ಚಿಕ್ಕಬಳ್ಳಾಪುರದಲ್ಲಿ ಕರಗ ಹೊತ್ತ ಮಹಿಳೆ; ಪಂಚ ರಾಜ್ಯಗಳ ಜನಪದ ಕಲೆಗಳ ಸಮಾಗಮ!

ಚಿಕ್ಕಬಳ್ಳಾಪುರ, ಮೇ.26: ಬೆಂಗಳೂರು ಕರಗ(Karaga) ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿಯೂ ಕರಗ ಉತ್ಸವ ತನ್ನದೇ ಆದ ಮಹತ್ವ ಹೊಂದಿದೆ. ಎಲ್ಲೆಡೆ ಸಾಮಾನ್ಯವಾಗಿ ಪುರುಷರು ಕರಗ ಹೊರುವುದು ವಾಡಿಕೆ. ಆದ್ರೆ, ಚಿಕ್ಕಬಳ್ಳಾಪುರ (Chikkaballapura) ನಗರದ ಬಾಪೂಜಿನಗರದ ಮಹೇಶ್ವರಮ್ಮ ದೇವಾಲಯದಲ್ಲಿ ಏರ್ಪಡಿಸಿದ್ದ ದ್ರೌಪದಮ್ಮ ಕರಗ ಉತ್ಸವದಲ್ಲಿ, ತಮಿಳುನಾಡಿನ ಪುಟ್ಟಮ್ಮ ಎನ್ನುವ ಮಹಿಳೆ ಕರಗ ಹೊತ್ತು ಅಚ್ಚರಿ ಮೂಡಿಸಿದ್ಡಾರೆ.

ತಮಿಳುನಾಡಿನ ಹೊಸೂರು ತಾಲೂಕಿನ ಕೆಲಮಂಗಲದ ಗ್ರಾಮದ ಪುಟ್ಟಮ್ಮ, ಕಳೆದ 35 ವರ್ಷಗಳಿಂದ ಇಲ್ಲಿನ ಕರಗವನ್ನು ಹೊರುತ್ತಿದ್ದಾರೆ. ದ್ರೌಪದಮ್ಮ ಹೂವಿನ ಕರಗ ಹೊತ್ತ ಪುಟ್ಟಮ್ಮ, ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಜನರಲ್ಲಿ ಭಕ್ತಿಯ ಬೀಜ ಬಿತ್ತಿದರು.

1961ರಲ್ಲಿ ನಗರದಲ್ಲಿ ನಡೆಯುತ್ತಿದ್ದ ಬೇರೂಂದು ಕರಗ ಉತ್ಸವ, ಕರಗ ದಲಿತರು ವಾಸಿಸೋ ಚಿಕ್ಕಬಳ್ಳಾಪುರ ನಗರದ ಬಾಪುಜಿನಗರ ಪ್ರದೇಶಿಸದ ಹಿನ್ನೆಲೆ, ಮನನೊಂದು ಪ್ರತಿಷ್ಟೆಯಾಗಿ ತೆಗೆದುಕೊಂಡ ಅಂದಿನ ಶಾಸಕ ದಿವಂಗತ ಎ.ಮುನಿಯಪ್ಪ, ಮಹೇಶ್ವರಿ ದೇವಸ್ಥಾನದಲ್ಲಿ ದ್ರೌಪದಮ್ಮ ಕರಗ ಮಹೋತ್ಸವ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ತಮಿಳುನಾಡಿನ ಪುಟ್ಟಮ್ಮಳೇ ಕರಗ ಹೊರುತ್ತಿದ್ದಾಳೆ. ಕರಗದ ಜೊತೆ ಜೊತೆಗೆ ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳ ಕಲಾ ತಂಡಗಳು ಆಗಮಿಸಿ ಕರಗ ಮಹೋತ್ಸವ ಪ್ರಯುಕ್ತ ವೇದಿಕೆಯಲ್ಲಿ ಆಕರ್ಷಕ ನೃತ್ಯಗಳ ಪ್ರದರ್ಶನ ಮಾಡಿದರು.

ಸಾಮಾನ್ಯವಾಗಿ ಕರಗವನ್ನು ಪುರುಷರು, ಸ್ತ್ರೀ ವೇಷಧಾರಿಗಳಾಗಿ ಹೊರುತ್ತಾರೆ. ಆದರೆ, ಚಿಕ್ಕಬಳ್ಳಾಪುರದಲ್ಲಿ ದ್ರೌಪದಮ್ಮ ಕರಗವನ್ನು ಮಹಿಳೆ ಹೊತ್ತು ಸಾಮಾನ್ಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ಕರಗ ಉತ್ಸವ ರಾಜ್ಯದಲ್ಲೇ ಏಕೈಕ ಮಹಿಳಾ ಕರಗ ಅಂತಲೇ ಪ್ರಖ್ಯಾತಿ ಪಡೆದಿದೆ. ಮತ್ತೊಂದೆಡೆ ವಿವಿಧ ರಾಜ್ಯಗಳ ಕಲಾವಿದರು ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದು, ಜನರ ನಿದ್ದೆ ದೂರ ಮಾಡುವಂತಾಗಿತ್ತು.

Source : https://tv9kannada.com/karnataka/chikkaballapur/a-woman-carrying-karaga-in-chikkaballapur-a-gathering-of-folk-arts-of-five-states-krn-838868.html

Leave a Reply

Your email address will not be published. Required fields are marked *