IPL 2023: ಮುಂಬೈ ಇಂಡಿಯನ್ಸ್ ಗೆದ್ದರೆ, RCB ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಮಾಹಿತಿ

IPL 2023: ಐಪಿಎಲ್​ ಸೀಸನ್ 16 ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನುಳಿದಿರುವುದು ಮುಂಬೈ ಇಂಡಿಯನ್ಸ್ - ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಆರ್​ಸಿಬಿ - ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಗಳು ಮಾತ್ರ.ಆದರೆ ಈ ಕೊನೆಯ 2 ಪಂದ್ಯಗಳೇ ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಅಂದರೆ ಈಗಾಗಲೇ ಗುಜರಾತ್ ಟೈಟಾನ್ಸ್, ಸಿಎಸ್​ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇಆಫ್ ಹಂತಕ್ಕೇರಿದೆ. ಇನ್ನುಳಿದಿರುವ 4ನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವೆ ಪೈಪೋಟಿ ಏರ್ಪಟ್ಟಿದೆ.ಇಲ್ಲಿ ಎಸ್​ಆರ್​ಹೆಚ್​ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ 16 ಪಾಯಿಂಟ್ಸ್​​ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಆದರೆ ಅತ್ತ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಜಯ ಸಾಧಿಸಿದರೆ 16 ಪಾಯಿಂಟ್ಸ್​ ಕಲೆಹಾಕಿ ಮುಂಬೈ ಇಂಡಿಯನ್ಸ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬಹುದು.
ಅಂದರೆ ಇಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ನೆಟ್ ರನ್​ ರೇಟ್​ನೊಂದಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈಗಾಗಲೇ MI vs SRH ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಅದರಂತೆ ಮುಂಬೈ ಇಂಡಿಯನ್ಸ್ ಚೇಸಿಂಗ್ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್​ಗೆ ಇಳಿಯಲಿದೆ. ಅಂದರೆ ಮುಂಬೈ ಇಂಡಿಯನ್ಸ್ ನಿರ್ದಿಷ್ಟ ಓವರ್​ಗಳಲ್ಲಿ ಎಸ್​ಆರ್​ಹೆಚ್ ನೀಡಿದ ಗುರಿಯನ್ನು ಚೇಸ್ ಮಾಡಿದರೆ ಆರ್​ಸಿಬಿಗಿಂತ ನೆಟ್ ರನ್​ ರೇಟ್ ಹೆಚ್ಚಿಸಿಕೊಳ್ಳಬಹುದು. ಈ ಲೆಕ್ಕಾಚಾರಗಳು ಯಾವುವು, ಈ ಮಾಸ್ಟರ್​ ಪ್ಲ್ಯಾನ್​ ಆರ್​ಸಿಬಿ ಹೇಗೆ ಉತ್ತರ ನೀಡಬಹುದು ಎಂಬುದನ್ನು ನೋಡೋಣ..ಎಸ್​ಆರ್​ಹೆಚ್ ನೀಡಿದ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 8 ಓವರ್​ಗಳಲ್ಲಿ ಚೇಸ್ ಮಾಡಿದರೆ, ಆರ್​ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 40 ರನ್​ಗಳ ಅಂತರದಿಂದ ಗೆಲ್ಲಲೇಬೇಕು.ಒಂದು ವೇಳೆ ಮುಂಬೈ ಇಂಡಿಯನ್ಸ್ ಎಸ್​ಆರ್​ಹೆಚ್​ ನೀಡಿದ ಗುರಿಯನ್ನು ಬೆನ್ನತ್ತಲು 10 ಓವರ್ ತೆಗೆದುಕೊಂಡರೆ, ಆರ್​ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ 20 ರನ್​ಗಳ ಅಂತರದಿಂದ ಗೆಲ್ಲಬೇಕು.ಇನ್ನು ಎಸ್​ಆರ್​​ಹೆಚ್ ತಂಡದ ಟಾರ್ಗೆಟ್​ ಅನ್ನು ಬೆನ್ನತ್ತಲು ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು 12 ಓವರ್​ ಅಥವಾ ಅದಕ್ಕಿಂತ ಹೆಚ್ಚಿನ ಓವರ್​ ತೆಗೆದುಕೊಂಡರೆ, ಆರ್​ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಸಾಕು. ಅಂದರೆ ಎಸ್​ಆರ್​ಹೆಚ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 12 ಓವರ್ ಬ್ಯಾಟಿಂಗ್ ಮಾಡಿದ್ರೆ, ಅತ್ತ ಆರ್​ಸಿಬಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿ 16 ಪಾಯಿಂಟ್ಸ್​ನೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ.

source https://tv9kannada.com/photo-gallery/cricket-photos/ipl-2023-rcbs-equation-based-on-mi-vs-srh-kannada-news-zp-583888.html

Leave a Reply

Your email address will not be published. Required fields are marked *