ದೀಪಾವಳಿಗೆ ಹೊಸ ಫೋನ್​ ಖರೀದಿಸಬೇಕೇ, ಅದೂ ಕಡಿಮೆ ಬೆಲೆಗೆ..? – ಹಾಗಾದ್ರೆ ಇದರ ಮೇಲೆ ಕಣ್ಣಾಯಿಸಿ!

Oppo A3x 4G Launch: ದೀಪಾವಳಿ ಹಬ್ಬದಲ್ಲಿ ಅನೇಕ ಸ್ಮಾರ್ಟ್​ಫೋನ್​ ಕಂಪನಿಗಳು ತಮ್ಮ ಫೋನ್​ಗಳನ್ನು ಮಾರುಕಟ್ಟೆಗೆ ತರುವುದು ಸಹಜ. ಈ ಸಂದರ್ಭದಲ್ಲಿ Oppo ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಂಪನಿಯು Oppo A3x 4G ಮೊಬೈಲ್ ಅನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಈ ಫೋನ್ Snapdragon 6s Gen 1 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಮೊಬೈಲ್ ಆಂಡ್ರಾಯ್ಡ್ 14-ಆಧಾರಿತ ColorOS 14 ನಲ್ಲಿ 4GB RAM ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ನೆಬ್ಯುಲಾ ರೆಡ್ ಮತ್ತು ಓಷನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. Oppo A3x 4G ಮೊಬೈಲ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ..

Oppo A3x 4G ವೈಶಿಷ್ಟ್ಯಗಳು:

  • ಡಿಸ್​ಪ್ಲೇ: 6.67-ಇಂಚಿನ LCD ಸ್ಕ್ರೀನ್​
  • ರಿಫ್ರೆಶ್ ರೇಟ್​​: 90Hz
  • ಬ್ರೈಟ್​ನೆಸ್​: ಗರಿಷ್ಠ 100 ನಿಟ್ಸ್ ವರೆಗೆ
  • ಬ್ಯಾಟರಿ: 5,100mAh
  • ಗಾತ್ರ: 165.77×76.08×7.68mm
  • ತೂಕ: 186 ಗ್ರಾಂ
  • 4GB LPDDR4X RAM

ರಿಯರ್​ ಕ್ಯಾಮೆರಾ: 8MP

  • ಫ್ರಂಟ್​ ಕ್ಯಾಮರಾ: 5MP
  • 45W ಚಾರ್ಜಿಂಗ್ ಸಪೋರ್ಟ್​

Oppo A3x 4G ಕ್ಯಾಮೆರಾ: ಈ ಹೊಸ ಫೋನ್ 78-ಡಿಗ್ರಿ ಫೀಲ್ಡ್-ಆಫ್-ವ್ಯೂ, f/2.0 ಒಳಗೊಂಡಿರುವ 8MP ಬ್ಯಾಕ್ ಕ್ಯಾಮೆರಾದೊಂದಿಗೆ ಬರುತ್ತದೆ. ಇದರ ಮುಂಭಾಗವು 5MP ಸೆಲ್ಫಿ ಕ್ಯಾಮೆರಾವನ್ನು ವಾಟರ್‌ಡ್ರಾಪ್-ಶೈಲಿಯ ಡಿಸ್​ಪ್ಲೇ ಕಟೌಟ್‌ನಲ್ಲಿ 78-ಡಿಗ್ರಿ ಫೀಲ್ಡ್ ಆಫ್ ವ್ಯೂ, f/2.2 ಒಳಗೊಂಡಿದೆ.

ಕಲರ್​ ಆಯ್ಕೆಗಳು:

  • ನೆಬ್ಯುಲಾ ರೆಡ್
  • ಓಷನ್ ಬ್ಲೂ

Oppo A3x 4G ಕನೆಕ್ಟಿವಿಟಿ ವೈಶಿಷ್ಟ್ಯಗಳು:

  • USB ಟೈಪ್-ಸಿ ಪೋರ್ಟ್
  • 3.5mm ಹೆಡ್‌ಫೋನ್ ಪೋರ್ಟ್ ಜೊತೆಗೆ 4G LTE
  • ಡ್ಯುಯಲ್-ಬ್ಯಾಂಡ್ ವೈ-ಫೈ
  • ಬ್ಲೂಟೂತ್ 5.0
  • ಜಿಪಿಎಸ್

ಇತರ ವೈಶಿಷ್ಟ್ಯಗಳು:

  • Oppo ಈ ಫೋನ್‌ನಲ್ಲಿ ಇ-ದಿಕ್ಸೂಚಿ, ಪ್ರಾಕ್ಸಿಮಿಟಿ ಸೆನ್ಸಾರ್​, ಅಕ್ಸೆಲೆರೊಮೀಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಹೊಂದಿದೆ.
  • Oppo A3X 4G ಮೊಬೈಲ್ 128GB ವರೆಗೆ eMMC 5.1 ಸ್ಟೋರೇಜ್​ ಒಳಗೊಂಡಿದೆ.
  • ಇದು ಬಯೋಮೆಟ್ರಿಕ್ ಅಥೆಂಟಿಕೇಷನ್​ಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ:

  • 4GB RAM+64GB ಸ್ಟೋರೇಜ್ ಬೆಲೆ ರೂ. 8,999
  • 128GB ಸ್ಟೋರೇಜ್ ರೂಪಾಂತರ ಬೆಲೆ: ರೂ. 9,999

ಈ ಹೊಸ ಮೊಬೈಲ್ ಅನ್ನು ಅಕ್ಟೋಬರ್ 29 ಅಂದ್ರೆ ಇಂದಿನಿಂದ Oppo ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು ಎಂದು ಕಂಪನಿ ಬಹಿರಂಗಪಡಿಸಿದೆ.

Source : https://www.etvbharat.com/kn/!technology/oppo-a3x-4g-launched-in-india-with-snapdragon-6s-gen-1-processor-kas24102901070

Leave a Reply

Your email address will not be published. Required fields are marked *