Pressure Cooker Hacks: ವಿಶೇಷವಾಗಿ ದಾಲ್ ಮತ್ತು ಖಿಚಡಿಯನ್ನು ತಯಾರಿಸಲು ಕುಕ್ಕರ್ ಬೆಸ್ಟ್. ಇದು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಮತ್ತು ಸಮಯವನ್ನು ಉಳಿಸುತ್ತದೆ. ಆದರೆ ಹಲವು ಬಾರಿ ಕುಕ್ಕರ್’ಗಳು ಹಳೆಯದಾಗುತ್ತಿದ್ದಂತೆ ಸೋರಲು ಪ್ರಾರಂಭವಾಗುತ್ತದೆ.

Pressure Cooker Hacks: ಇತ್ತೀಚಿನ ದಿನಗಳಲ್ಲಿ ಪ್ರತೀ ಮನೆಯಲ್ಲಿಯೂ ಪ್ರೆಶರ್ ಕುಕ್ಕರ್’ನ್ನು ಬಳಸಲಾಗುತ್ತದೆ. ಶೀಘ್ರವೇ ಅಡುಗೆ ತಯಾರಿಸಲು ಇದು ಸಹಕಾರಿಯಾಗಿದೆ. ಇದು ಅಡುಗೆಮನೆಯನ್ನು ಯಾವ ರೀತಿ ಆವರಿಸಿದೆ ಎಂದರೆ, ಕುಕ್ಕರ್ ಇಲ್ಲದೆ ಅಡುಗೆ ಮಾಡುವುದೇ ಕಷ್ಟ ಎಂಬಂತೆ ಭಾಸವಾಗುತ್ತದೆ.
ವಿಶೇಷವಾಗಿ ದಾಲ್ ಮತ್ತು ಖಿಚಡಿಯನ್ನು ತಯಾರಿಸಲು ಕುಕ್ಕರ್’ ಬೆಸ್ಟ್. ಇದು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಮತ್ತು ಸಮಯವನ್ನು ಉಳಿಸುತ್ತದೆ. ಆದರೆ ಹಲವು ಬಾರಿ ಕುಕ್ಕರ್’ಗಳು ಹಳೆಯದಾಗುತ್ತಿದ್ದಂತೆ ಸೋರಲು ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ ಅದರ ವಿಝಲ್ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದಕ್ಕೆ ಪರಿಹಾರವಾಗಿ ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ಹೇಳಲಿದ್ದೇವೆ.
ಆಹಾರವನ್ನು ಬೇಯಿಸುವಾಗ ಕುಕ್ಕರ್’ನ ಮುಚ್ಚಳದಿಂದ ನೀರು ಸೋರುವುದನ್ನು ಅನೇಕ ಬಾರಿ ಕಂಡಿರುತ್ತೇವೆ. ಇದು ಕುಕ್ಕರ್‌ನ ಮುಚ್ಚಳವು ವಕ್ರವಾಗಿರುವ ಸಾಧ್ಯತೆಯಿಂದ ಹೀಗಾಗುತ್ತದೆ. ಒಮ್ಮೆ ಪರಿಶೀಲಿಸಿ. ಇನ್ನು ಈ ಸಮಸ್ಯೆ ಕಂಡುಬಂದರೆ, ಅದನ್ನು ನೀವೇ ಸರಿಪಡಿಸುವುದು ಸರಿಯಲ್ಲ. ಮಾರುಕಟ್ಟೆಯಲ್ಲಿರುವ ಮೆಕ್ಯಾನಿಕ್ ಮೂಲಕ ಅದನ್ನು ಸರಿಪಡಿಸಿ.
ಇನ್ನು ಕುಕ್ಕರ್’ನಲ್ಲಿ ಪ್ರೆಶರ್ ಸರಿಯಾಗಿ ನಿರ್ವಹಿಸದಿದ್ದರೆ, ಆಹಾರ ತಯಾರಿಸಲು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ರಬ್ಬರ್ ಅನ್ನು ಹೊರತೆಗೆದು ಒಮ್ಮೆ ಪರಿಶೀಲಿಸಿ. ಎಲ್ಲಿಯಾದರೂ ಡ್ಯಾಮೇಜ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಇನ್ನು ಕುಕ್ಕರ್’ನ ರಬ್ಬರ್ ಅನ್ನು ಪ್ರತಿ 2 ರಿಂದ 4 ತಿಂಗಳಿಗೊಮ್ಮೆ ಬದಲಾಯಿಸಬೇಕು.
ಇನ್ನು ಕುಕ್ಕರ್’ನಲ್ಲಿ ಆಹಾರವನ್ನು ಬೇಯಿಸುವಾಗ ತಳದಲ್ಲಿ ಅಂಟಿಕೊಳ್ಳಲು ಪ್ರಾರಂಭಿಸಿದರೆ, ಕುಕ್ಕರ್‌ನಲ್ಲಿ ಪ್ರೆಶರ್ ಹೆಚ್ಚಾಗಿದೆ ಎಂದು ಅರ್ಥ. ಹೆಚ್ಚುವರಿ ಪ್ರೆಶರ್ ಹಾಕುವುದು ಅಪಾಯಕಾರಿ. ಏಕೆಂದರೆ ಇದು ಕುಕ್ಕರ್ ಸ್ಫೋಟಕ್ಕೆ ಕಾರಣವಾಗಬಹುದು. ಇದನ್ನು ಮಾರುಕಟ್ಟೆಯಲ್ಲಿ ಒಮ್ಮೆ ಚೆಕ್ ಮಾಡಿಸಿ ಪರಿಹಾರ ಕಂಡುಕೊಳ್ಳಿ.