ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 26 ಶಾಲೆಯೊಂದು ದೇವಾಲಯವಿದ್ದಂತೆ, ಅದರಲ್ಲಿ ಭೋಧನೆ ಮಾಡುವ ಶಿಕ್ಷಕರುಗಳು ದೇವರಿದ್ದಂತೆ, ಇಲ್ಲಿ ಕಲಿಯುವ ಮಕ್ಕಳು ಭಕ್ತಾಧಿಗಳಿದ್ದಂತೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಎಂ.ಆರ್.ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ VAPS ಡಿಜಿಟಲ್ ಕ್ಯಾಂಪಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಶಾಲೆಯನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೇನೆ, ಮಕ್ಕಳಿಗೆ ಕಲಿಕೆಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಮಕ್ಕಳನ್ನು ಉತ್ತಮ ರೀತಿಯಲ್ಲಿ ತಯಾರು ಮಾಡುವುದರ ಮೂಲಕ ದೇಶಕ್ಕೆ ಉತ್ತಮವಾದ ಪ್ರಜೆಗಳನ್ನು ಕೂಡುಗೆಯಾಗಿ ನೀಡುತ್ತಿದ್ದಾರೆ. ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತವಾದ ಸ್ಥಾನದಲ್ಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಫಲಿತಾಂಶ ಬಂದಾಗ ಅದರಲ್ಲಿ ಉನ್ನತ ಸ್ಥಾನದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮಕ್ಕಳ ಪಾಲು ಹೆಚ್ಚಾಗಿ ಇರುತ್ತದೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದೆ ಏನನ್ನಾದರೂ ಸಾಧನೆ ಮಾಡಬಹುದು, ಎಂಬುದಕ್ಕೆ ವಿಜಯಕುಮಾರ್ ಸಾಕ್ಷಿಯಾಗಿದ್ದಾರೆ ಅವರು ಶಿಕ್ಷಣ ಕ್ಷೇತ್ರದ ಕಡೆ ಬಾರದೆ ಬೇರೆ ಕಡೆಗೆ ಹೋಗಿದ್ದರೆ, ನಮ್ಮ ಮಕ್ಕಳಿಗೆ ಅನ್ಯಾಯವಾಗುತ್ತಿತ್ತು ಅಲ್ಲದೆ ಒಂದು ಸಂಸ್ಥೆ ಸಾಧನೆ ಮಾಡುವುದು ಅಷ್ಟು ಮುಖ್ಯವಲ್ಲ ಒಬ್ಬ ವ್ಯಕ್ತಿ ಸಾಧನೆ ಮಾಡುವುದರ ಮುಖ್ಯವಾಗಿದೆ, ಈ ಶಿಕ್ಷಣ ಸಂಸ್ಥೆಯ ಪ್ರಗತಿಯಲ್ಲಿ ಶಿಕ್ಷಣ ಇಲಾಖೆ ಸಹಕಾರಿಯಾಗಿದೆ ಎಂದು ನಾಗರಾಜ್ ತಿಳಿಸಿದರು. ಶಿಕ್ಷಣ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗಾಗಿ ಈ ರೀತಿಯ App ಜಾರಿ ಮಾಡುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳ ಕಾರ್ಯ ದಕ್ಷತೆಯ ಮಾಹಿತಿಯನ್ನು ಪಡೆಯಬಹುದಾಗಿದೆ, ಅಲ್ಲದೆ ಅವರ ಹೋಂ ವರ್ಕ, ಶಿಕ್ಷಕರ ಜೊತೆ ಒಡನಾಟ, ಶಾಲೆಯಿಂದ ವಿವಿಧ ರೀತಿಯ ಮಾಹಿತಿಯನ್ನು ಪಡೆಯಲು ಬಳಕೆ ಮಾಡಿಕೊಳ್ಳಬಹುದಾಗಿದೆ ಈ ರೀತಿಯ App ಚಿತ್ರದುರ್ಗ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿ ಮಾಡಿದ್ದಾರೆ ಎಂದ ಅವರು, ಶಾಲೆಯೊಂದು ದೇವಾಲಯವಿದ್ದಂತೆ, ಅದರಲ್ಲಿ ಭೋಧನೆ ಮಾಡುವ ಶಿಕ್ಷಕರುಗಳು ದೇವರಿದ್ದಂತೆ, ಇಲ್ಲಿ ಕಲಿಯುವ ಮಕ್ಕಳು ಭಕ್ತಾಧಿಗಳಿದ್ದಂತೆ ಎಂದರು.
ಶಿಕ್ಷಣ ಇಲಾಖೆಯ ಸಾಯಿ ಪ್ರಸಾದ್ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಇಂತಹ Appಗಳ ಅವಶ್ಯಕತೆ ಇದೆ, ಇದರ ಬಳಕೆಯನ್ನು ಮಾಡಿಕೊಂಡು ತಮ್ಮ ಶೈಕ್ಷಣಿಕ ಗುಣ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇಂದು ಎಲ್ಲಡೆ ಸ್ಪರ್ದೇ ಇದೆ ಅದಕ್ಕೆ ತಕ್ಕಂತೆ ನಮ್ಮ ಮಕ್ಕಳು ತಯಾರಾಗಬೇಕಿದೆ ಇದು ಶಿಕ್ಷಣದ ಮೂಲಕವೇ ಆಗಬೇಕಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಶಿಕ್ಷಣ ಇಲಾಖೆ ನೀಡಲಿದೆ. ಈ ಶಾಲೆಯಲ್ಲಿ ಪ್ರಥಮ ಬಾರಿಗೆ ಈ App ಜಾರಿ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೆರವಾಗಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ ಎಂದರು.
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ನೀಡಿರುವ ಈ App ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಪ್ರಗತಿಯನ್ನು ಸಾಧಿಸಿ, ನಮ್ಮ ಸಂಸ್ಥೆ ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ನಮ್ಮ ಶಾಲೆಯ ಬೆಳವಣಿಗೆಯಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಅತಿ ಪ್ರಧಾನಗಿದೆ. ಅವರ ಮಾರ್ಗದರ್ಶನದಂತೆ ನಡೆಯಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನಿರ್ದೆಶಕರಾದ ಎಸ್.ಎಂ.ಪೃಥ್ವಿಶ್, VAPS ನ ಯೋಜನಾ ನಿರ್ದೇಶಕರಾದ ರಮೇಶ್ ಬಾಬು, ಮುಖ್ಯೋಪಾಧ್ಯಯರಾದ ಎನ್. ಜಿ. ತಿಪ್ಪೇಸ್ವಾಮಿ, ಪಿ. ಬಸವರಾಜಯ್ಯ , ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಅಫ್ರೀನ್ ಸಬಾ ಸ್ವಾಗತಿಸಿ, ನಿರೂಪಿಸಿದರು. ಶ್ರೀಮತಿ ಅಕ್ಷಿತಾ ವಂದಿಸಿದರು.