ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ 27 ಬರವಣಿಗೆ ನನ್ನ ಜೀವಾಳ, ನಾನು ಬರೆಯುತ್ತಿದ್ದರೆ ನಾನು ಚನ್ನಾಗಿ ಇರುತ್ತೇನೆ, ಇಲ್ಲವಾದರೆ ಏರು ಪೇರಾಗುತ್ತದೆ ಎಂದು ತಮ್ಮ ಮನದಾಳದ ಮಾತನ್ನು ಹೇಳಿದವರು ಸಾಹಿತಿಗಳು, ಚಲನಚಿತ್ರ ಸಂಭಾಷಣಾಕಾರರಾದ ಬಿ.ಎಲ್.ವೇಣು ರವರು. ಚಿತ್ರದುರ್ಗ ನಗರದ ಕೆಳಗೋಟೆಯ ಭುವನೇಶ್ವರಿ ವೃತ್ತದ ಬಳಿಯಲ್ಲಿನ ಅವರ ನಿವಾಸದಲ್ಲಿ ಇಂದು ನಡೆದ ಅವರ 80ನೇ ಹುಟ್ಟುಹಬ್ಬದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದ ಸೇಹಿತರು, ಅಭಿಮಾನಿಗಳು, ಹಿತೈಷಿಗಳಿಂದ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸ್ವೀಕಾರ ಮಾಡಿದ ನಂತರ ಮಾತನಾಡಿದ ಅವರು, ಜನತೆ ನನ್ನನ್ನು ಬಹಳಷ್ಟು ಪ್ರೀತಿ ಮಾಡುತ್ತಾರೆ ಎಂಬುದು ಸಾಹಿತ್ಯ ಸಮ್ಮೇಳನದಲ್ಲಿ ನನ್ನನು ಅಧ್ಯಕ್ಷನನ್ನಾಗಿ ಮಾಡಿ ಸಾಹಿತ್ಯ ಸಮ್ಮೇಳನವನ್ನು ಚನ್ನಾಗಿ ಮಾಡಿದ್ದೀರಾ, ಅದನ್ನು ನಾನು ನೋಡಿದ್ದೇನೆ, ಆದರೆ ನಾನು ಸಾಸಿವೆ ಕಾಳಿನಷ್ಟು ಮಾತ್ರ ಸಾಧನೆಯನ್ನು ಮಾಡಿದ್ದೆನೆ, ಆದರೆ ನೀವುಗಳು ಸಾಗರದಷ್ಟು ಪ್ರೀತಿಯನ್ನು ತೋರಿಸಿದ್ದೀರಾ, ಇದು ನನ್ನ ಪುಣ್ಯವಾಗಿದೆ.
ನನ್ನ ಎಲ್ಲಾ ಕಾರ್ಯಕ್ರಮಗಳ ಹಿಂದೆ ಕಾಂತರಾಜ್ರವರ ಬೆಂಬಲ ಇದೆ. ನನ್ನ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ವೃತ್ತ ಎಂದು ಏನಾದರೂ ಮಾಡಿದ್ದರೆ ಅದು ಕಾಂತರಾಜ್ ರವರ ಕೂಡುಗೆಯಾಗಿದೆ ಎಂದರು. ಚಿತ್ರದುರ್ಗ ಅಲ್ಲದೆ ಬೇರೆ ಕಡೆಯಿಂದಲೂ ಸಹಾ ಜನತೆ ನನ್ನ ಮೇಲೆ ಅಭಿಮಾನವನ್ನು ತೋರಿಸುತ್ತಿದ್ದಾರೆ. ಇದು ನನ್ನ ಪುಣ್ಯವಾಗಿದೆ. ನಾನು ಇನ್ನೂ ಬರೆಯುವುದು ಬಹಳಷ್ಟು ಇದೆ. ಸಾಹಿತಿಗಳಾದ ತೆಲಗಾವಿ ಯವರು ಹೇಳುತ್ತಿರುತ್ತಾರೆ ನಾಯಕರ ಎಲ್ಲಾ ಪಾಳೇಗಾರರ ಬಗ್ಗೆಯೂ ಸಹಾ ಬರೆದು ಮುಗಿಸಿ ಎಂದಿದ್ದಾರೆ. ಈಗಾಗಲೇ ಸಾಲು ಸಾಲು ಕಾದಂಬರಿಗಳನ್ನು ಪಾಳೇಗಾರರ ಬಗ್ಗೆ ಬರೆಯಲಾಗಿದೆ. ಅದರೆ ದಲಿತ
ಸಮಸ್ಯೆಗಳ ಬಗ್ಗೆ ಬರೆದಾಗ ನನಗೆ ಇಷ್ಠವಾಗುವುದು ಇದು ನನಗೆ ವೈಯುತ್ತಿಕವಾಗಿ ಇದಕ್ಕೆ ನನಗೆ ಹೆಚ್ಚಿನ ಪ್ರಮಾಣದಲ್ಲಿ ಬಹುಮಾನಗಳು ಬಂದಿವೆ.
ಚಿತ್ರದುರ್ಗದಲ್ಲಿ ನಾನು ಹುಟ್ಟಿ ಬೆಳದಿದ್ದೆನೆ ಕೋಟೆಯಲ್ಲಿ ತಿರುಗಾಡಿದ್ದೇನೆ, ಚರಿತ್ರೆ ಗೊತ್ತಿರುವುದರಿಂದ ಈ ದಿಸೆಯಲ್ಲಿಯೂ ಸಹಾ
ನಾನು ಕೆಲಸವನ್ನು ಮಾಡಿದ್ದೇನೆ, ಐತಿಹಾಸಿಕ ಕಾದಂಬರಿಗಳು ಸಹಾ ನನಗೆ ಹೆಚ್ಚಿನ ಮನ್ನಣೆಯನ್ನು ತಂದು ಕೊಟ್ಟಿವೆ. ಇದ್ದರೊಂದಿಗೆ ಚಿತ್ರದುರ್ಗದ ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವುದರಿಂದ ನಾನು ಜನಪ್ರಿಯತೆಯನ್ನು ಗಳಿಸಿದ್ದೇನೆ ಎಂದು ವೇಣು ತಿಳಿಸಿದರು. ಅನಕ್ಷರಸ್ಥರನ್ನು ಸಹಾ ಮುಟ್ಟುವಂತಹ ಕ್ಷೇತ್ರವಾದ ಸಿನಿಮಾ ರಂಗದಲ್ಲಿಯೂ ಸಹಾ ನಾನು ಕೆಲಸವನ್ನು ಮಾಡಿದ್ದೇನೆ ಇದರಿಂದ ಹೆಚ್ಚಿನ ಪ್ರೀತಿ ಸಿಕ್ಕಿದೆ.
ನನ್ನ ಆರೋಗ್ಯದ ಗುಟ್ಟು ಎಂದರೆ ಬರವಣಿಗೆ, ಈಗಲೂ ಸಹಾ ಏನಾದರೂ ಬರೆಯುತ್ತೇನೆ ಇಲ್ಲವೇ ಓದುತ್ತೇನೆ, ಇದೇ ನನಗೆ
ಕೆಲಸವಾಗಿದೆ. ಮುಂದೆಯೂ ಸಹಾ ಏನಾದರೂ ಬರೆಯುತ್ತೇನೆ, ನನ್ನ ಬರವಣಿಗೆಯ ಗುಟ್ಟೇ ಆರೋಗ್ಯವಾಗಿದೆ. ಎಲ್ಲಿಯವರೆಗೂ
ಬರೆಯುತ್ತೇನೋ ಅಲ್ಲಿಯವರೆಗೂ ಬದುಕಿರುತ್ತೇನೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಅದೇ ನನ್ನ ಆಯಸ್ಸುನ್ನು ವೃದ್ದಿ ಮಾಡುತ್ತದೆ ಎಂದು ವೇಣು ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ಪೀರ್ ಮಾತನಾಡಿ, ವೇಣುರವರು ಬರೆದಿರುವ
ಕಾದಂಬರಿಗಳಲ್ಲಿ ಉತ್ತಮವಾದ ಕಾದಂಬರಿಯನ್ನು ಆಯ್ಕೆ ಮಾಡಿ ಅದನ್ನು ಆಂಗ್ಲ ಬಾಷೆಗೆ ತರ್ಜಿಮೆ ಮಾಡುವುದರ ಮೂಲಕ ಇವರ ಜನಪ್ರಿಯತೆ ದೇಶದಾದ್ಯಂತ ಹರಡುವಂತೆ ಆಗಬೇಕಿದೆ ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಲಿದ್ದಾರೆ ಎಂದರು.
ಜೆಡಿಎಸ್.ಮುಖಂಡರು, ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಮಾತನಾಡಿ ವೇಣು ರವರು ನಮ್ಮ ದುರ್ಗದ ಅಸ್ತಿ, ಇವರು ನಮ್ಮ ದುರ್ಗದಲ್ಲಿ ಇರುವುದು ನಮ್ಮೆಲ್ಲರ ಪುಣ್ಯವಾಗಿದೆ. ಭಗವಂತ ಇವರಿಗೆ ಆರೋಗ್ಯವನ್ನು ನೀಡಿ ಇವರ ಕೈಯಿಂದ ಮತ್ತಷ್ಟು ಕಾದಂಬರಿಗಳು ಹೂರ ಬರುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಮದಕರಿ ಸಾಂಸ್ಕøತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್ ಮಾತನಾಡಿ ವೇಣುರವರಿಗೆ ಈಗ 80ರ ಸಂಭ್ರಮ ಈಗ ಸಾಂಕೇತಿಕವಾಗಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗಿದೆ. ಮುಂದಿನ ದಿನದಲ್ಲಿ ವೇಣು 80ರ ಸಂಭ್ರಮವನ್ನು ದೊಡ್ಡದಾಗಿ ತರಾಸು ರಂಗಮಂದಿರದಲ್ಲಿ ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್. ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್, ಸೃಷ್ಟಿಸಾಗರ ಪ್ರಕಾಶನದ ಮೇಘಗಂಗಾಧರ ನಾಯ್ಕ್, ನಗರಸಭೆಯ ಮಾಜಿ ಅಧ್ಯಕ್ಷರಾದ ಮೈಲಾರಪ್ಪ, ಕಾಂಗ್ರೆಸ್ಮು ಖಂಡರಾದ ಸಂಪತ್ ಕುಮಾರ್, ಅಂಜಿನಪ್ಪ, ಖುದ್ದಸ್, ತಿಪ್ಪೇಸ್ವಾಮಿ, ಕುಮಾರ್ ಗೌಡ, ಶಿವಕುಮಾರ್, ಭವಾನಿ ಮಂಜುನಾಥ್, ಪತ್ರಕರ್ತರಾದ ಬಸವರಾಜು, ಕಿರಣ್, ಸಿದ್ದರಾಜು, ಲಕ್ಷ್ಮಣ್, ಮಹೇಶ್ಬಾಬು, ಅಹೋಬಳಪತಿ. ಹೆಂಜಾರಪ್ಪ, ಚಂದ್ರಪ್ಪ, ದ್ವಾರಕನಾಥ್, ಸೋಮಶೇಖರ್ ಶ್ರೀನಿವಾಸ್, ಪ್ರಹ್ಲಾದ್. ಮಂಜುನಾಥ್ ಅರುಣ್ ಕುಮಾರ್, ಮದಕರಿನಾಯಕ ವಂಶಸ್ಥರಾದ ರಾಜಮದಕರಿನಾಯಕ ಸೇರಿದಂತೆ ವೇಣುರವರ ಸೇಹಿತರು, ಅಭಿಮಾನಿಗಳು, ಹಿತೈಷಿಗಳಿಂದ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1