ಮಕ್ಕಳು ಪಠ್ಯದ ಜೊತೆಗೆ  ಕೌಶಲ್ಯವನ್ನು ಹೊಂದಿದ್ದರೆ ಮುಂದಿನ ಅವರ ಬದುಕಿಗೆ ದಾರಿ ದೀಪವಾಗಲಿದೆ: ಎನ್.ಆರ್.ಮಂಜುನಾಥ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 28: ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ್ಯವನ್ನು ಸಹಾ ಕಲಿಸುವಂತ ಕಾರ್ಯವಾಗಬೇಕಿದೆ, ಕೌಶಲ್ಯವನ್ನು ಹೊಂದಿದ್ದರೆ ಮುಂದಿನ ಅವರ ಬದುಕಿಗೆ ದಾರಿ ದೀಪವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಆರ್.ಮಂಜುನಾಥ್ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂಧ ಬಡಾವಣೆಯಲ್ಲಿನ ಶ್ರೀ ಸದ್ಗರು ಕಬೀರಾನಂಧಸ್ವಾಮಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ
ಹಿರಿಯ ಶಾಲೆಯ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಪ್ರತಿಭೆ ಹಾಗೂ ಕೌಶಲ್ಯ ಮೇಳವನ್ನು ಕಬೀರಾನಂದ
ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಜೊತೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ
ಪ್ರತಿಭೆಯನ್ನು ಪ್ರದರ್ಶಿಸಬೇಕು. ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಚಿಕ್ಕ ವಯಸ್ಸಿನಿಂದಲೇ
ಮಕ್ಕಳಿಗೆ ಏನಾದರೂ ಆಸಕ್ತಿಯನ್ನು ಮೂಡಿಸುವಂತವ ಕಾರ್ಯವಾಗಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವುದರಿಂದ ಅದು
ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತದೆ ಮುಂದೆಯೂ ಸಹಾ ಉಪಯೋಗಕ್ಕೆ ಬರುತ್ತದೆ ಎಂದರು.

ಮನೆಯಲ್ಲಿ ಚಿಕ್ಕ ಮಕ್ಕಳು ಏನಾದರೂ ಹೊಸದಾಗಿ ಮಾಡಿದರೆ ಅದಕ್ಕೆ ಪೋಷಕರಾದವರು ಪ್ರೋತ್ಸಾಹವನ್ನು ನೀಡಬೇಕಿದೆ, ಇದೆ
ರೀತಿ ಶಾಲೆಯಲ್ಲಿಯೂ ಸಹಾ ಶಿಕ್ಷರಾದವರು ಮಕ್ಕಳಿಲ್ಲಿ ಏನಾದರೂ ಕಲಿಯುವಂತ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ,
ಈ ಶಾಲೆಯಲ್ಲಿ ಅಭ್ಯಾಸವನ್ನು ಮಾಡುತ್ತಿರುವ ನೀವುಗಳು ಪುಣ್ಯವಂತರಾಗಿದ್ದೀರಾ ಈ ಶಾಲೆಯಲ್ಲಿ ಶಿಕ್ಷಕರ ಪಾಠದ ಜೊತೆಗೆ
ಗುರುಗಳ ಆರ್ಶೀವಾದವೂ ಸಹಾ ಸಿಗುವುದರಿಂದ ಮುಂದಿನ ನಿಮ್ಮ ಬದುಕು ಹಸನಾಗಲಿದೆ ಎಂದು ಮಂಜುನಾಥ್ ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರದುರ್ಗ ಸೈನ್ಸ್ ಫೌಂಡೇಷನ್‍ನ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ಇಂದಿನ
ದಿನದಲ್ಲಿ ವಿಜ್ಞಾನ ಎನ್ನವುದು ನಮ್ಮೆಲ್ಲರ ಜೀವನ ಹಾಗೂ ಬದುಕಿನಲ್ಲಿ ಹಾಸೂ ಹೋಕ್ಕಾಗಿದೆ, ವಿಜ್ಞಾನ ಇಲ್ಲದೆ ಜೀವನ ಇಲ್ಲ ಎನ್ನುವ
ವಾತಾರವಣ ನಿರ್ಮಾಣವಾಗಿದೆ. ನಮಗೆ ನಂಬಿಕೆ ಬೇಕು ಆದರೆ ಮೂಢನಂಬಿಕೆ ಇರಬಾರದು, ಮೂಢನಂಬಿಕೆ ಜನತೆಯಲ್ಲಿ ತಪ್ಪು
ದಾರಿಗೆ ಎಳೆಯುತ್ತದೆ ಇದರ ಬಗ್ಗೆ ಹುಷಾರಿಗೆ ಇರಬೇಕಿದೆ ಎಂದರು.

ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಎಲ್.ಪ್ರಶಾಂತ್ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ
ಧೈರ್ಯ ಮತ್ತು ಕೌಶಲ್ಯವನ್ನು ತುಂಬುವಂತ ಕಾರ್ಯವಾಗಬೇಕಿದೆ, ಇಲ್ಲಿಂದಲ್ಲೆ ಅವರನ್ನು ಸರಿದಾರಿಗೆ ತಂದರೆ ಮುಂದೆ ಅವರು
ಉತ್ತಮ ನಾಗರೀಕರಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 95ನೇ ಮಹಾಶಿವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿಜಯಕುಮಾರ್, ಉಪಾಧ್ಯಕ್ಷರಾದ ಬದರಿನಾಥ್,
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಗೋವಿಂದಪ್ಪ ಗಣಪತಿ ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *