Income Tax Returns: ಐಟಿ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನ: ಕೇಂದ್ರದಿಂದ ಆದಾಯ ತೆರಿಗೆ ಪಾವತಿದಾರರಿಗೆ ಎಚ್ಚರಿಕೆ!

ಬೆಂಗಳೂರು: 2024-25ರ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಇಂದು ಕೊನೆಯ ದಿನ ವಾಗಿದೆ. ಲೆಕ್ಕಪರಿಶೋಧನೆಗೆ ಒಳಪಡಬೇಕಿಲ್ಲದ ಆದಾಯ ತೆರಿಗೆ ಪಾವತಿದಾರರು ರಿಟರ್ನ್ಸ್‌ ಸಲ್ಲಿಸಬೇಕು. ಜು.26ರವರೆಗೂ 5 ಕೋಟಿಗೂ ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿದ್ದಾರೆ.

ಇದೇ ವೇಳೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿ ಬಹಳ ದಿನವಾದರೂ ರೀಫಂಡ್‌ ಬರದೇ ಇದ್ದ ಪಕ್ಷದಲ್ಲಿ, ಗ್ರಾಹಕರು ಆದಾಯ ತೆರಿಗೆ ಇಲಾಖೆಯಿಂದ ಯಾವುದಾದರೂ ಸಂದೇಶ ಬಂದಿದೆದೆಯೇ ಎಂದು ಪರೀಕ್ಷಿಸಬೇಕು. ಬಂದಿದ್ದರೆ, ಅದರಲ್ಲಿನ ಸೂಚನೆಯಂತೆ ಮುಂದುವರೆಯಬೇಕು. ಇಂಥ ಸಂದೇಶಗಳು ಇ ಫೈಲಿಂಗ್‌ ಅಕೌಂಟ್‌ನ ಪೆಂಡಿಂಗ್‌ ಆಯಕ್ಷನ್‌ ಮತ್ತು ವರ್ಕ್‌ ಲಿಸ್ಟ್‌ ಸೆಕ್ಷನ್‌ನಲ್ಲಿ ಇರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.ಆದಾಯ ರಿಟರ್ನ್ಸ್‌ ಸಲ್ಲಿಸುವ ಗ್ರಾಹಕರು, ಹೆಚ್ಚಿನ ರೀಫಂಡ್‌ ಪಡೆಯುವ ಸಲುವಾಗಿ ಕಡಿಮೆ ಆದಾಯ ತೋರಿಸುವುದು ಮತ್ತು ಹೆಚ್ಚಿನ ವೆಚ್ಚ ತೋರಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಇಂಥ ಸುಳ್ಳು ಮಾಹಿತಿ ರೀಫಂಡ್‌ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬಕ್ಕೂ ಕಾರಣವಾಗಬಹುದು ಎಂದು ಹೇಳಿದೆ. 2024-25ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಗೆ ಒಳಪಡಬೇಕಿಲ್ಲದ ಆದಾಯ ತೆರಿಗೆ ಪಾವತಿದಾರರ ಖಾತೆಗಳ ಐಟಿಆರ್‌ ಸಲ್ಲಿಕೆಗೆ ಇದೇ ಜು.31 ಕಡೆಯ ದಿನವಾಗಿದೆ. ಜು.26ರವರೆಗೂ 5 ಕೋಟಿಗೂ ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿದ್ದಾರೆ.

Source : https://m.dailyhunt.in/news/india/kannada/allindiannewscom-epaper-allindia/income+tax+returns+aiti+ritarns+sallisalu+indu+koneya+dina+kendradindha+aadaaya+terige+paavatidaararige+echharike+-newsid-n624428315?listname=topicsList&index=41&topicIndex=0&mode=pwa&action=click

Leave a Reply

Your email address will not be published. Required fields are marked *