ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮ್ಯಾಸ ಬೇಡ ಬುಡಕಟ್ಟು ಜನರು ನಾಯಕ ಎಂದು ಬರೆಸಿ.


ಚಿತ್ರದುರ್ಗ ಸೆ. 16

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು 2025 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡ ಬುಡಕಟ್ಟು ಜನರು ಅನುಬಂಧ-3ಸಿ, ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿ ಅoಜe ಸಂಕೇತ ಸಂಖ್ಯೆ, ಅ-382 ರ ‘ನಾಯಕ’ ಎಂದು ಬರೆಯಬೇಕೆಂದು ಮಾಜಿ ಶಾಸಕ ನೆರಲಗುಂಟೆ ತಿಪ್ಪೇಸ್ವಾಮಿ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ. 


ನಗರದ ಪತ್ರಿಕಾ ಭವನವದಲ್ಲಿ  ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು ಕರ್ನಾಟಕ, ಆಂದ್ರ ಗಡಿ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯಡ ಬುಡಕಟ್ಟಿಗೆ ಸೇರಿದ ನಾಯ ಅಥವಾ ನಾಯಕ ಪಂಗಡದವರಾದ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡರು ನೆಲೆಸಿರುತ್ತೇವೆ. ಮ್ಯಾಸ ಬೇಡ ಅಥವಾ ಮ್ಯಾಸ ನಾಯಕ ಬುಡಕಟ್ಟು ಜನಾಂಗವು ರಾಜ್ಯದಲ್ಲಿ ವಿಶಿಷ್ಟವಾದ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಸಮುದಾಯವಾಗಿದೆ. ಮಾಸ ಬೇಡ ಅಥವಾ ಮ್ಯಾಸ ನಾಯಕರು ಮೂಲತ ಗೊಂಡವಾನ ಪ್ರದೇಶದ ಬುಡಕಟ್ಟುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗದಿಂದ ಬೇರ್ಪಟ್ಟ ನಾಯ್ಕಡ’ ಬುಡಕಟ್ಟಿಗೆ ಸೇರಿರುತ್ತೇವೆ. ಮಾಸನಾಯಕ ಬುಡಕಟ್ಟು ಜನಾಂಗವನ್ನು 1976 ರಲ್ಲಿಯೇ (“ನಾಯಕ” “Nayaka”) ಎಂಬ ಹೆಸರಿನ ಸಮಾನಾರ್ಥಕ ಪದದ ಮೂಲಕ ಭಾರತದ ಸಂಸತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿರುತ್ತದೆ ಎಂದು ತಿಳಿಸಿದರು.


ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು 2025 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿರುವ ಮ್ಯಾಸನಾಯಕ ಅಥವಾ ಮ್ಯಾಸ ಬೇಡ ಬುಡಕಟ್ಟು ಜನರು ಯಾವುದೇ ಗೊಂದಲಕ್ಕೆ ಒಳಪಡದೆ, ಅನುಬಂಧ-3ಸಿ, ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯ ಅoಜe ಸಂಕೇತ ಸಂಖ್ಯೆ ಅ-38.2ರಲ್ಲಿ ಬರುವ ‘ನಾಯಕ’ ಎಂದು ಬರೆಯಬೇಕೆಂದು ತಿಳಿಸಿದರು.


ಮುಖ್ಯ ಮಂತ್ರಿ ಸಿದ್ದರಾಮಯ್ಯರ ಅವರಿಗೆ ಮನವಿ ಮಾಡಿ ಎಲ್ಲ ಸಮುದಾಯಕ್ಕೆ ನಿಗಮಗಳು ನೀಡಿದ್ದೀರಿ ನಮ್ಮ ಸಮುದಾಯವಾದ ಮ್ಯಾಸ ನಾಯಕ ಪ್ರತೇಕ ನಿಗಮ ಮಾಡಿ ಎಂದು ಮಾಜಿ ಶಾಸಕ ನೆರಲಗುಂಟೆ ತಿಪ್ಪೇಸ್ವಾಮಿ ಮನವಿ ಮಾಡಿದ್ದರು.


ಈ ಸುದ್ದಿ ಗೋಷ್ಠಿಯಲ್ಲಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣ ಸಮಿತಿ ಅಧ್ಯಕ್ಷ  ಡಾ. ಗೆರೆಗಲ್ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಜಗದೀಶ, ಮಲ್ಲೇಶ, ಓಬಳೇಶ ಇದ್ದರು.

Views: 16

Leave a Reply

Your email address will not be published. Required fields are marked *