ನವದೆಹಲಿ: ಆನ್‌ಲೈನ್‌ನಲ್ಲಿ ಸುಲಭವಾಗಿ ಸಾಲ ನೀಡಲು ಹಲವು ಆಪ್ ಗಳು ಲಭ್ಯವಿರುವುದು ತಿಳಿದ ಸಂಗತಿಯೇ. ಆದರೆ ವಂಚನೆಯನ್ನೇ ಬಂಡವಾಳ ಮಾಡಿಕೊಂಡಿರುವ ಆಯಪ್ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

‘ಕ್ಯಾಷ್ ಎಕ್ಸ್ಪಾಂಡ್-ಯು’ ಎಂಬ ಆನ್‌ಲೈನ್ ಸಾಲದ ಅಪ್ಲಿಕೇಶನ್ ನಕಲಿಯಾಗಿದೆ. ಇದಲ್ಲದೆ, ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಬಳಕೆದಾರರು ತಕ್ಷಣ ಇದನ್ನು ತಮ್ಮ ಫೋನ್‌ಗಳಿಂದ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ.
ಈ ಆಯಪ್ ಬಗ್ಗೆ ಎಚ್ಚರದಿಂದಿರಿ. ಇದು ನಕಲಿ. ಇದರ ಮೂಲವು ಅನ್ಯ ದೇಶದಲ್ಲಿದೆ ಎಂದು ತಿಳಿದುಬಂದಿದೆ ಎಂದು ಸರ್ಕಾರದ ಸೈಬರ್ ಕ್ರೈಮ್ ವಿಭಾಗವಾದ ಸೈಬರ್ ದೋಸ್ತ್ ಹೇಳಿದೆ. ಪ್ರಮುಖ ಮಾಹಿತಿ ದುರ್ಬಳಕೆಯಾಗದಂತೆ ಈ ಆಯಪ್ ಅನ್ನು ಕೂಡಲೇ ಫೋನ್ ಗಳಿಂದ ತೆಗೆದುಹಾಕಬೇಕು ಎಂದು ಹೇಳಲಾಗಿದೆ. ಇನ್ನು ಸಣ್ಣ ಸಾಲಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಅನೇಕ ಅಪ್ಲಿಕೇಶನ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಇಂತಹ ಆಯಪ್‌ಗಳನ್ನು ನಂಬಬಾರದು. ಅವು ಬಳಕೆದಾರರಿಂದ ಹಣಕಾಸು ಮಾಹಿತಿ ಪಡೆದು ದುರುಪಯೋಗಪಡಿಸಿಕೊಳ್ಳಬಹುದು ಎಂದು ಸರ್ಕಾರ ಎಚ್ಚರಿಸಿದೆ. ಈ ಸಂಬಂಧ ಕಳೆದ ವರ್ಷ 1062 ದೂರುಗಳು ಬಂದಿದ್ದವು ಎಂದು ಸರ್ಕಾರ ಇತ್ತೀಚೆಗೆ ಬಹಿರಂಗಪಡಿಸಿದೆ. ಗೂಗಲ್ ಸೆಪ್ಟೆಂಬರ್ 2023 ರ ಒಂದೇ ವಾರದಲ್ಲಿ 134 ನಕಲಿ ಅಪ್ಲಿಕೇಶನ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಲಾಗಿದೆ.