Tulsi Remedies On Janmashtami:ತುಳಸಿ ಗಿಡವಿರುವ ಮನೆಯಲ್ಲಿ ಶ್ರೀಕೃಷ್ಣನ ಆಶೀರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. ಜನ್ಮಾಷ್ಟಮಿ ದಿನದಂದು ಅನುಸರಿಸುವ ಕೆಲವು ಕ್ರಮಗಳು ಅತ್ಯಂತ ಮಂಗಳಕರವಾಗಿದ್ದು, ವಿಶೇಷ ಫಲವನ್ನು ನೀಡುತ್ತದೆ.
![](https://samagrasuddi.co.in/wp-content/uploads/2023/09/image-30-300x169.png)
Tulsi Remedies On Janmashtami : ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವು ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದುದು. ತುಳಸಿಯು ಭಗವಾನ್ ಶ್ರೀ ಕೃಷ್ಣನ ರೂಪವನ್ನೇ ವರಿಸಿರುವುದು ಎನ್ನುವುದು ನಂಬಿಕೆ. ತುಳಸಿ ಗಿಡವಿರುವ ಮನೆಯಲ್ಲಿ ಶ್ರೀಕೃಷ್ಣನ ಆಶೀರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. ದೇಶಾದ್ಯಂತ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬವನ್ನು ಸೆಪ್ಟೆಂಬರ್ 6 ಮತ್ತು 7 ರಂದು ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದಾನೆ ಎನ್ನುತ್ತದೆ ಶಾಸ್ತ್ರ. ಇದೇ ಕಾರಣಕ್ಕೆ ಜನ್ಮಾಷ್ಟಮಿಯ ಈ ಎರಡೂ ಮುಹೂರ್ತಗಳು ವಿಶೇಷವಾಗಿವೆ. ಈ ದಿನದಂದು ನಾವು ಅನುಸರಿಸುವ ಕೆಲವು ಕ್ರಮಗಳು ಅತ್ಯಂತ ಮಂಗಳಕರವಾಗಿದ್ದು, ವಿಶೇಷ ಫಲವನ್ನು ನೀಡುತ್ತದೆ. ಇದರಿಂದ ಭಗವಾನ್ ಶ್ರೀ ಕೃಷ್ಣನ ವಿಶೇಷ ಅನುಗ್ರಹ ಸಿಗುತ್ತದೆ. ಜನ್ಮಾಷ್ಟಮಿಯ ದಿನದಂದು ಅಳವಡಿಸಿಕೊಳ್ಳಬಹುದಾದ ತುಳಸಿಯ ಕೆಲವು ಪರಿಹಾರಗಳು ಇಲ್ಲಿವೆ.
ಜನ್ಮಾಷ್ಟಮಿಯಂದು ಕೈಗೊಳ್ಳಿ ಈ ವಿಶೇಷ ಪರಿಹಾರ :
ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಂದ ಮುಕ್ತಿ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ಜನ್ಮಾಷ್ಟಮಿಯ ದಿನದಂದು ತುಳಸಿಯ ಪರಿಹಾರಗಳನ್ನು ಮಾಡಿದರೆ, ಅವನ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. ಈ ದಿನದಂದು, ತುಳಸಿಯ ಮುಂದೆ ನಿಂತು, ಗೋಪಾಲ, ಗೋವಿಂದ, ದೇವಕಿನಂದನ್ ಮತ್ತು ದಾಮೋದರ್ ಮುಂತಾದ ಶ್ರೀ ಕೃಷ್ಣನ ವಿವಿಧ ಹೆಸರುಗಳನ್ನು ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರದೊಂದಿಗೆ ಜಪಿಸಿ.
ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ :
ಜನ್ಮಾಷ್ಟಮಿಯ ದಿನದಂದು, ಶ್ರೀ ಕೃಷ್ಣನಿಗೆ ನೈವೇದ್ಯದಲ್ಲಿ ತುಳಸಿ ಎಲೆಯನ್ನು ಇಟ್ಟು ಅರ್ಪಿಸಿದರೆ ಪ್ರಸಾದ ಸಂಪೂರ್ಣವಾಗುವುದು. ಹೀಗೆ ಮಾಡುವುದರಿಂದ ಶ್ರೀ ಕೃಷ್ಣ ಮತ್ತು ತಾಯಿ ಲಕ್ಷ್ಮೀ ಇಬ್ಬರ ಆಶೀರ್ವಾದವೂ ಲಭಿಸುವುದು.
ಸುಖಮಯವಾಗಿರುತ್ತದೆ ದಾಂಪತ್ಯ ಜೀವನ :
ಜನ್ಮಾಷ್ಟಮಿಯಂದು ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ದಾಂಪತ್ಯ ಜೀವನ ಸುಖಮಯವಾಗುತ್ತದೆ. ಇದಲ್ಲದೆ, ಇದುವರೆಗೆ ಮದುವೆಗೆ ಅಡೆತಡೆಗಳನ್ನು ಎದುರಿಸುತ್ತಿರುವವರಿಗೂ ಈ ಪರಿಹಾರಗಳು ಪ್ರಯೋಜನಕಾರಿಯಾಗಿರುತ್ತದೆ.
ಈ ಮೂಲಕ ನಿಮ್ಮ ಆಸೆ ಈಡೇರುತ್ತದೆ :
ವ್ಯಾಪಾರದಲ್ಲಿ ಪ್ರಗತಿಯನ್ನು ಬಯಸುವವರು ಜನ್ಮಾಷ್ಟಮಿಯ ದಿನದಂದು ತುಳಸಿಗೆ ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ವ್ಯಕ್ತಿಯ ಮನದ ಆಸೆಗಳನ್ನು ಪೂರೈಸುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii