ಎಸ್‌ಬಿಐ ಎಫ್‌ಡಿ ಬಡ್ಡಿ ದರದಲ್ಲಿ ಏರಿಕೆ: ಯಾವ ಯಾವ ಅವಧಿಗೆ ಎಷ್ಟು ಹೆಚ್ಚಳ?

ಎಸ್‌ಬಿಐ 46 ರಿಂದ 179 ದಿನಗಳು, 180 ರಿಂದ 210 ದಿನಗಳು ಮತ್ತು 211 ರಿಂದ ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು 25-75 ಮೂಲಾಂಕಗಳಷ್ಟು (ಅಂದರೆ, 0.25% ರಿಂದ 0.75%) ಹೆಚ್ಚಿಸಲಾಗಿದೆ.

ಹಿರಿಯ ನಾಗರಿಕರಿಗೆ ಈ ಸ್ಥಿರ ಠೇವಣಿಗಳ ಮೇಲೆ ಹೆಚ್ಚುವರಿ 50 ಮೂಲ ಅಂಕಗಳಷ್ಟು (ಅಂದರೆ, 0.5%) ಬಡ್ಡಿ ದರವನ್ನು ನೀಡಲಾಗುತ್ತದೆ. ಸಾರ್ವಜನಿಕ ವಲಯದ ಈ ಬ್ಯಾಂಕ್ 2023ರ ಡಿಸೆಂಬರ್ 27 ರಂದು ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಕೊನೆಯದಾಗಿ ಹೆಚ್ಚಿಸಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಠೇವಣಿ ಅವಧಿಯ ಆಧಾರದ ಮೇಲೆ ವಿವಿಧ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ನೀಡುತ್ತದೆ. 7 ದಿನಗಳಿಂದ 45 ದಿನಗಳವರೆಗಿನ ಅಲ್ಪಾವಧಿಯ ಠೇವಣಿಗಳಿಗೆ, ಬಡ್ಡಿ ದರವು 3.50% ಆಗಿದೆ. 46 ದಿನಗಳು ಮತ್ತು 179 ದಿನಗಳ ನಡುವಿನ ಠೇವಣಿಗಳಿಗೆ, ದರವು 5.50% ಗೆ ಹೆಚ್ಚಾಗುತ್ತದೆ. 180 ದಿನಗಳಿಂದ 210 ದಿನಗಳವರೆಗೆ, ಬಡ್ಡಿ ದರವು 6.00% ಆಗಿದೆ. 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿ ದರ ಸಿಗುತ್ತದೆ. 1 ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ, ಬಡ್ಡಿ ದರವು 6.80% ರಷ್ಟು ಹೆಚ್ಚಾಗಿರುತ್ತದೆ. 2 ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ದರವು ಅದರ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದು 7.00% ರಷ್ಟಿದೆ. 3 ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ, ಬಡ್ಡಿ ದರವು 6.75% ಕ್ಕೆ ಸ್ವಲ್ಪ ಕಡಿಮೆಯಾಗುತ್ತದೆ. ಅಂತಿಮವಾಗಿ, ದೀರ್ಘಾವಧಿಯ ಠೇವಣಿಗಳಿಗೆ ಐದು ವರ್ಷಗಳಿಂದ 10 ವರ್ಷಗಳವರೆಗೆ, ಬಡ್ಡಿ ದರವು 6.50% ಆಗಿದೆ.

ಹೊಸ ಬಡ್ಡಿ ದರಗಳು:

7 ದಿನಗಳಿಂದ 45 ದಿನಗಳು 3.50%
46 ದಿನಗಳಿಂದ 179 ದಿನಗಳು 5.50%
180 ದಿನಗಳಿಂದ 210 ದಿನಗಳು 6.00%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6.25%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 6.80%
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.00%
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 6.75%
5 ವರ್ಷಗಳು ಮತ್ತು 10 ವರ್ಷಗಳವರೆಗೆ 6.50%

Source : https://m.dailyhunt.in/news/india/kannada/vijayvani-epaper-vijaykan/esbiai+efdi+baddi+daradalli+erike+yaava+yaava+avadhige+eshtu+hechhala+-newsid-n608867464?listname=topicsList&topic=news&index=10&topicIndex=1&mode=pwa&action=click

 

Leave a Reply

Your email address will not be published. Required fields are marked *