ಮಾ 17 ಎಸೆತಗಳಲ್ಲಿ ಅಜೇಯ 21 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ 26ಕ್ಕೆ3, ಇಶಾನ್ ಮಾಲಿಂಗ್ 36ಕ್ಕೆ2, ಹರ್ಷಲ್ ಪಟೇಲ್ 31ಕ್ಕೆ1 ವಿಕೆಟ್ ಪಡೆದರು.
ಪರದಾಡಿದ ಹೈದರಾಬಾದ್ ಬ್ಯಾಟರ್ಸ್
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳಲಿಲ್ಲವಾದರೂ, ಕೇವಲ 46 ರನ್ಗಳಿಸಿದರು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 40 ರನ್ಗಳಿಸಿದರು. ಇದೇ ಇಡೀ ಇನ್ನಿಂಗ್ಸ್ನಲ್ಲಿ ಗರಿಷ್ಠ ಸ್ಕೋರ್ ಆಯಿತು. ಇನ್ನು ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ ಕೇವಲ 28, ನಿತೀಶ್ ಕುಮಾರ್ ರೆಡ್ಡಿ 21 ಎಸೆತಗಳಲ್ಲಿ 19 ರನ್ಗಳಿಸಿ ದಯನೀಯ ವೈಫಲ್ಯ ಅನುಭವಿಸಿದರು.
ಹೆನ್ರಿಚ್ ಕ್ಲಾಸೆನ್ 28 ಎಸೆತಗಳನ್ನ ಎದುರಿಸಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 37 ರನ್ ಸಿಡಿಸಿ 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ ಅನಿಕೇತ್ ವರ್ಮಾ ಹಾಗೂ ಪ್ಯಾಟ್ ಕಮಿನ್ಸ್ 22 ರನ್ ಸೂರೆಗೈದು ತಂಡದ ಮೊತ್ತವನ್ನ 162ಕ್ಕೆ ಕೊಂಡೊಯ್ದರು. ಅನಿಕೇತ್ 8 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ, ಪ್ಯಾಟ್ ಕಮಿನ್ಸ್ ಅಜೇಯ 8 ರನ್ಗಳಿಸಿದರು.
ಮುಂಬೈ ಬೌಲರ್ಗಳ ಪೈಕಿ ವಿಲ್ ಜಾಕ್ಸ್ 14ಕ್ಕೆ2, ಹಾರ್ದಿಕ್ ಪಾಂಡ್ಯ 42ಕ್ಕೆ1, ಜಸ್ಪ್ರೀತ್ ಬುಮ್ರಾ 21ಕ್ಕೆ1, ಟ್ರೆಂಟ್ ಬೌಲ್ಟ್ 29ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0