ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
![](https://samagrasuddi.co.in/wp-content/uploads/2024/08/DSCN9993-300x225.jpg)
ಚಿತ್ರದುರ್ಗ ಆ. 04 : ಪ್ರಸುತ್ತ ದಿನಮಾನದಲ್ಲಿ ನಮ್ಮಲ್ಲಿರುವ ಇಂಧನಗಳು ಮುಂದಿನ ದಿನದಲ್ಲಿ ಖಾಲಿಯಾಗಬಹುದು ಆದರೆ ಸೂರ್ಯನ ಕಿರಣಗಳು ಎಂದಿಗೂ ಸಹಾ ಖಾಲಿಯಾಗುವುದಿಲ್ಲ ಇದನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದರ ಮೂಲಕ ಸಂಪಾದನೆಯನ್ನು ಸಹಾ ಮಾಡಬಹುದಾಗಿದೆ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಮಂಜುನಾಥ್ ಭಾಗವತ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಅಡಿಯಲ್ಲಿ ಭಾನುವಾರ ವಿ.ಪಿ ಬಡಾವಣೆಯಲ್ಲಿನ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿಶೈಲಾ ಅರುಣ್‌ರವರ ಮನೆಯಲ್ಲಿ ಆಳವಡಿಕೆ ಮಾಡಲಾದ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕ ರೋಟರಿಕ್ಲಬ್ ಚಿನ್ಮೂಲಾದ್ರಿಯವತಿಯಿಂದ ಉದ್ಘಾಟನೆ ಹಾಗೂ ಸೂರ್ಯಘರ್ ಯೋಜನೆಯ ಪ್ರಯೋಜನಗಳ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿನ ಇಂಧನಗಳು ಹಲವಾರು ವರ್ಷಗಳಿಂದ ಬಳಕೆಯನ್ನು ಮಾಡಲಾಗುತ್ತಿದೆ ಇವುಗಳು ಮುಂದೆ ಒಂದು ದಿನ ಖಾಲಿಯಾಗಬಹುದು ಆದರೆ ಸೂರ್ಯನ ಕಿರಣಗಳು ನಮ್ಮ ಭೂಮಿ ಇರುವವರೆಗೂ ಸಹಾ ಇರುತ್ತದೆ ಇದನ್ನು ಮನೆ ಅಥವಾ ಕಟ್ಟಡದ ಮೇಲೆ ಆಳವಡಿಕೆಯನ್ನು ಮಾಡುವುದರ ಮೂಲಕ ಸೂರ್ಯನಿಂದ ನೇರವಾಗಿ ವಿದ್ಯುತ್‌ನ್ನು ಬಳಕೆ ಮಾಡಬಹುದಾಗಿದೆ. ಇದರ ಅಳವಡಿಕೆಯೂ ಸಹಾ ಸುಲಭವಾಗಿದ್ದು ಇದಕ್ಕೆ ಕೇಂದ್ರ ಸರ್ಕಾರ ಸಹಾಯಧನ ನೀಡಲಿದೆ, ಅಲ್ಲದೆ ನಿಮ್ಮಲ್ಲಿ ಉತ್ಪಾದನೆಯಾಗಿ ನೀವು ಬಳಕೆ ಮಾಡಿ ಉಳಿದ ವಿದ್ಯುತ್‌ನ್ನು ವಾಪಾಸ್ಸ್ ಮಾರಾಟ ಮಾಡಬಹುದಾಗಿದೆ ಇದರಿಂದ ಸಂಪದಾನೆಯೂ ಸಹಾ ಆಗಲಿದೆ ಎಂದರು.
ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪರಿಸರವು ಸಹಾ ಕಾಪಾಡಿದಂತೆ ಆಗುತ್ತದೆ, ವಿದ್ಯುತ್ ಉತ್ಪಾದನೆ ಮಾಡಲು ಕಲ್ಲಿದ್ದಲ್ಲನ್ನು ಬಳಕೆ ಮಾಡಬೇಕಿದೆ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪರಿಸರದಲ್ಲಿ ಆಗಬಹುದಾದ ಹಾನಿಯನ್ನು ಸಹಾ ತಡೆಯ ಬಹುದಾಗಿದೆ. ತಮ್ಮ ಮನೆಗಳ ಅಗತ್ಯ ಹಾಗೂ ಕಟ್ಟಡದಲ್ಲಿ ಇರಬಹುದಾದ ಜಾಗವನ್ನು ಅವಲಂಭಿಸಿ ಇದನ್ನು ನಿರ್ಮಾಣ ಮಾಡಬಹುದಾಗಿದೆ, ಇದಕ್ಕೆ ಒಮ್ಮೆ ಹಣವನ್ನು ಹಾಕಿದರೆ ಸಾಕು ನಿಮ್ಮ ಮನೆಗಳ ವಿದ್ಯುತ್ ಪೂರ್ಣವಾಗಿ ಉಚಿತವಾಗಲಿದೆ, ಮುಂದಿನ 25 ವರ್ಷಗಳ ಕಾಲ ನಿಮ್ಮಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು ಸರ್ಕಾರ ಖರೀದಿ ಮಾಡಲಿದೆ ಎಂದು ಮಂಜುನಾಥ್ ತಿಳಿಸಿದರು.
ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಮಾತನಾಡಿ, ಸರ್ಕಾರ ಸೂರ್ಯನ ಬೆಳಕಿನಿಂದ ಉತ್ಪಾದನೆಯಾಗುವ ವಿದ್ಯುತ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದರ ಮೂಲಕ ಕೇಂದ್ರ ಸರ್ಕಾರ ದೇಶದ ಎಲ್ಲಡೆ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ, ತಮ್ಮ ಮನೆಗಳ ಮೇಲೆ ಇದನ್ನು ಆಳವಡಿಕೆ ಮಾಡುವುದರ ಮೂಲಕ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ನಾವು ರೋಟರಿ ಕ್ಲಬ್‌ನ ಸದಸ್ಯರು ತಮ್ಮ ಮನೆಗಳ ಮೇಲೆ ಇದನ್ನು ಆಳವಡಿಕೆ ಮಾಡುವುದರ ಮೂಲಕ ಸರ್ಕಾರಕ್ಕೂ ತಮಗೂ ಸಹಾ ಆದಾಯವನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರೋಟರಿಕ್ಲಬ್ ಚಿನ್ಮೂಲಾದ್ರಿಯ ಶಂಕರ್ರಪ್ಪ, ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಶೈಲಾ, ನಾಗರತ್ನ, ಸೆಲ್ಕೂದ ವ್ಯವಸ್ಥಾಪಕರಾದ ಅಜೇಯ್, ಲಾವಣ್ಯ ಉಪಸ್ಥಿತರಿದ್ದರು.