IPL 2023: ಮಾರ್ಷ್ ಮಿಂಚಿದ್ರೆ, ಈ ಸಲ ಕಪ್ ಅವರದ್ದೇ ಎಂದ ಜಡೇಜಾ..!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಪ್ಲೇಆಫ್ ಪ್ರವೇಶಿಸುವ ಹಾಗೂ ಕಪ್ ಗೆಲ್ಲುವ ತಂಡಗಳ ಬಗ್ಗೆ ಚರ್ಚೆಗಳು ಕೂಡ ಆರಂಭವಾಗಿದೆ. ಈ ಚರ್ಚೆಗಳ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ನೀಡಿರುವ ಹೇಳಿಕೆ ಇದೀಗ ಎಲ್ಲರ ಗಮನ ಸೆಳೆದಿದೆ.ಐಪಿಎಲ್ ಸಂವಾದವೊಂದರಲ್ಲಿ ಮಾತನಾಡಿದ ಅಜಯ್ ಜಡೇಜಾ, ಈ ಬಾರಿ ರಿಷಭ್ ಪಂತ್ ಇಲ್ಲದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠವಾಗಿದೆ. ಅವರ ಬ್ಯಾಟಿಂಗ್​ ಕ್ರಮಾಂಕದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರೋವ್‌ಮನ್ ಪೊವೆಲ್ ಮತ್ತು ರಿಲೀ ರೊಸ್ಸೊ ಅವರ ಫೈರ್ ಪವರ್ ಬ್ಯಾಟ್ಸ್​ಮನ್​ಗಳಿದ್ದಾರೆ.ಅದರಲ್ಲೂ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ ಸಂಚಲನ ಸೃಷ್ಟಿಸಿದ್ದರು. ಅವರ ಈ ಅದ್ಭುತ ಪ್ರದರ್ಶನದಿಂದಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಅಭಿಯಾನಿಗಳು ಫುಲ್ ಖುಷಿಯಾಗಿದ್ದಾರೆ. ಪ್ರಮುಖ ಆಟಗಾರರು ಫಾರ್ಮ್​ನಲ್ಲಿದ್ದರೆ ಮಾತ್ರ ಒಂದು ತಂಡವು ಗೆಲ್ಲಲು ಸಾಧ್ಯ.ಇದೀಗ ಮಿಚೆಲ್ ಮಾರ್ಚ್ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅವರ ಸಹೋದರ ಶಾನ್ ಮಾರ್ಷ್ 2008 ರಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೆ ಅವರಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಕಪ್ ಗೆದ್ದು ಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧ್ಭುತ ಫಾರ್ಮ್​ನಲ್ಲಿರುವ ಮಿಚೆಲ್ ಮಾರ್ಷ್ ಆರೆಂಜ್ ಕ್ಯಾಪ್ ಗೆದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ. ಏಕೆಂದರೆ ಮಾರ್ಷ್ ಇಡೀ ಟೂರ್ನಿಯನ್ನು ಗೆಲ್ಲಿಸಿಕೊಡಬಲ್ಲ ಆಟಗಾರ. ಇದೇ ಕಾರಣದಿಂದಾಗಿ ಆಲ್​ರೌಂಡರ್ ಆಗಿರುವ ಮಿಚೆಲ್ ಮಾರ್ಷ್ ಮಿಂಚಿದರೆ ಕಪ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಲಿದೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ​: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಕುಲದೀಪ್ ಯಾದವ್, ವಿಕಿ ಓಸ್ಟ್ವಾಲ್, ರಿಲೀ ರೊಸೊ, ಮನೀಶ್ ಪಾಂಡೆ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ , ಫಿಲ್ ಸಾಲ್ಟ್, ರಿಷಭ್ ಪಂತ್ (ಗಾಯಾಳು).

source https://tv9kannada.com/photo-gallery/cricket-photos/ipl-2023-kannada-ajay-jadejas-insane-ipl-2023-prediction-zp-au50-542897.html

Views: 0

Leave a Reply

Your email address will not be published. Required fields are marked *