ಅಭ್ಯಾಸ ಪಂದ್ಯದಲ್ಲಿಯೇ ಭಾರತಕ್ಕೆ ಭರ್ಜರಿ ಗೆಲುವು, ಬಾಂಗ್ಲಾ ಬಗ್ಗುಬಡಿದ ಟೀಂ ಇಂಡಿಯಾ.

ಐಸಿಸಿ ವಿಶ್ವಕಪ್ 2024 (T20 World Cup 2024) ಜೂನ್ 2ರಿಂದ ಆರಂಭವಾಗಲಿದೆ. ಈ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ಭಾರತದ ಏಕೈಕ ಅಭ್ಯಾಸ ಪಂದ್ಯ ಆಡಿದೆ. ಈ ಪಂದ್ಯದಲ್ಲಿ ಟಾಸ್‌‌ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಬರೋಬ್ಬರಿ 183 ರನ್‌ ಗಳಿಸುವ ಮೂಲಕ ನ್ಯೂಯಾರ್ಕ್‌‌ನ ಹೊಸ ಪಿಚ್‌‌ನಲ್ಲಿ ಭರ್ಜರಿ ಸ್ಕೋರ್‌ ಗಳಿಸಿ ಅಬ್ಬರಿಸಿತು. ಬಳಿಕ ಈ ಬೃಹತ್‌ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ ತಂಡವು ಆರಂಭದಿಂದಲೇ ಭಾರತೀಯ ಬೌಲರ್‌ಗಳ ಎದುರು ಶರಣಾಯಿತು. ಇದರ ಭಾಗವಾಗಿ ಬಾಂಗ್ಲಾದೇಶ ತಂಡವು ನಿಗ್ದದಿತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 121 ರನ್‌ ಗಳಿಸುವ ಮೂಲಕ ಸೋಲನ್ನಪ್ಪಿತು. ಈ ಮೂಲಕ ಭಾರತ ತಂಡ ತನ್ನ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿಯೇ ಗೆಲುವು ದಾಖಲಿಸಿದೆ.

ಅಭ್ಯಾಸ ಪಂದ್ಯದಲ್ಲಿಯೇ ಪಂತ್‌-ಪಾಂಡ್ಯ ಅಬ್ಬರ:

ಇನ್ನು, ಜೂನ್ 1 ರಂದು ಶನಿವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದ ಮೊದಲು ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು, ಬಾಂಗ್ಲಾದೇಶಕ್ಕೆ ಮೊದಲು ಬೌಲಿಂಗ್ ಮಾಡಲು ಸವಾಲು ಹಾಕಿದರು. ಟೀಂ ಇಂಡಿಯಾ ಪರ ರಿಷಬ್ ಪಂತ್ 53 ರನ್, ರೋಹಿತ್ ಶರ್ಮಾ 23 ರನ್, ಸೂರ್ಯಕುಮಾರ್ ಯಾದವ್ 31 ರನ್, ಶಿವಂ ದುಬೆ 14 ರನ್, ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿದರು.

ಬಾಂಗ್ಲಾದೇಶದ ಬೌಲರ್‌ಗಳು ಟೀಂ ಇಂಡಿಯಾದ 4 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಇವರಲ್ಲಿ ಮೆಹದಿ ಹಸನ್, ಶರೀಫುಲ್ ಇಸ್ಲಾಂ, ಮಹಮ್ಮದುಲ್ಲಾ ಮತ್ತು ತನ್ವೀರ್ ಇಸ್ಲಾಂ ತಲಾ 1 ವಿಕೆಟ್ ಪಡೆದರು. ರಿಷಬ್ ಪಂತ್ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರನಡೆದರು. ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಗೆಲುವಿಗೆ 183 ರನ್ ಗಳ ಸವಾಲನ್ನು ನೀಡಿತು.

ರಿಷಭ್‌ ಪಂತ್‌ ಭರ್ಜರಿ ಕಂಬ್ಯಾಕ್‌:

ಸುಮಾರು ಒಂದೂವರೆ ವರ್ಷಗಳ ನಂತರ ಈ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿರುವ ರಿಷಬ್ ಪಂತ್ ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದರು. ಈ ವೇಳೆ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 6 ಎಸೆತದಲ್ಲಿ 1 ರನ್‌ ಗಳಿಸಿ ಔಟ್ ಆದರು. ರಿಷಬ್ ಪಂತ್ 32 ಎಸೆತಗಳಲ್ಲಿ 53 ರನ್ ಗಳಿಸಿ ವಾಪಸ್ಸಾದರು. ಈ ವೇಳೆ ಅವರು 4 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದರು. ಟೀಂ ಇಂಡಿಯಾಕ್ಕೆ ಮರಳಿದ ರಿಷಬ್ ಪಂತ್ ಅವರ ಮೊದಲ ಅರ್ಧಶತಕ ಇದಾಗಿದೆ. ಡಿಸೆಂಬರ್ 2022ರಲ್ಲಿ ರಿಷಬ್ ಪಂತ್ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಈ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡ ಕಾರಣ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಿಷಬ್ ಪಂತ್ ಒಂದೂವರೆ ವರ್ಷಗಳ ನಂತರ ಟೀಂ ಇಂಡಿಯಾಗೆ ಮರಳಿದರು. ಪಂತ್‌ ಜೊತೆಗೆ ಹಾರ್ದಿಕ್ ಪಾಂಡ್ಯ 40 ರನ್ ಗಳಿಸುವ ಮೂಲಕ ಕಳೆದ ಐಪಿಎಲ್‌ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಅವರ ಮೇಲೆ ಇದ್ದ ಅಪನಂಬಿಕೆಗಳು ಇಂದು ದೂರವಾಗಿದೆ.

Source : https://kannada.news18.com/news/sports/t20-world-cup-2024-ind-vs-ban-warm-up-team-india-won-by-62-runs-skb-1723719.html

Leave a Reply

Your email address will not be published. Required fields are marked *