
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಾಡಿದ ಎಡವಟ್ಟಿನಿಂದ ಟೀಂ ಇಂಡಿಯಾ (Team India) ಕೇವಲ ಎರಡೂವರೆ ಗಂಟೆಗಳಲ್ಲಿ ನಂ.1 ಟೆಸ್ಟ್ ತಂಡ ಎಂಬ ಪಟ್ಟವನ್ನು ಕಳೆದುಕೊಂಡಿದೆ. ವಾಸ್ತವವಾಗಿ ಐಸಿಸಿ ನಿನ್ನೆ ಟೆಸ್ಟ್ ತಂಡಗಳ ಶ್ರೇಯಾಂಕ (Test rankings) ಬಿಡುಗಡೆ ಮಾಡಿತ್ತು. ಆ ಪಟ್ಟಿಯ ಪ್ರಕಾರ ಟೀಂ ಇಂಡಿಯಾ ನಂ.1 ಸ್ಥಾನವನ್ನು ಅಲಂಕರಿಸಿತ್ತು. ಆದರೆ ಕೇವಲ ಎರಡೂವರೆ ಗಂಟೆಗಳಲ್ಲಿ ಮತ್ತೆ ಶ್ರೇಯಾಂಕದ ಪಟ್ಟಿಯಲ್ಲಿ ಬದಲಾವಣೆ ಮಾಡಿರುವ ಐಸಿಸಿ ಟೀಂ ಇಂಡಿಯಾವನ್ನು ನಂ.1 ಸ್ಥಾನದಿಂದ ಕೆಳಗಿಳಿಸಿ ನಂ.2 ಸ್ಥಾನಕ್ಕೆ ತಂದು ಕೂರಿಸಿದೆ. ಹಾಗೆಯೇ ಮೊದಲ ಪಟ್ಟಿಯಲ್ಲಿ ನಂ.2 ಸ್ಥಾನ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ನಂ.1 ಸ್ಥಾನವನ್ನು ಅಲಂಕರಿಸಿದೆ. ಆದರೆ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡ ಯಾವುದೇ ಪಂದ್ಯವನ್ನು ಆಡದೆ ಕೆಲವೇ ಗಂಟೆಗಳಲ್ಲಿ ಶ್ರೇಯಾಂಕದಲ್ಲಿ ಬದಲಾವಣೆ ಕಂಡಿದ್ದು ಹೇಗೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡುತ್ತಿದೆ.
ಮಂಗಳವಾರ ಬೆಳಿಗ್ಗೆ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವು ನಂಬರ್ ಒನ್ ಕುರ್ಚಿಯಲ್ಲಿತ್ತು. ಆದರೆ ಅದೇ ದಿನ 1:30 ರ ಸುಮಾರಿಗೆ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾ ನಂಬರ್ ಒನ್ ಸ್ಥಾನಕ್ಕೆ ತಲುಪಿತು. ಇದರ ನಂತರ ಮತ್ತೆ ಸಂಜೆ ವೇಳೆಗೆ ಶ್ರೇಯಾಂಕಗಳನ್ನು ಬದಲಾಯಿಸಿದ ಐಸಿಸಿ ಆಸ್ಟ್ರೇಲಿಯ ತಂಡವನ್ನು ಮತ್ತೆ ನಂಬರ್-1 ಸ್ಥಾನಕ್ಕೆ ತಂದು ಕೂರಿಸಿದೆ.
Like this tweet if you can see your team
#ICCRankings || #TeamIndia pic.twitter.com/rVBD2WXk6n
— Sir BoiesX
(@BoiesX45) January 17, 2023
ಶ್ರೇಯಾಂಕಗಳಲ್ಲಿ ಬದಲಾವಣೆ
ಈ ಎಲ್ಲಾ ಬದಲಾವಣೆಗಳ ನಡುವೆ, ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯಿಂದ ತಾಂತ್ರಿಕ ದೋಷ ಕಂಡುಬಂದಿದೆ ಎಂಬ ವಿಷಯವನ್ನು ಸ್ಪಷ್ಟವಾಗಿ ಊಹಿಸಬಹುದು. ಏಕೆಂದರೆ ಬೆಳಿಗ್ಗೆ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ರೇಟಿಂಗ್ ಪಾಯಿಂಟ್‌ಗಳು ಬೇರೆಯಾಗಿದ್ದವು. ಬಳಿಕ ಸಂಜೆ ಬಿಡುಗಡೆ ಮಾಡಿದ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಪಡೆದುಕೊಂಡಿದ್ದ ರೇಟಿಂಗ್ ಪಾಯಿಂಟ್ಗಳೆ ಬೇರೆಯಾಗಿದ್ದವು. ಐಸಿಸಿ ಮೊದಲು ಬಿಡುಗಡೆ ಮಾಡಿದ್ದ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅಂಕಗಳು 111 ಆಗಿದ್ದರೆ, ಭಾರತ 115 ಅಂಕಗಳನ್ನು ಪಡೆದುಕೊಂಡಿತ್ತು. ಹೀಗಾಗಿ ಟೀಂ ಇಂಡಿಯಾ ನಾಲ್ಕು ಅಂಕಗಳ ವ್ಯತ್ಯಾಸದಿಂದ ನಂಬರ್-1 ಆಗಿತ್ತು. ಆದರೆ ಸಂಜೆ ಮಾಡಿದ ಬದಲಾವಣೆಯಲ್ಲಿ ಆಸ್ಟ್ರೇಲಿಯ 126ಅಂಕಗಳನ್ನು ಪಡೆದುಕೊಂಡು ನಂ.1 ಸ್ಥಾನ ಪಡೆದುಕೊಂಡಿತು. ಅಂದರೆ ಆಸ್ಟ್ರೇಲಿಯ ಒಂದೇ ಒಂದು ಪಂದ್ಯ ಆಡದೇ ಎರಡೂವರೆ ಗಂಟೆಯೊಳಗೆ 14 ಅಂಕ ಗಳಿಸಿ ನಂಬರ್-1 ಸ್ಥಾನ ಪಡೆದುಕೊಂಡಿದೆ.
Axar Patel Marriage: ಇಷ್ಟರಲ್ಲೇ ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್
ಇದರರ್ಥ ಐಸಿಸಿ ತನ್ನ ಲೆಕ್ಕಾಚಾರದಲ್ಲಿ ಲೋಪವೆಸಗಿದ್ದು, ಅದಕ್ಕಾಗಿಯೇ ಎರಡು ಬಾರಿ ರ್ಯಾಂಕಿಂಗ್ ಬದಲಾಯಿಸಬೇಕಾಯಿತು ಎಂಬುದನ್ನು ನಾವೇ ಊಹಿಸಬಹುದಾಗಿದೆ. ಆದರೆ, ಕೆಲ ಕಾಲ ಮಾತ್ರ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿ ಅಭಿಮಾನಿಗಳಿಗೆ ಸಂತಸ ತಂದಿದಂತ್ತು ನಿಜ.
ಐಸಿಸಿ ಟೆಸ್ಟ್ ಶ್ರೇಯಾಂಕ ಹೀಗಿದೆ
ಈಗ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಶ್ರೇಯಾಂಕವನ್ನು ನೋಡಿದರೆ, ಆಸ್ಟ್ರೇಲಿಯಾ ನಂಬರ್-1 ಸ್ಥಾನದಲ್ಲಿದ್ದರೆ, ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ 107 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 102 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 99 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆರನೇ, ಶ್ರೀಲಂಕಾ ಏಳನೇ, ವೆಸ್ಟ್ ಇಂಡೀಸ್ ಎಂಟನೇ, ಬಾಂಗ್ಲಾದೇಶ ಒಂಬತ್ತನೇ ಮತ್ತು ಜಿಂಬಾಬ್ವೆ ತಂಡ 10 ನೇ ಸ್ಥಾನದಲ್ಲಿದೆ.
ಮುಂದಿನ ತಿಂಗಳಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಈ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಈ ಸರಣಿಯೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪುವ ಹಾದಿ ಸುಲಭವಾಗಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಸಾಧ್ಯತೆಯಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ