
ದೆಹಲಿಯಲ್ಲಿ ನಡೆಯುತ್ತಿರುವ ಭಾರತ- ಆಸ್ಟ್ರೇಲಿಯಾ (India Vs Australia) ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸ್ಪಿನ್ ದಾಳಿಗೆ ನಲುಗಿರುವ ಟೀಂ ಇಂಡಿಯಾ (Team India) ಇನ್ನಿಂಗ್ಸ್ ಹಿನ್ನಡೆಯ ಆತಂಕದಲ್ಲಿದೆ. ತಂಡದ ಪ್ರಮುಖ ಆಟಗಾರರು ಈಗಾಗಲೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಆದರೆ ಈ ನಡುವೆ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಆಪದ್ಭಾಂದವನಾಗಿದ್ದ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ದೆಹಲಿ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆಸೀಸ್ ಸ್ಪಿನ್ನರ್ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ಮತ್ತೊಮ್ಮೆ ಸೆಟ್ ಆದ ನಂತರ ಔಟ್ ಆದರು. ತಮ್ಮ ಇನ್ನಿಂಗ್ಸ್ನಲ್ಲಿ 84 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 44 ರನ್ ಗಳಿಸಿದರು. ಆದಾಗ್ಯೂ, ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಸ್ಪಿನ್ ಬೌಲರ್‌ಗೆ ಮತ್ತೊಮ್ಮೆ ವಿಕೆಟ್ ಒಪ್ಪಿಸಿದ ಕೊಹ್ಲಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಎರಡನೇ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಅವರ ವಿಕೆಟ್ ಅನ್ನು ಎಡಗೈ ಸ್ಪಿನ್ನರ್ ಕುಹ್ನೆಮನ್ ಪಡೆದರು. ವಾಸ್ತವವಾಗಿ ಈ ಪಂದ್ಯ ಕುಹ್ನೆಮನ್ ಅವರ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಕುಹ್ನೆಮನ್ ಅವರಿಗೆ ವಿಕೆಟ್ ಒಪ್ಪಿಸಿದ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 20ನೇ ಬಾರಿಗೆ ಮೊದಲ ಟೆಸ್ಟ್ ಆಡುತ್ತಿರುವ ಬೌಲರ್‌ಗೆ ವಿಕೆಟ್ ನೀಡಿದ್ದಾರೆ.
IND vs AUS: ದೆಹಲಿಯಲ್ಲಾದರೂ ಕೊನೆಯಾಗುತ್ತಾ ಕೊಹ್ಲಿಯ 1181 ದಿನಗಳ ಕಾಯುವಿಕೆ..?
ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್‌ನಲ್ಲಿಯೂ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದ ಟಾಡ್ ಮರ್ಫಿಗೆ ಬಲಿಯಾಗಿದ್ದರು. ಇದೀಗ ದೆಹಲಿಯಲ್ಲಿ ಕುಹ್ನೆಮನ್ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಕುಹ್ನೆಮನ್ ಅವರ ಮೊದಲ ಟೆಸ್ಟ್ ವಿಕೆಟ್ ಆದರು.
20ನೇ ಬಾರಿಗೆ ಬಲಿ
ವಿರಾಟ್ ಕೊಹ್ಲಿ 20 ನೇ ಬಾರಿಗೆ ಚೊಚ್ಚಲ ಬೌಲರ್ ವಿರುದ್ಧ ತಮ್ಮ ವಿಕೆಟ್ ನೀಡಿದ್ದಾರೆ. ಈ ವಿಷಯದಲ್ಲಿ ಅವರು ಆರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 35 ಬಾರಿ ಔಟಾಗಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ, ಬಾಂಗ್ಲಾದೇಶದ ಮಹಮ್ಮದುಲ್ಲಾ ಮತ್ತು ಭಾರತದ ಮೊಹಮ್ಮದ್ ಅಜರುದ್ದೀನ್ ಎರಡನೇ ಸ್ಥಾನದಲ್ಲಿದ್ದಾರೆ.
ವಿವಾದ ಸೃಷ್ಟಿಸಿರುವ ವಿರಾಟ್ ಕೊಹ್ಲಿ ವಿಕೆಟ್
ವಾಸ್ತವವಾಗಿ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಈಗ ಚರ್ಚೆ ಹುಟ್ಟಿಕೊಂಡಿದೆ. ಎಲ್‌ಬಿಡಬ್ಲ್ಯು ಔಟ್ ಆದ ವಿರಾಟ್ ಕೊಹ್ಲಿ ಡಿಆರ್ಎಸ್ ಮೊರೆ ಹೋಗಿದ್ದರು. ಥರ್ಡ್ ಅಂಪೈರ್ ರಿಪ್ಲೇ ನೋಡಿದಾಗ ಚೆಂಡು ಬ್ಯಾಟ್‌ಗೆ ಅಥವಾ ಪ್ಯಾಡ್‌ಗೆ ತಾಗಿಕೊಂಡಿದೆಯೇ ಎಂಬುದು ಗೊತ್ತಾಗಲಿಲ್ಲ. ಹೀಗಾಗಿ ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ತ್, ಆನ್-ಫೀಲ್ಡ್ ಅಂಪೈರ್‌ನ ನಿರ್ಧಾರವನ್ನು ಪರಿಗಣಿಸಿ ಕೊಹ್ಲಿ ಔಟ್ ಎಂದು ತೀರ್ಪು ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ