2024-2027ರ ನಡುವೆ ನಡೆಯಲಿರುವ ಎಲ್ಲಾ ಐಸಿಸಿ ಈವೆಂಟ್ಗಳ ವೇಳಾಪಟ್ಟಿಯನ್ನು ಬಹಿರಂಗಪಡಿಸಲಾಗಿದ್ದು, ಇದರಲ್ಲಿ ಭಾರತ ಎರಡು ಐಸಿಸಿ ವಿಶ್ವಕಪ್ಗಳನ್ನು ಆಯೋಜಿಸಬೇಕಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಸೋಲು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ತವರಿನಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಕೈತಪ್ಪಿಹೋಯಿತು ಎಂದು ಎಲ್ಲರೂ ಬೇಸರ ವ್ಯಕ್ತಪಡಿಸಿದ್ದರು.
ಆದರೆ ಭಾರತೀಯ ಅಭಿಮಾನಿಗಳಿಗೆ ಐಸಿಸಿಯಿಂದ ಸಂತಸದ ಸುದ್ದಿ ಬಂದಿದೆ. ಭಾರತದಲ್ಲಿ ಬರೋಬ್ಬರಿ 2 ವಿಶ್ವಕಪ್ಗಳು ನಡೆಯಲಿವೆ. ಮುಂದಿನ ನಾಲ್ಕು ವರ್ಷಗಳ ಐಸಿಸಿ ಈವೆಂಟ್ಗಳ ಪಟ್ಟಿಯನ್ನು ಬಹಿರಂಗಪಡಿಸಲಾಗಿದೆ.
ಹೌದು, 2024-2027ರ ನಡುವೆ ನಡೆಯಲಿರುವ ಎಲ್ಲಾ ಐಸಿಸಿ ಈವೆಂಟ್ಗಳ ವೇಳಾಪಟ್ಟಿಯನ್ನು ಬಹಿರಂಗಪಡಿಸಲಾಗಿದ್ದು, ಇದರಲ್ಲಿ ಭಾರತ ಎರಡು ಐಸಿಸಿ ವಿಶ್ವಕಪ್ಗಳನ್ನು ಆಯೋಜಿಸಬೇಕಿದೆ.
ಮುಂದಿನ ಎರಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಐಸಿಸಿ ಇಂಗ್ಲೆಂಡ್ಗೆ ನೀಡಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಬೇಕಿದೆ.
ಮುಂದಿನ ನಾಲ್ಕು ವರ್ಷಗಳ ಐಸಿಸಿಯ ಈವೆಂಟ್ಗಳ ಪಟ್ಟಿಯನ್ನು ನಾವು ಗಮನಿಸಿದರೆ, ಭಾರತವು ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುವ ಅವಕಾಶವನ್ನು ಹೊಂದಿದೆ. ಈ ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್ ನಡುವೆ ಆಯೋಜಿಸಲಾಗುತ್ತದೆ.
ಇದಲ್ಲದೆ, ಭಾರತವು 2026ರಲ್ಲಿ ಶ್ರೀಲಂಕಾದೊಂದಿಗೆ ಪುರುಷರ T20 ವಿಶ್ವಕಪ್ ಅನ್ನು ಸಹ ಆಯೋಜಿಸುತ್ತದೆ. ಈ ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್ನಲ್ಲಿ ಆಯೋಜಿಸಲಾಗಿದೆ.
ಈ ಮೂಲಕ ಭಾರತಕ್ಕೆ 2 ವಿಶ್ವಕಪ್ ಆಯೋಜನೆಯ ಅವಕಾಶ ದೊರಕಿದೆ. ಆದರೆ ಮತ್ತೊಮ್ಮೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಇಂಗ್ಲೆಂಡ್ಗೆ ನೀಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1