Health: ಮುಂಜಾನೆ ಎದ್ದ ತಕ್ಷಣ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು, ದೃಷ್ಟಿ ಮಂದವಾಗುವ ಅನುಭವವಿದ್ದರೆ, ನಿಮಗೆ ಅಧಿಕ ರಕ್ತದ ಸಕ್ಕರೆ ಸಮಸ್ಯೆ ಇದೆ ಎಂದು ಅರ್ಥ. ಟೈಪ್ 1 ಮಧುಮೇಹ ಹೊಂದಿರುವ ಜನರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಹೀಗಾಗಿ ನಾವು ನಿಮಗೆ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ದೇಹಕ್ಕೆ ಸರಿಯಾದ ರೀತಿಯ ಪೌಷ್ಟಿಕಾಂಶವನ್ನು ನೀಡಲು ಉತ್ತಮ ಸಮಯ ಬೆಳಿಗ್ಗೆ. ನೀವು ಸರಿಯಾದ ಪ್ರಮಾಣದ ಪ್ರೋಟೀನ್’ಗಳು, ಕಾರ್ಬೋಹೈಡ್ರೇಟ್’ಗಳು, ಹೆಲ್ತಿ ಕೊಲೆಸ್ಟ್ರಾಲ್, ಫೈಬರ್ ಮತ್ತು ಪಿಷ್ಟವನ್ನು ಹೊಂದಿರದ ಆಹಾರಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ನಮ್ಮ ಯಕೃತ್ತು ದಿನಕ್ಕೆ ಹೆಚ್ಚುವರಿ ಗ್ಲೂಕೋಸ್ ಅನ್ನು ದೇಹಕ್ಕೆ ಇಂಧನವಾಗಿ ಪೂರೈಕೆ ಮಾಡಿದರೂ ಸಹ, ಮಧುಮೇಹ ಹೊಂದಿರುವ ಜನರು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳವಾಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ಹೈಪರ್ಗ್ಲೈಸೀಮಿಯಾಕ್ಕೆ ಕಾರಣವಾಗಬಹುದು.
ಮುಂಜಾನೆ ಎದ್ದ ತಕ್ಷಣ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು, ದೃಷ್ಟಿ ಮಂದವಾಗುವ ಅನುಭವವಿದ್ದರೆ, ನಿಮಗೆ ಅಧಿಕ ರಕ್ತದ ಸಕ್ಕರೆ ಸಮಸ್ಯೆ ಇದೆ ಎಂದು ಅರ್ಥ. ಟೈಪ್ 1 ಮಧುಮೇಹ ಹೊಂದಿರುವ ಜನರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಹೀಗಾಗಿ ನಾವು ನಿಮಗೆ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ತುಪ್ಪ ಮತ್ತು ಅರಿಶಿನ ಪುಡಿ: ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರಬೇಕೆಂದರೆ, ಬೆಳಿಗ್ಗೆ 1 ಟೀ ಚಮಚ ಹಸುವಿನ ತುಪ್ಪವನ್ನು ಅರಿಶಿನ ಪುಡಿಯೊಂದಿಗೆ ಬೆರೆಸಿ ಸೇವಿಸಿ.
ಆಕ್ಲೈನ್ ಪಾನೀಯಗಳು:1 ಟೀ ಚಮಚ ಆಪಲ್ ಸೈಡರ್ ವಿನೆಗರ್, 30 ಮಿಲಿ ಆಮ್ಲಾ ಜ್ಯೂಸ್ ಅಥವಾ 100 ಮಿಲಿ ನಿಂಬೆ ರಸದೊಂದಿಗೆ 100 ಮಿಲಿ ನೀರನ್ನು ಮಿಕ್ಸ್ ಮಾಡಿ ಸೇವಿಸಬೇಕು, ಇದು ದೇಹದ ಕ್ಷಾರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಗಿಡಮೂಲಿಕೆ ಚಹಾ: ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಅದ್ಭುತ ಮಸಾಲೆಯಾಗಿದೆ. ದಾಲ್ಚಿನ್ನಿ ಪುಡಿಯ ಸಹಾಯದಿಂದ ಚಹಾವನ್ನು ತಯಾರಿಸಿ. ಇದನ್ನು ಸೇವಿಸಿದರೆ ದಿನವಿಡೀ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮೆಂತ್ಯ ನೀರು: ಮೆಂತ್ಯ ನೀರು ನಿಮ್ಮ ದೈನಂದಿನ ಕಾರ್ಬೋಹೈಡ್ರೇಟ್’ಗಳ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 1 ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ. ಬಳಿಕ ಆ ಬೀಜಗಳನ್ನು ಅಗಿದು ತಿಂದರೆ ಮಧುಮೇಹ ನಿಯಂತ್ರಿಸಲ್ಪಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Samagrasuddi.co.in ಅದನ್ನು ಖಚಿತಪಡಿಸುವುದಿಲ್ಲ.)
Views: 0