ವಿಶ್ವ ಪರಿಸರ ದಿನಾಚರಣೆ  ಹಿನ್ನಲೆಯಲ್ಲಿ ‘ಏಕೆ ಪೇಡ್ ಮಾ ಕೆ ನಾಮ್(ತಾಯಿಯ ಹೆಸರಲ್ಲಿ ಒಂದು ಸಸಿ )’ ಅಭಿಯಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ರೈಲ್ವೆ ಸ್ಠೇಷನ್ ಸಮೀಪವಿರುವ ಸದಾನಂದ ಬಡಾವಣೆಯಲ್ಲಿರುವ ತ್ರಿಶೂಲ್ ಆಂಜನೇಯ ದೇವಸ್ಥಾನದ ಅವರಣದಲ್ಲಿ ಇತ್ತೀಚೇಗೆ ಪಕ್ಷದ ಸಂಸ್ಥಾಪಕರಾದ ಶ್ಯಾಂ ಪ್ರಕಾಶ್ ಮುಖರ್ಜಿ ಪುಣ್ಯ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ  ಹಿನ್ನಲೆಯಲ್ಲಿ ಏಕೆ ಪೇಡ್ ಮಾ ಕೆ ನಾಮ್(ತಾಯಿಯ ಹೆಸರಲ್ಲಿ ಒಂದು ಸಸಿ ) ಅಭಿಯಾನದಲ್ಲಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು .

ದೇಶಾದ್ಯಂತ ಕಾರ್ಯಕರ್ತರು ತಮ್ಮ ತಾಯಿಯ ಹೆಸರಲ್ಲಿ ಒಂದೊಂದು ಗಿಡ ನೇಡಬೇಕಾಗಿದೆ ಎಂದು ಪ್ರದಾನಿ ಮೋದಿಯವರು ಕರೆ ನೀಡಿದ್ದಾರೆ ಹಾಗಾಗಿ ಪಕ್ಷದ ಪೇಜ್ ಪ್ರಮುಖರು ಬೂತ್ ಅದ್ಯಕ್ಷರು ಶಕ್ರಿ ಕೇಂದ್ರ ಪ್ರಮುಖರು ಮಂಡಲ ಅದ್ಯಕ್ಷರು ಜಿಲ್ಲಾ ಪಧಾದಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ತಮ್ಮ ತಾಯಿಯ ಜೊತೆ ಗಿಡ ನೆಡುವ ಅಥವಾ ತಾಯಿಯ ಚಿತ್ರದೊಂದಿಗೆ ನಿಂತು ಗಿಡ ನೆಡುವ ಕೆಲಸ ಮಾಡಬೇಕು  ಏಕ್ ಪೇಡ್ ಮಾ ಕಾ ನಾಮ್ ಅಭಿಯಾನದಲ್ಲಿ  ಭಾಗವಹಿಸಿ ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮದಲ್ಲಿ ವ್ಯಾಪಕ ಪ್ರಚಾರ ಕೊಡಬೇಕಾಗಿದೆ. ಪ್ರತಿಯೊಬ್ಬ ನಾಗರಿಕರು, ಸಾರ್ವಜನಿಕರು, ಎನ್‍ಜಿಓಗಳು ಈ  ಭಾಗವಹಿಸಿ ಅಭಿಯಾನವನ್ನು ಯಶಸ್ಸಿಗೊಳಿಸಲು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಬಿಜೆಪಿ ಪ್ರದಾನ ಕಾರ್ಯದರ್ಶಿ ಜಿ.ಹೆಸ್ ಸಂಪತ್‍ಕುಮಾರ್  ನಗರ ಅದ್ಯಕ್ಷ ನವೀನ್ ಚಾಲುಕ್ಯ ಜಿಲ್ಲಾ ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಹಿರಿಯ ಮುಖಂಡ ಶಿವಣ್ಣ ಚಾರ್,   ಪ್ರಕಾಶ್, ಬಡಾವಣೆಯ ಪ್ರಮುಖರಾದ ಕುಮಾರ್ ,ಲಿಂಗಯ್ಯ ಶಿವಮೂರ್ತಿ,ರಂಗಣ್ಣ ,ರಾಜೇಶ್ವರಿ ಸಾರಂಗ ಮಠ, ವೀರಭದ್ರಪ್ಪ, ಶೋಭಮ್ಮ, ಶ್ರಿನಿವಾಸ, ಮಲ್ಲಿಕಾರ್ಜುನ್  ಶಿವಕುಮಾರ್, ಅಜಿತ್, ಸಾಗರ್,ಪ್ರವಿಣ್  ಲೋಕೇಶ್ ಸಾರಂಗ ಮಠ,  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *