ನಾನು ಪವಿತ್ರಾಳನ್ನು ಮದುವೆಯಾಗುತ್ತೇನೆ ; ನರೇಶ್ ಹಂಚಿಕೊಂಡ ವಿಡಿಯೋ ವೈರಲ್…!

ತೆಲುಗಿನ ಹಿರಿಯ ನಟ ನರೇಶ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಶೀಘ್ರದಲ್ಲೇ ತಮ್ಮ ಸಹ ನಟಿ ಮತ್ತು ಸ್ನೇಹಿತೆ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ವಿಡಿಯೋವನ್ನು ಶೇರ್ ಮಾಡುತ್ತಾ..
ಹೊಸ ವರ್ಷ..
ಹೊಸ ಆರಂಭ..
ನಿಮ್ಮೆಲ್ಲರ ಆಶೀರ್ವಾದ ಬೇಕು.  ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ನರೇಶ್ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುವುದು ಗೊತ್ತೇ ಇದೆ.  ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಪವಿತ್ರಾ ಮತ್ತು ನರೇಶ್ ಅವರನ್ನು ಹೋಟೆಲ್‌ವೊಂದರಲ್ಲಿ ರೆಡ್‌ಹ್ಯಾಂಡ್‌ ಆಗಿ ಹಿಡಿದು ಜಗಳವಾಡಿದ್ದರು.

ಆ ನಂತರ ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಪವಿತ್ರಾ ಪತಿಯಿಂದ ದೂರವಾಗಿ ವರ್ಷಗಳೇ ಕಳೆದಿವೆ. ಕೊನೆಗೆ 2023ರಲ್ಲಿ ನರೇಶ್ ಮತ್ತು ಪವಿತ್ರಾ ಮದುವೆಯಾಗಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂರನೇ ಪತ್ನಿ ರಮ್ಯಾ ಜೊತೆಗಿನ ವಿಚ್ಛೇದನ ಪ್ರಕ್ರಿಯೆ ಮುಗಿದ ನಂತರವೇ ನರೇಶ್ ಪವಿತ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

The post ನಾನು ಪವಿತ್ರಾಳನ್ನು ಮದುವೆಯಾಗುತ್ತೇನೆ ; ನರೇಶ್ ಹಂಚಿಕೊಂಡ ವಿಡಿಯೋ ವೈರಲ್…! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/VndlbK2
via IFTTT

Leave a Reply

Your email address will not be published. Required fields are marked *