
ಈ ಬಾರಿ ಟೀಂ ಇಂಡಿಯಾ ಚೇರ್ ಮನ್ ಸೆಲೆಕ್ಷನ್ ಕಮಿಟಿಯ ರೇಸ್ ನಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಹೆಸರು ಕೂಡ ಮುಂಚೂಣಿಯಲ್ಲಿತ್ತು. ಅವರೇ ಚೇರ್ ಮನ್ ಆಗಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ ಬಿಸಿಸಿಐ ನಿರ್ಧಾರವೇ ಬೇರೆಯಾಗಿದೆ. ಮತ್ತೆ ಚೇತನ್ ಶರ್ಮಾ ಅವರ ಹೆಸರೇ ಚರ್ಚೆಗೆ ಬಂದಿದೆ.
ಕ್ರಿಕೆಟ್ ಅಡ್ವೈಸರಿ ಕಮಿಟಿ ಶಾರ್ಟ್ ಲೀಸ್ಟ್ ಮಾಡಿದ್ದು, ಅದರಲ್ಲಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನಾಪತ್ತೆಯಾಗಿದೆ. ಇದು ಕನ್ನಡಿಗರಿಗೆ ಬೇಸರವನ್ನುಂಟು ಮಾಡಿದೆ. ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನದಿಂದ ವಜಾಗೊಂಡಿದ್ದ ಚೇತನ್ ಶರ್ಮಾ ಅವರನ್ನೇ ಮುಂದಿನ ಎರಡು ವರ್ಷಗಳ ಅವಧಿಗೆ ಪುನರ್ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಬಿಸಿಸಿಐ ಹಾಗೂ ಚೇತನ್ ಶರ್ಮಾ ನಡುವೆ ಇದ್ದಂತ ಭಿನ್ನಾಭಿಪ್ರಾಯ ಬಗೆಹರಿದಿದೆ. ಹೀಗಾಗಿ ಮತ್ತೆ ಅವರನ್ನೇ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇದೇ ವಾರದಲ್ಲಿ ಅಧಿಕೃತ ಪ್ರಕಟಣೆಯನ್ನು ಬಿಸಿಸಿಐ ಹೊರಡಿಸುವ ಸಾಧ್ಯತೆ ಇದೆ. ಈ ಹಿಂದೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವುದಿ ಬಹುತೇಕ ಖಚಿತ ಎನ್ನಲಾಗುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ನಿರ್ಧಾರ ಬದಲಾಗಿದೆ.
The post ಚೇರ್ ಮನ್ ರೇಸ್ ನಲ್ಲಿ ಚೇತನ್ ಶರ್ಮಾ: ವೆಂಕಟೇಶ್ ಪ್ರಸಾದ್ ಆಯ್ಕೆ ಯಾಕಿಲ್ಲ..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/hl7ue0j
via IFTTT