“ಕಾರ್ಡ ನಿಷ್ಕ್ರಿಯೆಯಾದರೆ ನಿಮಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ”

ಚಿತ್ರದುರ್ಗ ಆ. 12

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಸರ್ಕಾರ ಸೌಲಭ್ಯಗಳನ್ನು ಪಡೆಯಬೇಕಾದರೆ ನಿಮ್ಮಲ್ಲಿ ಇರುವ ಕಾರ್ಮಿಕ ಕಾರ್ಡ ಚಾಲ್ತಿಯಲ್ಲಿ ಇದ್ದಾಗ ಮಾತ್ರ ಪಡೆಯಲು ಸಾಧ್ಯವಿದೆ ಕಾರ್ಡ ನಿಷ್ಕ್ರಿಯೆಯಾದರೆ ನಿಮಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ ಈ ಹಿನ್ನಲೆಯಲ್ಲಿ ನಿಮ್ಮ ಕಾರ್ಡನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಕಾರ್ಮಿಕರಿಗೆ ಕಾರ್ಮಿಕ ಅಧಿಕಾರಿಗಳು, ಅನಿಲ್ ಬಿ. ಬಗಟಿ ಕರೆ ನೀಡಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ 7ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಇತ್ತೀಚೆಗೆ ಕಟ್ಟಡ ಕಾರ್ಮಿಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಾ ಬಂದಿದೆ ನಿಮಗೆ ಅಲ್ಲದೆ ನಿಮ್ಮ ಕುಟುಂಬದವರಿಗೂ ಸಹಾ ಸೌಲಭ್ಯವನ್ನು ನೀಡುತ್ತಾ ಇದೆ. ಆದರೆ ಇದನ್ನು ಪಡೆಯಲು ಕಾರ್ಮೀಕರಾದವರು ನಿಮ್ಮ ಬಳಿಯಲ್ಲಿನ ಕಾರ್ಮಿಕರ ಕಾರ್ಡನ್ನು ಸರಿಯಾದ ರೀತಿಯಲ್ಲಿ ನೊಂದಾಣಿಯನ್ನು ಮಾಡಿಸಿರಬೇಕಿದೆ, ಆಕಸ್ಮಾತ್ ನಿಮ್ಮ ನೊಂದಾಣಿ ಇಲ್ಲದಿದ್ದರೆ ಸರ್ಕಾರದ ಸೌಲಭ್ಯ ಪಡೆಯಲು ಆಗುವುದಿಲ್ಲ. ಈ ಹಿನ್ನಲೆಯಲ್ಲಿ ನಿಮ್ಮ ಕಾರ್ಡನ್ನು ವರ್ಷದಿಂದ ವರ್ಷಕ್ಕೆ ಪುನರ್ ನವೀಕರಣ ಮಾಡಿಕೊಳ್ಳುವುದನ್ನು ಮರೆಯಬೇಡಿ ಎಂದು ತಿಳಿಸಿದರು.

ಸರ್ಕಾರ ನಿಮ್ಮ ಕುಟುಂಬಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುವ ಮಕ್ಕಳಿಗೆ ಸ್ಕಾಲರಶಿಪ್, ಮಕ್ಕಳ ಮದುವೆ ಯಾದರೆ ಸಹಾಯಧನ, ಅನಾರೋಗ್ಯ ಉಂಟಾದರೆ ವೈದ್ಯಕೀಯ ಭತ್ಯೆ, 60 ವರ್ಷ ಮೀರಿದ ಕಾರ್ಮೀಕರಿಗೆ ಪಿಂಚಿಣಿ ಸೌಲಭ್ಯ ಕಾರ್ಮಿಕರ ಕಾರ್ಡ ಸರಿಯಾದ ರೀತಿಯಲ್ಲಿ ಇದ್ದರೆ ಮಾತ್ರ ಸಿಗಲಿದೆ ಎಂದ ಅವರು ಬಹಳಷ್ಟು ಜನ ಕಾರ್ಮಿಕರು ತಮ್ಮ ಕಾರ್ಮಿಕ ಕಾರ್ಡನ್ನು ಮಾಡಿಸುತ್ತಾರೆ ಆದರೆ ಕಾಲಕ್ಕೆ ಸರಿಯಾಗಿ ಅದರ ರಿನಿವಲ್ ಮಾಡಿಸುವುದಿಲ್ಲ ಅವರಿಗೆ ಏನಾದರೂ ಕಷ್ಟ ಬಂದಾಗ ಕಾರ್ಡ ನೆನಪಾಗುತ್ತದೆ ಆಗ ಕಾರ್ಡ ರಿನಿವಲ್ ಆಗಿಲ್ಲದಿದ್ದರೆ ಸರ್ಕಾರದ ಸೌಲಭ್ಯ ಸಿಗವುದು ಕಷ್ಟವಾಗುತ್ತದೆ ಈ ಹಿನ್ನಲೆಯಲ್ಲಿ ಕಾಲ ಕಾಲಕ್ಕೆ ನಿಮ್ಮ ಕಾರ್ಮಿಕ ಕಾರ್ಡನ್ನು ರಿನಿವಲ್ ಮಾಡಿಸಿ ಇದರ ಬಗ್ಗೆ ನಿಮ್ಮ ಕಾರ್ಮಿಕರ ಸಂಘವೂ ಸಹಾ ಆಸಕ್ತಿಯನ್ನು ತೋರಿಸಿ ಯಾರ ಕಾರ್ಡ ರಿನಿವಲ್ ಆಗಿಲ್ಲ ಅಗಿದೆ  ಎಂಬುದರ ಬಗ್ಗೆ ಗಮನಹರಿಸಬೇಕಿದೆ ಎಂದು ಕಾರ್ಮಿಕ ಸಂಘದ ಮುಖಂಡರಿಗೆ ಕಿವಿ ಮಾತು ಹೇಳಿದರು.

ಕಾರ್ಮಿಕ ನಿರೀಕ್ಷಕರು, ಪಿ. ಭೀಮೇಶ್ ಮಾತನಾಡಿ, ಕಾರ್ಮೀಕರಿಗೆ ಸರ್ಕಾರದವತಿಯಿಂದ ಸಿಗುವಂತ ವಿವಿದ ರೀತಿಯ ಸೌಲಭ್ಯ ಹಾಗೂ ಸಹಾಯವನ್ನು ತಿಳಿಯುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಕಟ್ಟಡ ಕಾರ್ಮಿಕರು ಎಂದರೆ ದುಡಿಯಯವ ವರ್ಗವಾಗಿದೆ. ನಿಮ್ಮಲ್ಲಿ ಸರಿಯಾದ ಸಂಘಟನೆ ಅಗತ್ಯವಾಗಿದೆ, ಪ್ರತಿ ತಿಂಗಳು ನಿಮ್ಮ ಸಂಘದಲ್ಲಿ ಸಭೆಯನ್ನು ಮಾಡುವುದರ ಮೂಲಕ ಸರ್ಕಾರದ ಸೌಲಭ್ಯ ಸಹಾಯ ಹಾಗೂ ಕಾನೂನುಗಳ ತಿದ್ದುಪಡಿಯ ಬಗ್ಗೆ ಮಾಹಿತಿಯನ್ನು ಪಡೆಯಿರಿ. ಕಾರ್ಡಗಳ ನವೀಕರಣ ಈ ಹಿಂದೆ ಮೂರು ವರ್ಷಕ್ಕೋಮ್ಮೆ ಇರುತ್ತಿತ್ತು ಆದರೆ ಈಗ ಸರ್ಕಾರ ಆದನ್ನು ವರ್ಷಕ್ಕೊಮ್ಮೆ ಮಾಡಲಾಗಿದೆ. ಇದರ ಬಗ್ಗೆ ತಿಳಿಯಬೇಕಿದೆ. ಈಗ ನಿಮ್ಮ ಮಕ್ಕಳಿಗೆ ಸ್ಕಾಲರಶಿಪ್ ಪಡೆಯಲು ಅರ್ಜೀಯನ್ನು ಕರೆಯಲಾಗಿದೆ ಇದರ ಸದುಪಯೋಗವನ್ನು ಪಡೆಯಿರಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿ ಜಿ.ಕ.ಕಾ.ಫೆ,ಯ ಗೌರವ ಅಧ್ಯಕ್ಷರಾದ ಅಬ್ದುಲ್ಲಾ ವಹಿಸಿದ್ದರು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನ ರಾಜ್ಯ ಕಾರ್ಯಾಧ್ಯಕ್ಷರಾದ ಬಿ. ಉಮೇಶ್ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ, ಚಿತ್ರದುರ್ಗ ಹಾಗೂ ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕರಾದ ಸಿ.ಕೆ. ಗೌಸ್‍ಪೀರ್(ಸಿ.ಕೆ.ಪಿ.) ಸಿಐಟಿಯುನ ಜಿಲ್ಲಾ ಮುಖ್ಯ ಸಂಚಾಲಕ ತಿಪ್ಪೇಸ್ವಾಮಿ, ಕಟ್ಟಡ ಕಾರ್ಮಿಕ ಮಹಿಳಾ ಮುಖಂಡರು, ನಾಗಮ್ಮ ಕಾರ್ಮಿಕ ಮುಖಂಡರು, ಹನುಮಂತಪ್ಪ ಅಬಿಉಲ್ಲಾ, ಮುಬಾರಕ್, ಅಬ್ದುಲ್ಲಾ, ಎಂ.ಕೆ.ಹಟ್ಟಿ,  ಶೇಕ್ ಕಲೀಮ್ ಉಲ್ಲಾ ಭಾಗವಹಿಸಿದ್ದರು. 

Views: 24

Leave a Reply

Your email address will not be published. Required fields are marked *