ಕೆಮಿಕಲ್ ಹಾಕುವ ಬದಲು ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಬಾಡಿ ಹೋದ ತುಳಸಿ ಮತ್ತೆ ಚಿಗುರುವಂತೆ ಮಾಡಬಹುದು.
- ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿಗಾಗಿ ತುಳಸಿ ಮುಖ್ಯ
- ಪ್ರತಿ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ.
- ಕೆಲವೊಮ್ಮೆ ಚೆನ್ನಾಗಿ ಬೆಳೆಯುತ್ತಿದ್ದ ಸಸಿ ಬಾಡಿ ಹೋಗುತ್ತದೆ.
ಬೆಂಗಳೂರು : ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿಗಾಗಿ ತುಳಸಿ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಕಟ್ಟೆ ಇರಲಿ, ಬಿಡಲಿ ಆದ್ರೆ ತುಳಸಿ ಗಿಡ ಮಾತ್ರ ಇದ್ದೇ ಇರುತ್ತದೆ. ಆದರೆ ಅನೇಕ ಬಾರಿ ತುಳಸಿ ಗಿಡ ನಾವಂದು ಕೊಂಡಂತೆ ಬೆಳೆಯುವುದಿಲ್ಲ.ಕೆಲವೊಮ್ಮೆ ಚೆನ್ನಾಗಿ ಬೆಳೆಯುತ್ತಿದ್ದ ಸಸಿ ಬಾಡಿ ಹೋಗುತ್ತದೆ. ತುಳಸಿಯನ್ನು ಪೂಜಿಸುವ ಕಾರಣದಿಂದ ಅದಕ್ಕೆ ರಾಸಾಯನಿಕಗಳನ್ನು ಸಿಂಪಡಿಸುವುದಿಲ್ಲ. ಆದರೆ ಕೆಮಿಕಲ್ ಹಾಕುವ ಬದಲು ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಬಾಡಿ ಹೋದ ತುಳಸಿ ಮತ್ತೆ ಚಿಗುರುವಂತೆ ಮಾಡಬಹುದು.
ಬೇವಿನ ಪುಡಿ :
ತುಳಸಿ ಗಿಡ ಒಣಗುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ತುಳಸಿ ಗಿಡಕ್ಕೆ ಹೆಚ್ಚು ನೀರು ಹಾಕುವ ಅಗತ್ಯವಿರುವುದಿಲ್ಲ. ಇದು ಕಡಿಮೆ ನೀರು, ಕಡಿಮೆ ಸೂರ್ಯನ ಬೆಳಕು ಮತ್ತು ಕಡಿಮೆ ಗಾಳಿಯಲ್ಲಿ ಬೆಳೆಯುವ ಸಸ್ಯವಾಗಿದೆ. ಆದರೆ ಚೆನ್ನಾಗಿ ಬೆಳೆಯುತ್ತಿದ್ದ ತುಳಸಿ ಗಿಡ ಇದ್ದಕ್ಕಿದ್ದಂತೆಯೇ ಒಣಗಲು ಆರಂಭಿಸಿದರೆ ಬೇವಿನ ಎಲೆಗಳು ಪುಡಿಯನ್ನು ಬಳಸಿ.ತುಳಸಿ ಗಿಡವನ್ನು ಮತ್ತೆ ಚಿಗುರುವಂತೆ ಮಾಡಲು ಇದು ಸುಲಭ ಮಾರ್ಗವಾಗಿದೆ. ಹಾಗಾಗಿ ಎರಡು ಚಮಚ ಒಣಗಿದ ಬೇವಿನ ಎಲೆಗಳನ್ನು ಹಾಕಿದರೆ ಸಾಕು ಕೆಲವೇ ದಿನಗಳಲ್ಲಿ ಗಿಡದಲ್ಲಿ ಹೊಸ ಎಲೆಗಳು ಬರಲು ಆರಂಭಿಸುತ್ತದೆ.
ತೇವಾಂಶದಿಂದ ಸಸ್ಯವು ಹಾನಿಯಾಗುತ್ತದೆ :
ತುಳಸಿ ಗಿಡಕ್ಕೆ ಹೆಚ್ಚಿನ ತೇವಾಂಶ ಒಳ್ಳೆಯದಲ್ಲ.ಸಸ್ಯದಲ್ಲಿ ನೀರಿನ ಅತಿಯಾದ ಶೇಖರಣೆಯಿಂದಾಗಿ, ಅದರ ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ತುಳಸಿ ಗಿಡದಿಂದ 15 ಸೆಂ.ಮೀ ದೂರದಲ್ಲಿ 20 ಸೆಂ.ಮೀ ಆಳದಲ್ಲಿ ಮಣ್ಣನ್ನು ಅಗೆಯಿರಿ.ತೇವಾಂಶವು ಬೇರುಗಳಲ್ಲಿ ಕಾಣಿಸಿಕೊಂಡಾಗ,ಅದನ್ನು ಒಣ ಮಣ್ಣು ಮತ್ತು ಮರಳಿನಿಂದ ತುಂಬಿಸಿ. ಇದು ಸಸ್ಯದ ಬೇರುಗಳಿಗೆ ಗಾಳಿಯನ್ನು ನೀಡುತ್ತದೆ ಮತ್ತು ಸಸ್ಯವು ಉಸಿರಾಡಲು ಸಾಧ್ಯವಾಗುತ್ತದೆ.
ಶಿಲೀಂದ್ರಗಳ ಸೋಂಕು :
ತೇವಾಂಶ ಹೆಚ್ಚಾಗುತ್ತಿದ್ದಂತೆ ತುಳಸಿ ಗಿಡದಲ್ಲಿ ಫಂಗಲ್ ಸೋಂಕು ಉಂಟಾಗಬಹುದು.ಇದಕ್ಕೆ ಬೇವಿನ ರೊಟ್ಟಿಯ ಪುಡಿಯನ್ನು ಬಳಸಿ. ಇದನ್ನು ಬೇವಿನ ಬೀಜದ ಪುಡಿ ಎಂದೂ ಕರೆಯುತ್ತಾರೆ.ಈ ಪುಡಿಯನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ.ಇದರಿಂದ ಫಂಗಲ್ ಸೋಂಕಿನ ಸಮಸ್ಯೆ ದೂರವಾಗುತ್ತದೆ. ಇದು ನಿಮ್ಮ ಬಳಿ ಇಲ್ಲ ಎಂದಾದರೆ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ.ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಬಾಟಲಿಯಲ್ಲಿ ತುಂಬಿಸಿ. ಪ್ರತಿ 15 ದಿನಗಳಿಗೊಮ್ಮೆ ಸಸ್ಯದ ಮಣ್ಣನ್ನು ಅಗೆದು ಅದಕ್ಕೆ ಎರಡು ಚಮಚ ಬೇವಿನ ನೀರನ್ನು ಹಾಕುತ್ತಾ ಬನ್ನಿ. ಹೀಗೆ ಮಾಡಿದರೂ ಫಂಗಲ್ ಸೋಂಕನ್ನು ನಿವಾರಿಸಬಹುದು.
ಹೊಗೆ ಮತ್ತು ಎಣ್ಣೆಯಿಂದ ದೂರವಿಡಿ :
ತುಳಸಿ ಗಿಡವನ್ನು ಹೊಗೆ ಮತ್ತು ಎಣ್ಣೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕು. ತುಳಸಿಯ ಎಲೆಗಳನ್ನು ಪ್ರತಿದಿನ ಕೀಳಬಾರದು. ತುಳಸಿ ಗಿಡದ ತುಂಬಾ ಹತ್ತಿರ ದೀಪ, ಅಗರಬತ್ತಿಗಳನ್ನು ಇಡಬಾರದು. ಹೀಗೆ ಮಾಡಿದರೆ ಗಿಡ ಹಾಳಾಗುತ್ತದೆ.
Source : https://zeenews.india.com/kannada/lifestyle/simple-tips-to-save-tulsi-plant-from-drying-207717
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1