ಶಾಲೆಯಲ್ಲಿ ನಿಮ್ಮ ಮಗುವಿನ ವರ್ತನೆ ಸರಿಯಿಲ್ವಾ? ಈ ರೀತಿ ಮಾಡಿದ್ರೆ ಒಳ್ಳೆಯದು.

ಮೊದಲೆಲ್ಲಾ ಮಕ್ಕಳು (Children) ತಮ್ಮ ಮನೆಯ ಬಳಿ ಇರುವ ಅನೇಕ ಮಕ್ಕಳ ಜೊತೆಯಲ್ಲಿ ಸೇರಿಕೊಂಡು ಆಟವಾಡುತ್ತಿದ್ದರು ಮತ್ತು ಅವರ ವರ್ತನೆಯನ್ನು ಅಷ್ಟಾಗಿ ಪೋಷಕರು ಗಮನಿಸುತ್ತಿರಲಿಲ್ಲ ಮತ್ತು ಮಕ್ಕಳು ಸಹ ಪೋಷಕರಿಗೆ ಹೆದರುತ್ತಿದ್ದರು. ಆದರೆ ಈಗ ಇದಕ್ಕೆ ವಿರುದ್ಧ ಎಂಬಂತೆ ಮಕ್ಕಳು ಸದಾ ಕಾಲ ಮೊಬೈಲ್‌ (Mobile) ಹಿಡಿದುಕೊಂಡು ಅದರಲ್ಲಿ ಆಟವಾಡುತ್ತಾ, ವಿಡಿಯೋಗಳನ್ನು ನೋಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಮತ್ತು ಒಂದು ರೀತಿಯ ತಪ್ಪಾದ ವರ್ತನೆಯನ್ನು ಮತ್ತು ನಡವಳಿಕೆಯನ್ನು ( Behavior) ಮೈಗೂಡಿಸಿಕೊಳ್ಳುತ್ತಿದ್ದಾರೆ ಅಂತ ಹೇಳಿದರೆ ಸುಳ್ಳಲ್ಲ.

ಆದರೂ ಮಕ್ಕಳು ಒಮ್ಮೆ ಶಾಲೆಗೆ ಹೋಗಲು ಶುರು ಮಾಡಿದಾಗ ಅವರ ನಡುವಳಿಕೆಯಲ್ಲಿ ತುಂಬಾನೇ ಬದಲಾವಣೆಗಳು ಬರುವುದನ್ನು ನಾವು ನೋಡಬಹುದು.

ಈಗಿನ ಕಾಲದಲ್ಲಿ ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ಪೋಷಕರಿಗೆ ನಿಜಕ್ಕೂ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ ಅಂತ ಹೇಳಬಹುದು. ನಾವು ನಮ್ಮ ಮಕ್ಕಳಿಗೆ ಎಲ್ಲದರಲ್ಲೂ ಉತ್ತಮವಾದದ್ದನ್ನು ಒದಗಿಸಲು ಬಯಸುತ್ತಿರುವಾಗ, ಜೀವನವನ್ನು ಸುಗಮವಾಗಿಸಿಕೊಳ್ಳಲು ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಕಲಿಸಲು ನಾವು ಬಯಸುತ್ತೇವೆ.

ಶಾಲೆಗೆ ಹೋಗಲು ಶುರು ಮಾಡಿದಾಗ ಮಕ್ಕಳು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾರೆ..

ಆದರೆ ನಮ್ಮ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಿದ್ದಂತೆ, ಅವರು ತಮ್ಮ ಮನೆಯ ಹೊರಗಿನ ವಿಭಿನ್ನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾರೆ. ಅವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ.

ಅವರು ಹೊಸ ವಿಷಯಗಳನ್ನ ಕಲಿಯುತ್ತಾರೆ ಮತ್ತು ಜ್ಞಾನವನ್ನು ಸಂಗ್ರಹಿಸುತ್ತಾರೆ. ಆದಾಗ್ಯೂ, ಅವರು ಸಾಮಾನ್ಯವಾಗಿ ಶಾಲೆಯಲ್ಲಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ.

“ನಮ್ಮ ಮಕ್ಕಳು ಶಾಲೆಯಲ್ಲಿ ಅಸಭ್ಯವಾಗಿ ವರ್ತಿಸಿದಾಗ ಅದು ತುಂಬಾನೇ ನಮಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ ಎಂದು ನನಗೆ ತಿಳಿದಿದೆ. ನಿಮ್ಮ ಮಗು ಕೆಟ್ಟದಾಗಿ ವರ್ತಿಸುವುದನ್ನು ಮತ್ತು ನೀವು ಅವರ ಶಿಕ್ಷಕರ ಮುಂದೆ ಕೆಟ್ಟದಾಗಿ ಕಾಣಲು ಬಯಸದಿರುವುದು ಇನ್ನಷ್ಟು ಒತ್ತಡವನ್ನು ನಿಮ್ಮ ಮೇಲೆ ಹೇರುತ್ತದೆ.

ನಿಮ್ಮ ಮಗುವಿನ ದೃಷ್ಟಿಕೋನದಿಂದ ಶಾಲೆಯು ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವತ್ತ ಗಮನ ಹರಿಸುವುದು ಮೊದಲ ಹಂತವಾಗಿದೆ” ಎಂದು ಮನಶ್ಶಾಸ್ತ್ರಜ್ಞ ಜಾಜ್ಮಿನ್ ಮೆಕಾಯ್ ಬರೆಯುತ್ತಾರೆ.


ಸಾಂದರ್ಭಿಕ ಚಿತ್ರ

ಶಾಲೆಯಲ್ಲಿ ಕೆಟ್ಟದಾಗಿ ವರ್ತಿಸ್ತಿದ್ದಾರೆ ಮಕ್ಕಳು ಅಂತ ತಿಳಿದು ನಮಗೆ ಶಾಕ್ ಆಗಬಹುದು.. ನಮ್ಮ ಮಕ್ಕಳು ಶಾಲೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದಾಗ ಪೋಷಕರಾದ ನಮಗೆ ಒಂದು ರೀತಿಯ ಆಘಾತವಾಗಬಹುದು. ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಅವರ ನಡವಳಿಕೆಯ ಮಾದರಿಗಳಿಗೆ ಕಾರಣಗಳನ್ನು ಕಂಡು ಹಿಡಿಯಲು ನಾವು ಪ್ರಯತ್ನಿಸಬೇಕು. ಇಂತಹ ಸಂದರ್ಭದಲ್ಲಿ ನಾವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ ನೋಡಿ.

ಅವರ ಅನುಭವದ ಮೇಲೆ ಗಮನವನ್ನು ಕೇಂದ್ರೀಕರಿಸಿ: ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳ ಮುಂದೆ ಉತ್ತಮ ಕೇಳುಗರಾಗಿರುವುದು ಮತ್ತು ಅವರ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವುದರಿಂದ ಅವರು ಶಾಲೆಯಲ್ಲಿನ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಬಹುದು.

ತಮ್ಮ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವ ಮೊದಲು ಅದಕ್ಕೆ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನಿಸಿ. ಅವುಗಳು ಅದನ್ನು ಆಳವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಶಿಕ್ಷಕರೊಂದಿಗೆ ಸಭೆಗಳನ್ನು ನಡೆಸಿ: ಶಾಲೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಬಹುದು. ಶಿಕ್ಷಕರೊಂದಿಗೆ ನಿಯಮಿತವಾಗಿ ಪೋಷಕರು ಸಂಪರ್ಕದಲ್ಲಿರುವುದು, ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮತ್ತು ಮಗುವಿನ ಪರವಾಗಿ ಸಲಹೆ ನೀಡುವುದು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪೋಷಕರಿಗೆ ಸಹಾಯ ಮಾಡುತ್ತದೆ.

ವೃತ್ತಿಪರರ ಸಹಾಯವನ್ನು ಪಡೆಯಿರಿ: ಶಾಲೆಯಲ್ಲಿ ನಿಯಮಿತವಾದ ಕುಗ್ಗುವಿಕೆ ಅಥವಾ ಕೆಲವು ನಡವಳಿಕೆಯ ಮಾದರಿಗಳು ಅವರು ಎದುರಿಸುತ್ತಿರುವ ಇತರ ಸಮಸ್ಯೆಗಳ ಚಿಹ್ನೆಗಳಾಗಿರಬಹುದು. ಈ ರೀತಿಯ ಪರಿಸ್ಥಿತಿಯನ್ನು ಪರಿಹರಿಸಲು ಕೆಲವೊಮ್ಮೆ ವೃತ್ತಿಪರರ ಸಹಾಯವನ್ನು ಪಡೆಯುವುದು ಮುಖ್ಯವಾಗುತ್ತದೆ.

Source: https://m.dailyhunt.in/news/india/kannada/news18kannada-epaper-nwseika/shaaleyalli+nimma+maguvina+vartane+sariyilva+ee+riti+maadidre+olleyadu-newsid-n562172180?listname=topicsList&topic=for%20you&index=12&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *