Rice Mung Dal Dosa: ಅಕ್ಕಿಯ ಜೊತೆಯಲ್ಲಿ ಹೆಸರುಬೇಳೆ ಬಳಸೋದರಿಂದ ದೋಸೆ ತುಂಬಾನೇ ಸಾಫ್ಟ್ ಮತ್ತು ಕ್ರಂಚಿಯಾಗಿರುತ್ತದೆ. ಈ ದೋಸೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

Dosa Recipe: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೋಸೆಯನ್ನು (Dosa) ತಿಂಡಿಯಾಗಿ ಮಾಡಿರುತ್ತಾರೆ. ಉದ್ದಿನ ಬೇಳೆ ಮತ್ತು ಅಕ್ಕಿ ಇದರ ಪ್ರಮುಖ ಆಹಾರ ಪದಾರ್ಥ. ಕೆಲವರು ದೋಸೆ ಹಿಟ್ಟಿಗೆ ವಿವಿಧ ತರಕಾರಿ ಸೇರಿಸಿ ಉತ್ತಪ್ಪಾ ಮಾಡೋದು ಉಂಟು. ಆದ್ರೆ ಇಂದು ನಾವು ಹೇಳುವ ಶೈಲಿಯಲ್ಲಿ ದೋಸೆ (Dosa Recipe) ಮಾಡಿಕೊಂಡು ತಿಂದ್ರೆ ಇಡೀ ದಿನ ಇದರ ಸ್ವಾದವನ್ನು ನೀವು ಮರೆಯಲ್ಲ. ಇಲ್ಲಿ ಅಕ್ಕಿಯ ಜೊತೆಯಲ್ಲಿ ಹೆಸರುಬೇಳೆ ಬಳಸೋದರಿಂದ ದೋಸೆ ತುಂಬಾನೇ ಸಾಫ್ಟ್ ಮತ್ತು ಕ್ರಂಚಿಯಾಗಿರುತ್ತದೆ. ಈ ದೋಸೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಅಕ್ಕಿ-ಹೆಸರುಬೇಳೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ: ಒಂದು ಕಪ್
ಹೆಸರುಬೇಳೆ: ಒಂದು ಕಪ್
ಮೊಸರು: ಅರ್ಧ ಕಪ್
ಹಸಿಮೆಣಸಿನಕಾಯಿ: ಎರಡು
ಕ್ಯಾಪ್ಸಿಕಂ: ಚಿಕ್ಕ ಗಾತ್ರದ್ದು ಒಂದು
ಕ್ಯಾರೆಟ್: ಒಂದು
ಈರುಳ್ಳಿ: ಒಂದು
ಅಚ್ಚ ಖಾರದ ಪುಡಿ: ಅರ್ಧ ಟೀ ಸ್ಪೂನ್
ಅರಿಶಿನ: ಚಿಟಿಕೆ
ಅಡುಗೆ ಸೋಡಾ: ಚಿಟಿಕೆ
ಓಂಕಾಳು: ½ ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ
ಕೋತಂಬರಿ ಸೊಪ್ಪು
ಅಕ್ಕಿ-ಹೆಸರುಬೇಳೆ ದೋಸೆ ಮಾಡುವ ವಿಧಾನ
*ಮೊದಲಿಗೆ ಅಕ್ಕಿ ಮತ್ತು ಹೆಸರುಬೇಳೆಯನ್ನು ಎರಡು ಬಾರಿ ನೀರಿನಲ್ಲಿ ತೊಳೆದುಕೊಂಡು ಎರಡು ಗಂಟೆ ನೆನೆಸಿಟ್ಟುಕೊಳ್ಳಬೇಕು. ಎರಡು ಗಂಟೆ ನಂತರ ದೋಸೆ ಹಿಟ್ಟಿನ ಹದ ನುಣ್ಣಗೆ ರುಬ್ಬಿಕೊಳ್ಳಿ.
*ಈಗ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ತೊಳೆದುಕೊಂಡು ತುರಿದುಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
*ಈಗ ದೊಡ್ಡದಾದ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ನಷ್ಟು ಗಟ್ಟಿ ಮೊಸರು ಹಾಕಿಕೊಳ್ಳಿ. ಈಗ ಇದಕ್ಕೆ ಅಚ್ಚ ಖಾರದ ಪುಡಿ, ಅರಿಶಿನ, ಓಂಕಾಳು ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.
*ಈಗ ಇದೇ ಪಾತ್ರೆಗೆ ಕತ್ತರಿಸಿಕೊಂಡಿರುವ ಎಲ್ಲಾ ತರಕಾರಿ ಮತ್ತು ರುಬ್ಬಿಕೊಂಡಿರುವ ಹಿಟ್ಟನ್ನು ಸೇರಿಸಿಕೊಳ್ಳಬೇಕು. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
*ಒಲೆ ಮೇಲೆ ಪ್ಯಾನ್ ಇರಿಸಿ ಗ್ಯಾಸ್ ಆನ್ ಮಾಡ್ಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಸುತ್ತಲೂ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹಾಕಿ. ನಂತರ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ದೋಸೆಯನ್ನು ಮತ್ತೊಂದು ಬದಿಯಲ್ಲಿಯೂ ಬೇಯಸಿಕೊಂಡ್ರೆ ಬೆಳಗ್ಗೆಯ ತಿಂಡಿ ಸವಿಯಲು ಸಿದ್ಧವಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1