ಥಂಬ್ ಕೊಟ್ಟು ಬಂದವರ ಬ್ಯಾಂಕ್ ಖಾತೆಗಳಿಂದ ಎರಡು ದಿನಗಳ ಬಳಿಕ ಹಣ ಮಾಯವಾಗಿದೆ. ಒಬ್ಬೊಬ್ಬರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂಪಾಯಿ ಹಣ ಎಗರಿಸಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವನಹಳ್ಳಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
![](https://samagrasuddi.co.in/wp-content/uploads/2023/11/image-22-300x169.png)
ದೇವನಹಳ್ಳಿ, ನವೆಂಬರ್ 3: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡವರ ಆಧಾರ್ ಬಯೋಮೆಟ್ರಿಕ್ಗೆ ಕನ್ನ ಹಾಕಿ ನಂತರ ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು (Cyber Fraudsters) ಹಣ ಎಗರಿಸಿದ ಪ್ರಕರಣ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (Devanahalli) ಕೂಡ ಅಂಥದ್ದೇ ಘಟನೆ ವರದಿಯಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ (Sub Registrar office) ಹಾಗೂ ರೇಷನ್ ಕಾರ್ಡ್ಗೆ ಥಂಬ್ ಕೊಟ್ಟು ಬಂದವರ ಬ್ಯಾಂಕ್ ಖಾತೆಗಳಿಂದ ಹಣಕ್ಕೆ ಕನ್ನ ಹಾಕಲಾಗಿದೆ.
ಥಂಬ್ ಕೊಟ್ಟು ಬಂದವರ ಬ್ಯಾಂಕ್ ಖಾತೆಗಳಿಂದ ಎರಡು ದಿನಗಳ ಬಳಿಕ ಹಣ ಮಾಯವಾಗಿದೆ. ಒಬ್ಬೊಬ್ಬರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂಪಾಯಿ ಹಣ ಎಗರಿಸಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವನಹಳ್ಳಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಥಂಬ್ ಕೊಟ್ಟು ಬಂದಿದ್ದನ್ನು ದುರ್ಬಳಕೆ ಮಾಡಿಕೊಂಡು ಹಣ ಎಗರಿಸಿದ ಶಂಕೆ ವ್ಯಕ್ತವಾಗಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನಹಾಕಲಾಗಿದೆ. ಹಣ ಕಳೆದುಕೊಂಡು ಕಂಗಾಲಾದ ಜನರು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿ ಬಂದವರ ಫಿಂಗರ್ ಪ್ರಿಂಟ್ ಡೌನ್ ಲೋಡ್ ಮಾಡಿ ಸ್ಕ್ಯಾನ್ ಮಾಡುತ್ತಿದ್ದ ಸೈಬರ್ ವಂಚಕರು, ಅದನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳಿಗ್ಗೆ ಕನ್ನ ಹಾಕುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳು ತೆಲಂಗಾಣ, ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಈ ರೀತಿಯ ಕೃತ್ಯ ಎಸಗಿದ್ದು ತನಿಖೆಯಿಂದ ತಿಳಿದುಬಂದಿತ್ತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1