ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಹೊಸದುರ್ಗದಲ್ಲೇ ಹೆಚ್ಚು ಮತದಾನ : ಉಳಿದ ಕ್ಷೇತ್ರಗಳ ವಿವರ ಇಂತಿದೆ…!

 

 

ಚಿತ್ರದುರ್ಗ : ವಿಧಾನಸಭಾ ಚುನಾವಣೆ ಬೆಳಿಗ್ಗೆ 11 ಗಂಟೆಯವರೆಗಿನ ಮತದಾನ ವಿವರ

ಚಿತ್ರದುರ್ಗ, (ಮೇ.10) : ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಭರದಿಂದ ಸಾಗುತ್ತಿದೆ. ಬೆಳಿಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.

ಬೆಳಗ್ಗೆ ಹನ್ನೊಂದು ಗಂಟೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ದಾಖಲಾದ ಅಂದಾಜು ಶೇಕಡಾವಾರು ಮತದಾನ ಇಂತಿದೆ:

97 – ಮೊಳಕಾಲ್ಮೂರು – ಶೇ.24.64

98 – ಚಳ್ಳಕೆರೆ -ಶೇ.16.35

99 – ಚಿತ್ರದುರ್ಗ- ಶೇ.20.47

100 – ಹಿರಿಯೂರು-ಶೇ. 13.40

101 – ಹೊಸದುರ್ಗ-ಶೇ.16.91

102 – ಹೊಳಲ್ಕೆರೆ -ಶೇ.18.93

ಜಿಲ್ಲೆಯಲ್ಲಿ ಸರಾಸರಿ ಶೇ.18.56 ರಷ್ಟು ಮತದಾನ ಆಗಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು .ಜಿ.ಆರ್.ಜೆ, ಜಿ.ಪಂ.ಸಿಇಓ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ ಅವರು ನಗರದ ಸೆಂಟ್ ಜೋಸೆಫ್ ಕಾನ್ವೆಂಟ್‌ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಚಿತ್ರದುರ್ಗ ವಿಧಾನಕ್ಷೇತ್ರ ಗೋನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಸಖಿ ಮತಗಟ್ಟೆ(27)ನಲ್ಲಿ ಮಹಿಳೆಯರು ಸರಿತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುವುದು ಕಂಡುಬಂದಿತು. ಒಟ್ಟು 1382 ಮತದಾರರು ಇದ್ದು, ಇದರಲ್ಲಿ ಬೆಳಿಗ್ಗೆ 11 ಗಂಟೆಯ ವೇಳೆಗೆ 143 ಪುರುಷ ಹಾಗೂ 146 ಮಹಿಳೆಯರು ಸೇರಿ ಒಟ್ಟು 289 ಮತದಾರರು ಮತಚಲಾಯಿಸಿದ್ದಾರೆ.

ಮತಗಟ್ಟೆಯಲ್ಲಿ ಬಿಸಿಲಿಂದ ರಕ್ಷಣೆಗಾಗಿ ಶಾಮಿಯಾನ, ವಿಕಚೇತನರು ಹಾಗೂ ಹಿರಿಯ ನಾಗರಿಕರಿಗೆ ಆಸನ, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.

The post ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಹೊಸದುರ್ಗದಲ್ಲೇ ಹೆಚ್ಚು ಮತದಾನ : ಉಳಿದ ಕ್ಷೇತ್ರಗಳ ವಿವರ ಇಂತಿದೆ…! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/xn5Woaf
via IFTTT

Leave a Reply

Your email address will not be published. Required fields are marked *