ಸಾವಿನ ಮನೆಯಲ್ಲಿ ರಾಹುಲ್ ಗಾಂಧಿ ನಗುತ್ತಿದ್ದಾರೆ : ಕಿಡಿಕಾರಿದ ಬಿಜೆಪಿ

ನವದೆಹಲಿ : ಸಮಾಜವಾದಿ ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಅವರ ಕುಟುಂಬಕ್ಕೆ ಸಾಂತ್ವನ ಹೇಳುವಾಗ ನಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭಾರತೀಯ ಜನತಾ ಪಕ್ಷದ ವಕ್ತಾರ ಶೆಹಜಾದ್ ಪೂನವಾಲಾ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

2018 ರಲ್ಲಿ ಕರ್ನಾಟಕದ ಮಾಜಿ ಸಿಎಂ ಎನ್ ಧರಂ ಸಿಂಗ್ ಅವರ ಸಂತಾಪ ಸೂಚಕ ಸಭೆಯಲ್ಲಿ ಕೂಡಾ ರಾಹುಲ್ ನಗುತ್ತಿದ್ದರು. ಆ ಸಂದರ್ಭದಲ್ಲಿ ‌ತೆಗೆದ ಫೋಟೋಗಳನ್ನು ಸಹಾ ಪೂನಾವಾಲಾ ಅವರು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂತಾಪ ಸೂಚಿಸುವ ಸಂದರ್ಭದಲ್ಲಿ
ನಗುತ್ತಿರುವ ಚಿತ್ರಗಳನ್ನು ಹಂಚಿಕೊಂಡು, ಬಿಜೆಪಿ ರಾಷ್ಟ್ರೀಯ ವಕ್ತಾರರು ಟ್ವೀಟ್ ಮಾಡಿದ್ದಾರೆ, “ಶರದ್ ಯಾದವ್ ಅವರ ಕುಟುಂಬ ಕಣ್ಣೀರು ಸುರಿಸುತ್ತಿರುವಾಗ ರಾಹುಲ್ ಗಾಂಧಿ ನಗುತ್ತಿದ್ದಾರೆ.

2018 ರಲ್ಲಿಯೂ ಇದೇ ರೀತಿ ಧರಂ ಸಿಂಗ್ ಅವರ ಸಂತಾಪ ಸೂಚಕ ಸಭೆಯಲ್ಲಿ ರಾಹುಲ್ ನಗುತ್ತಿದ್ದರು; ಪುಲ್ವಾಮಾ ಶ್ರದ್ಧಾಂಜಲಿ ಸಮಯದಲ್ಲಿ ಫೋನ್‌ನಲ್ಲಿ ಬ್ಯುಸಿಯಾಗಿದ್ದರು ಎಂದು ಬಿಜೆಪಿ ಕಿಡಿ ಕಾರಿದೆ.

ನಿನ್ನೆ(ಗುರುವಾರ) ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರಿಗೆ ದೆಹಲಿಯ ತಮ್ಮ ನಿವಾಸದಲ್ಲಿ ರಾಹುಲ್ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು. “ಶರದ್ ಯಾದವ್ ಜಿ ಅವರಿಂದ ನಾನು ರಾಜಕೀಯದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಇಂದು ಅವರ ನಿಧನ ನನಗೆ ದುಃಖ ತಂದಿದೆ. ಅವರು ನನ್ನ ‘ತಂದೆಯ’ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಹಿರಿಯ ರಾಜಕಾರಣಿ ಮತ್ತು ಮಾಜಿ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಗುರುವಾರ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ವಯಸ್ಸು 75. ಅವರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

The post ಸಾವಿನ ಮನೆಯಲ್ಲಿ ರಾಹುಲ್ ಗಾಂಧಿ ನಗುತ್ತಿದ್ದಾರೆ : ಕಿಡಿಕಾರಿದ ಬಿಜೆಪಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/CaOeZnv
via IFTTT

Leave a Reply

Your email address will not be published. Required fields are marked *