ಸಾವಿನ ನಂತರ ಸ್ವರ್ಗ ಅಥವಾ ನರಕವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಅದು ವ್ಯಕ್ತಿಯ ಕಾರ್ಯಗಳನ್ನು ಆಧರಿಸಿರುತ್ತದೆ. ಇನ್ನು ಇಂತಹ ದಿನ ಸತ್ತರೆ ಸ್ವರ್ಗಕ್ಕೆ ಹೋಗುತ್ತಾರೆ ಅಂತೆಲ್ಲಾ ಹೇಳಲಾಗುತ್ತಿದೆ. ಅದರಂತೆ ಹಬ್ಬದ ಇದನ ಸತ್ತರೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎನ್ನುವ ಭ್ರಮೆಯಲ್ಲೇ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು, (ನವೆಂಬರ್ 03): ಹಬ್ಬದ ದಿನ ಸತ್ತರ ಸ್ವರ್ಗ ಪ್ರಾಪ್ತಿಯಾಗುತ್ತೆ ಎನ್ನುವ ಭ್ರಮೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭೂಸಂದ್ರದಲ್ಲಿ ನಡೆದಿದೆ. ಭೂಸಂದ್ರದ ಕೃಷ್ಣಮೂರ್ತಿ(40) ಮೃತ ದುರ್ದೈವಿ. ನಿನ್ನೆ(ನವೆಂಬರ್ 02) ದೀಪಾವಳಿ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಹಬ್ಬದ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚೆ ನಡೆಸಿದ್ದಾನೆ. ಬಳಿಕ ನೇಣುಬಿಗಿದ್ದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮೃತ ಕೃಷ್ಣಮೂರ್ತಿ 22/11/2022ರಂದು ತನ್ನ ಪತ್ನಿಯನ್ನ ಕೊಂದು ಜೈಲು ಸೇರಿದ್ದ. ಎರಡು ವರ್ಷ ಜೈಲಿನಲ್ಲಿ ಇದ್ದು ಕಳೆದ 6 ತಿಂಗಳ ಹಿಂದೆ ಬಿಡುಗಡೆಯಾಗಿ ಆಚೆ ಬಂದಿದ್ದ. ಆದರೆ ತಲೆಯಲ್ಲಿ ಅದೇಗೆ ಯೋಚನೆ ಬಂತೋ ಏನೋ ನಿನ್ನೆ ಸ್ನೇಹಿತರೊಂದಿಗೆ ಹಬ್ಬ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚಿಸಿ ಬಳಿಕ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.