T20 World Cup 2024: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಈ ದಿನದಂದು ಭಾರತ- ಪಾಕ್ ಫೈಟ್.

ಬಾಂಗ್ಲಾದೇಶದ ಬದಲಿಗೆ ಯುಎಇಯಲ್ಲಿ ನಡೆಯಲ್ಲಿರುವ ಮಹಿಳಾ ಟಿ20 ವಿಶ್ವಕಪ್​ನ ಹೊಸ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆಗೊಳಿಸಿದೆ. ಈ ಪಂದ್ಯಾವಳಿಗೆ ಯುಎಇಯ ದುಬೈ ಮತ್ತು ಶಾರ್ಜಾದ ಎರಡು ಕ್ರೀಡಾಂಗಣಗಳು ಆತಿಥ್ಯವಹಿಸಲಿದ್ದು, ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯ ಉದ್ಘಾಟನಾ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ನಡೆಯಲಿದೆ. ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಎಲ್ಲಾ ತಂಡಗಳು ತಲಾ 4 ಗುಂಪು ಪಂದ್ಯಗಳನ್ನು ಆಡಲಿವೆ. ಅದರಂತೆ ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿದ್ದರೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಲ್ಲಿವೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆದರೆ, ಫೈನಲ್ ಪಂದ್ಯವು ಅಕ್ಟೋಬರ್ 20 ರಂದು ದುಬೈನಲ್ಲಿ ನಡೆಯಲಿದೆ.

ಈ ದಿನದಂದು ಭಾರತ-ಪಾಕಿಸ್ತಾನ ಫೈಟ್

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಆದ್ದರಿಂದ ಗುಂಪು ಹಂತದಲ್ಲಿ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ಅಕ್ಟೋಬರ್ 3 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಎರಡೂ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು, ಇಲ್ಲಿ ಟೀಂ ಇಂಡಿಯಾ ಸುಲಭ ಜಯ ಸಾಧಿಸಿತ್ತು.

ದಿನಾಂಕಮುಖಾಮುಖಿಸ್ಥಳಸಮಯ
ಅಕ್ಟೋಬರ್ 3ಬಾಂಗ್ಲಾದೇಶ vs ಸ್ಕಾಟ್ಲೆಂಡ್ಶಾರ್ಜಾಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 3ಪಾಕಿಸ್ತಾನ vs ಶ್ರೀಲಂಕಾಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 4ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ದುಬೈ,ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 4ಭಾರತ vs ನ್ಯೂಜಿಲೆಂಡ್ದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 5ಬಾಂಗ್ಲಾದೇಶ vs ಇಂಗ್ಲೆಂಡ್ಶಾರ್ಜಾಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 5ಆಸ್ಟ್ರೇಲಿಯಾ vs ಶ್ರೀಲಂಕಾಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 6ಭಾರತ vs ಪಾಕಿಸ್ತಾನದುಬೈಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 6ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 7ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 8ಆಸ್ಟ್ರೇಲಿಯಾ vs ನ್ಯೂಜಿಲೆಂಡ್ಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 9ದಕ್ಷಿಣ ಆಫ್ರಿಕಾ vs ಸ್ಕಾಟ್ಲೆಂಡ್ದುಬೈಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 9ಭಾರತ vs ಶ್ರೀಲಂಕಾದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 10ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 11ಆಸ್ಟ್ರೇಲಿಯಾ vs ಪಾಕಿಸ್ತಾನದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 12ನ್ಯೂಜಿಲೆಂಡ್ vs ಶ್ರೀಲಂಕಾಶಾರ್ಜಾಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 12ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 13ಇಂಗ್ಲೆಂಡ್ vs ಸ್ಕಾಟ್ಲೆಂಡ್ಶಾರ್ಜಾಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 13ಭಾರತ vs ಆಸ್ಟ್ರೇಲಿಯಾಶಾರ್ಜಾಸಂಜೆ 6 ಗಂಟೆಗೆ
ಅಕ್ಟೋಬರ್ 14ಪಾಕಿಸ್ತಾನ vs ನ್ಯೂಜಿಲೆಂಡ್ದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 15ಇಂಗ್ಲೆಂಡ್ vs ವೆಸ್ಟ್ ಇಂಡೀಸ್ದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 17ಸೆಮಿಫೈನಲ್ 1ದುಬೈಸಂಜೆ 6 ಗಂಟೆಗೆ
ಅಕ್ಟೋಬರ್ 18ಸೆಮಿಫೈನಲ್ 2ಶಾರ್ಜಾಸಂಜೆ 6 ಗಂಟೆಗೆ
20 ಅಕ್ಟೋಬರ್ಫೈನಲ್ದುಬೈಸಂಜೆ 6 ಗಂಟೆಗೆ

Source : https://tv9kannada.com/sports/cricket-news/icc-reveals-womens-t20-world-cup-2024-updated-schedule-kannada-news-psr-890662.html

Leave a Reply

Your email address will not be published. Required fields are marked *