IND vs AUS: 4 ವರ್ಷಗಳಲ್ಲಿ 4 ಬಾರಿ; ಟೀಂ ಇಂಡಿಯಾಕ್ಕೆ ಮುಜುಗರ ತಂದ 4 ಹೀನಾಯ ಸೋಲುಗಳಿವು

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಕಳೆದ 4 ವರ್ಷಗಳಲ್ಲಿ 4ನೇ ಬಾರಿಗೆ 10 ವಿಕೆಟ್​ಗಳಿಂದ ಸೋತ ಕೆಟ್ಟ ದಾಖಲೆಗೆ ಭಾರತ ತಂಡ ಕೊರಳೊಡ್ಡಿದೆ.ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 117 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ಸಾಧಿಸಿ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಟೀಂ ಇಂಡಿಯಾ 4ನೇ ಬಾರಿಗೆ ಇಂತಹ ಮುಜುಗರಕ್ಕೆ ಒಳಗಾಗಬೇಕಾಯಿತು.ಅದಕ್ಕೂ ಒಂದು ವರ್ಷದ ಹಿಂದೆ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು 10 ವಿಕೆಟ್​ಗಳಿಂದ ಸೋಲಿಸಿತ್ತು. ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ನೀಡಿದ್ದ 152 ರನ್‌ಗಳ ಗುರಿಯನ್ನು ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತ್ತು.  ಇನ್ನು 14 ಜನವರಿ 2020 ರಂದು ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲ್ಲಿ ಇದೇ ಆಸ್ಟ್ರೇಲಿಯಾ ತಂಡ ಭಾರತಕ್ಕೆ 10 ವಿಕೆಟ್​ಗಳ ಸೋಲಿನ ಶಾಖ್ ನೀಡಿತ್ತು. ಈ ಪಂದ್ಯದಲ್ಲಿ ಭಾರತ ನೀಡಿದ 225 ರನ್​ಗಳ ಗುರಿಯನ್ನು ಡೇವಿಡ್ ವಾರ್ನರ್ ಮತ್ತು ಆರೋನ್ ಫಿಂಚ್ ಅಜೇಯ ಶತಕ ಬಾರಿಸಿ ಸಾಧಿಸಿದ್ದರು.ಹಾಗೆಯೇ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಯೂ ಭಾರತ ಇಂತಹ ಸೋಲಿಗೆ ತುತ್ತಾಗಬೇಕಾಯಿತು. ಆ ಪಂದ್ಯದಲ್ಲಿ ಭಾರತ ನೀಡಿದ 168 ರನ್​ಗಳ ಗುರಿಯನ್ನು ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿಯೇ ಸಾಧಿಸಿತ್ತು.

source https://tv9kannada.com/photo-gallery/cricket-photos/india-team-10-wickets-defeats-in-4-times-in-4-years-see-the-full-details-in-kannada-psr-au14-539515.html

Views: 0

Leave a Reply

Your email address will not be published. Required fields are marked *