ವಾರಕೊಮ್ಮೆ ಅತ್ತರೆ ನಿಮ್ಮ ಆರೋಗ್ಯ ಸುಧಾರಣೆ; ಇಲ್ಲಿದೆ ಗಮನಿಸಿ ಪೂರ್ಣ ಮಾಹಿತಿ.

ನವದೆಹಲಿ: ಮನುಷ್ಯ ತನ್ನ ದೇಹದ ಆರೋಗ್ಯವನ್ನು ಉತ್ತಮವಾಗಿಡಲು ವಾಕಿಂಗ್​, ಜಿಮ್​, ಲಾಫಿಂಗ್​ ಕ್ಲಬ್​ ಸೇರಿದಂತೆ ಅನೇಕ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಅತ್ತರೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿಡಬಹುದು ಎಂಬ ಅಚ್ಚರಿಯ ಸುದ್ದಿಯೊಂದು ಹೊರಬಂದಿದೆ.

ಇದು ನಿಮಗೆ ವಿಚಿತ್ರ ಎನಿಸಿದರೂ ಸಂಪೂರ್ಣ ಸತ್ಯ ಎಂದು ಹೇಳಲಾಗುತ್ತಿದೆ.

ಮನುಷ್ಟಯ ತನಗೆ ಎಷ್ಟೇ ನೋವಾದರೂ ತನ್ನ ಆಪ್ರತ ಬಳಿ ದುಃಖವನ್ನು ತೋಡಿಕೊಳ್ಳುತ್ತಾನೆ. ಆದರೆ, ವ್ಯಕ್ತಿಯೊಬ್ಬರು ವಾರಕ್ಕೊಮ್ಮೆ ಅಳಬೇಕು. ಇದು ಆರೋಗ್ಯದ ಗೂನಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ವಿಜ್ಞಾನಿಗಳು ವಾರಕ್ಕೊಮ್ಮೆ ಅಳುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಬದಲಿಗೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಹೇಳಿದ್ದಾರೆ.

ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ cryonceaweek.com ಎಂಬ ವೆಬ್​ಸೈಟ್​ಗೆ ಭೇಟಿ ನೀಡಿ ವಾರಕ್ಕೊಮ್ಮೆ ಅಳಬಹುದು ಎಂದು ಹೇಳಲಾಗಿದೆ. ಈ ವೆಬ್‌ಸೈಟ್​ ಜನರನ್ನು ಬರಲು ಮತ್ತು ವೀಡಿಯೊವನ್ನು ವೀಕ್ಷಿಸಲು ಆಹ್ವಾನಿಸುತ್ತದೆ. ಅದು ಖಂಡಿತವಾಗಿಯೂ ಅವರನ್ನು ಅಳುವಂತೆ ಮಾಡುತ್ತದೆ. ಇಲ್ಲಿ ಅಳುವ ಚಲನಚಿತ್ರಗಳನ್ನು ನೋಡುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ನಿದ್ರೆ ಅಥವಾ ನಗುವುದಕ್ಕಿಂತ ಅಳುವುದು ಉತ್ತಮ ಒತ್ತಡ ನಿವಾರಕವಾಗಿದೆ ಎಂದು ಹೇಳಲಾಗಿದೆ. ನೋವಿನ ಹಾಡುಗಳನ್ನು ಕೇಳುವುದು, ದುಃಖದ ಚಲನಚಿತ್ರಗಳನ್ನು ನೋಡುವುದು ಅಥವಾ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು ನಮ್ಮ ದೇಹದ ಪ್ಯಾರಾಸಿಂಪಥೆಟಿಕ್ ನರವನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿದು ಬಂದಿದೆ. ಉತ್ತಮವಾದ ವಿಷಯವೆಂದರೆ ನೀವು ವಾರಕ್ಕೊಮ್ಮೆ ಅಳುತ್ತಿದ್ದರೆ ನೀವು ದೀರ್ಘಾವಧಿಯ ಒತ್ತಡ ಪರಿಹಾರವನ್ನು ಪಡೆಯುತ್ತೀರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *