IPL 2023: RCB ತಂಡದಲ್ಲಿ ಮಹತ್ವದ ಬದಲಾವಣೆ: ಹೀಗಿರಲಿದೆ ಪ್ಲೇಯಿಂಗ್ 11

IPL 2023 RCB vs CSK Playing XI: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 24ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡದಲ್ಲಿ ಒಂದು ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಉತ್ತಮ ಪ್ರದರ್ಶನ ನೀಡಿ 23 ರನ್​ಗಳ ಜಯ ಸಾಧಿಸಿತ್ತು. ಆದರೆ ಇದೀಗ ತಂಡಕ್ಕೆ ಜೋಶ್ ಹ್ಯಾಝಲ್​ವುಡ್​ ಅವರ ಆಗಮನವಾಗಿದ್ದು, ಹೀಗಾಗಿ ಓರ್ವ ಬೌಲರ್ ಹೊರಗುಳಿಯಬೇಕಾಗುತ್ತದೆ.ಇಲ್ಲಿ ವಿದೇಶಿ ವೇಗಿಯಾಗಿ ತಂಡದಲ್ಲಿ ವೇಯ್ನ್ ಪಾರ್ನೆಲ್ ಇದ್ದು, ಸೌತ್ ಆಫ್ರಿಕಾ ಬೌಲರ್​ನನ್ನು ತಂಡದಿಂದ ಕೈ ಬಿಟ್ಟು ಜೋಶ್ ಹ್ಯಾಝಲ್​ವುಡ್​ಗೆ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ. ಇದರ ಹೊರತಾಗಿ ಬೇರೆ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.1- ಫಾಫ್ ಡುಪ್ಲೆಸಿಸ್ (ನಾಯಕ)2- ವಿರಾಟ್ ಕೊಹ್ಲಿ3- ಮಹಿಪಾಲ್ ಲೊಮ್ರೋರ್4- ಗ್ಲೆನ್ ಮ್ಯಾಕ್ಸ್​ವೆಲ್ (ಆಲ್​ರೌಂಡರ್)5- ಶಹಬಾಝ್ ಅಹ್ಮದ್6- ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)7- ವನಿಂದು ಹಸರಂಗ8- ವೈಶಾಕ್ ವಿಜಯಕುಮಾರ್9- ಹರ್ಷಲ್ ಪಟೇಲ್10- ಮೊಹಮ್ಮದ್ ಸಿರಾಜ್11- ಜೋಶ್ ಹ್ಯಾಝಲ್​ವುಡ್RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-playing-11-vs-csk-rcb-vs-csk-playing-11-2023-kannada-news-zp-au50-557427.html

Leave a Reply

Your email address will not be published. Required fields are marked *