ಪಾಕಿಸ್ತಾನಕ್ಕೆ ಸದ್ಯ ಜೀವನ ಸುಧಾರಿಸಿಕೊಳ್ಳುವ ಚಿಂತೆಗಿಂತ ಭಾರತದ ಮೇಲೆ ಕೆಂಡಕಾರುವುದೇ ಮುಖ್ಯವಾಗಿದೆ. ಅಲ್ಲಿ ಜನ ತಿನ್ನೊ ಅನ್ನಕ್ಕೂ ಪರದಾಡುತ್ತಿದ್ದಾರೆ. ದಿನ ಬಳಕೆಯ ವಸ್ತುಗಳೆಲ್ಲಾ ಗಗನಕ್ಕೆ ಏರಿದೆ. ಜನರಷ್ಟೇ ಅಲ್ಲ ಅಲ್ಲಿನ ಸೈನಿಕರಿಗೂ ಸರಿಯಾಗಿ ಊಟ ನೀಡುತ್ತಿಲ್ಲ ಪಾಪಿ ಪಾಕಿಸ್ತಾನ. ಇದೆಲ್ಲ ಹುಳುಕನ್ನು ಇಟ್ಟುಕೊಂಡಿದ್ದರು, ವಿಶ್ವಸಂಸ್ಥೆಯಲ್ಲಿ ಮತ್ತೆ ಭಾರತದ ಮೇಲೆ ಆರೋಪ ಮಾಡಲು ಹೋಗಿ ಮುಖಭಂಗ ಮಾಡಿಕೊಂಡಿದೆ.
ಪಾಕಿಸ್ತಾನ ದಶಕಗಳಿಂದ ಭಾರತದ ಬಗ್ಗೆ ಆರೋಪ ಮಾಡುತ್ತಲೇ ಬಂದಿದೆ. ಕಾಶ್ಮೀರದ ವಿಚಾರ ತೆಗೆದು ಸಿಂಪತಿ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಹಿನಾ ರಬ್ಬಾನಿ ಈಗ ಭಾರತದ ಬಗ್ಗೆ ಮತ್ತೊಂದು ಆರೋಪ ಮಾಡಿದ್ದಾರೆ. ಭಾರತಕ್ಕೆ ಶಸ್ತ್ರಸ್ತ್ರಗಳ ಪೂರೈಕೆ ಬಗ್ಗೆ ಮಾತನಾಡಿ, ಭಾರತದ ಆಂತರಿಕ ವಿಚಾರಕ್ಕೆ ಮೂಗು ತೂರಿಸಿ ಹಿಗ್ಗಾ ಮುಗ್ಗಾ ಉಗಿಸಿಕೊಂಡಿದೆ.
ಪಾಕ್ ಮಾಡಿದ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿರುವ ಭಾರತದ ಭಾರತದ ಪ್ರತಿನಿಧಿ ಸೀಮಾ ಪೂಜಾನಿ, ಪಾಕಿಸ್ತಾನದಲ್ಲಿ ತಿನ್ನೋ ಅನ್ನಕ್ಕೆ ಗತಿ ಇಲ್ಲ. ಅಂಥದ್ರಲ್ಲಿ ಎಂದಿನಂತೆ ಆರೋಪ ಮಾಡುವುದನ್ನು ನಿಲ್ಲಿಸಲಿ. ಪಾಕಿಸ್ತಾನದ ಗೀಳು ಭಾರತದ ಮೇಲಿನ ತಪ್ಪಾದ ಆದ್ಯತೆಗಳ ಸಂಕೇತವಾಗಿದೆ. ಜಮ್ಮು ಮತ್ತು ಕಾಶ್ಮೀರ ಕುರಿತು ಟರ್ಕಿಯ ಪ್ರತಿನಿಧಿ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ ಕಮೆಂಟ್ ಗಳಿಗೆ ನಾವೂ ವಿಷಾದಿಸುತ್ತೇವೆ ಎಂದಿದ್ದಾರೆ.
The post ತಿನ್ನೊ ಅನ್ನಕ್ಕೂ ಪರದಾಡುತ್ತಿರೋ ಪಾಕ್ ಭಾರತದ ಮೇಲೆ ಆರೋಪ.. ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಮುಖಭಂಗ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/2AY6exs
via IFTTT