ಕರ್ನಾಟಕದಲ್ಲಿ ಜ 5ರಿಂದ ಪರಿಷ್ಕೃತ ಟಿಕೆಟ್​ ದರ ಅನ್ವಯ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?

ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಶೇಕಡಾ 15 ರಷ್ಟು ಏರಿಕೆ ಮಾಡಲಾಗಿದೆ. ಡೀಸೆಲ್ ದರ ಏರಿಕೆ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಜನವರಿ 5 ರಿಂದ ಈ ಹೊಸ ದರ ಜಾರಿಗೆ ಬರಲಿದೆ. ಹೆಚ್ಚಳದಿಂದ ಸರ್ಕಾರಕ್ಕೆ ದಿನಕ್ಕೆ 7.84 ಕೋಟಿ ರೂ ಹೆಚ್ಚುವರಿ ಆದಾಯ ಸಾಧ್ಯತೆ ಇದೆ.

ಬೆಂಗಳೂರು, ಜನವರಿ 02: ಶಕ್ತಿ ಯೋಜನೆ ಎಫೆಕ್ಟ್​​ನಿಂದಾಗಿ ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಂದಲೂ ಬಸ್ ಪ್ರಯಾಣದ ದರ (Rate) ಏರಿಕೆ ಬಗ್ಗೆ ಪ್ರಸ್ತಾಪವಿತ್ತು. ಈ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಬಸ್​ ಪ್ರಯಾಣ ದರ ಶೇ.15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬಸ್​ ಟಿಕೆಟ್​ ದರ ಶೇಕಡಾ 15ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಟಿವಿ9ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ತಿಳಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, 2020ರಂದು ಬಸ್​ ಟಿಕೆಟ್ ಹೆಚ್ಚಳ ಮಾಡಲಾಗಿತ್ತು. ಐದು ವರ್ಷದಲ್ಲಿ ಈಗ ಡೀಸೆಲ್ ದರ ಹೆಚ್ಚಳವಾಗಿದೆ. ಖರ್ಚು ವೆಚ್ಚ ಕೂಡ ಹೆಚ್ಚಿಗೆ ಆಗಿದೆ. ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ. ಕಳೆದ 5-10 ವರ್ಷಗಳಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಲ್ವಾ. ಆದಾಯ ಹೆಚ್ಚಳವಾದರೂ ಖರ್ಚು ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಆದರೆ ಶಕ್ತಿ ಯೋಜನೆಯಿಂದ ನಮಗೆ ಲಾಭ ಆಗಿದೆ. ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂ. ಸಾಲ ಬಿಟ್ಟು ಹೋಗಿದೆ. ನಮ್ಮ ಸರ್ಕಾರದಲ್ಲಿ ವೇತನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ನಮ್ಮ ಸರ್ಕಾರದಲ್ಲಿ ಟೈಂ ಸರಿಯಾಗಿ ಸಂಬಳ ಆಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಸಂಬಳದ ಸಮಸ್ಯೆಯಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್​​​ ಟಿಕೆಟ್ ದರ ಕಡಿಮೆ ಇದೆ ಎಂದಿದ್ದಾರೆ.

ಹಿಂದನ ಸರ್ಕಾರದ ಸಾಲ ತೀರಿರುವ ಜವಾಬ್ದಾರಿ ಕೂಡ ಇದೆ. ಹತ್ತಿರ ಹತ್ತಿರ ಒಂದು ಸಾವಿರ ಕೋಟಿ ರೂ. ಆದಾಯ ಹೆಚ್ಚಾಗಿದೆ. ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಹೊಸ ವರ್ಷಕ್ಕೆ ಯಾವುದೇ ತೊಂದ್ರೆ ಆಗಲ್ಲ. ಮುಂದೆಯೂ ಮಾಡಬೇಕಿತ್ತು ಅಲ್ಲ, ಹೀಗಾಗಿ ಈಗ ಮಾಡಿದ್ದೇವೆ. ಅದರಲ್ಲಿ ಹೊಸ ವರ್ಷ ಅಂತೇನಿಲ್ಲ. ಮಹಿಳೆಯರಿಗೆ ಉಚಿತ ಆದರೆ ಪುರುಷರಿಗೆ ತೊಂಂದರೆ ಆಗುತ್ತದೆ ಎಂಬ ಪ್ರಶ್ನೆಗೆ, ಬಸ್ ಉಡಿಸಬೇಕೋ ಬೇಡ್ವೋ, ಎಲ್ಲವನ್ನ ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಜನವರಿ 5ರಿಂದ ಪರಿಷ್ಕೃತ ಟಿಕೆಟ್​ ದರ ಅನ್ವಯ

ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಹೆಚ್​ಕೆ ಪಾಟೀಲ್, ಬಸ್​ ಟಿಕೆಟ್​ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದ್ದು, ಜನವರಿ 5ರಿಂದ ಪರಿಷ್ಕೃತ ಟಿಕೆಟ್​ ದರ ಅನ್ವಯವಾಗಲಿದೆ. 4 ಸಾರಿಗೆ ನಿಗಮಗಳ ಟಿಕೆಟ್​ ದರ ಪರಿಷ್ಕರಿಸಿದ್ದೇವೆ. ಹಾಗಾಗಿ ಟಿಕೆಟ್​ ದರ ಶೇ.15ರಷ್ಟು ಹೆಚ್ಚಿಸಲು ಅನುಮೋದಿಸಲಾಗಿದೆ. ದರ ಹೆಚ್ಚಳದಿಂದ ನಿತ್ಯ 7.84 ಕೋಟಿ ರೂ. ಆದಾಯ ಹೆಚ್ಚಳ ಸಾಧ್ಯತೆ ಇದೆ.

Source : https://tv9kannada.com/politics/karnataka-raises-bus-fares-by-15-amidst-rising-costs-what-ramalinga-reddy-sasy-taja-suddi-ggs-958317.html

Leave a Reply

Your email address will not be published. Required fields are marked *