IND vs AUS: ಮತ್ತೊಮ್ಮೆ ಕೈಕೊಟ್ಟ ರಾಹುಲ್; ಟ್ರೋಲಿಗರ ಟಾರ್ಗೆಟ್ ಆದ ಉಪನಾಯಕ!

IND vs AUS 2nd Test KL Rahul again fail netizen troll and memes viral in social media

ಬಾರ್ಡರ್- ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಟಾಪ್ ಆರ್ಡರ್ ಅಟ್ಟರ್ ಫ್ಲಾಪ್ ಆಗಿದೆ. ಮೊದಲ ಇನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 263 ರನ್ ಗಳಿಸಿತ್ತು. ಈ ರನ್‌ಗಳನ್ನು ಬೆನ್ನಟ್ಟಿದ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ದಯನೀಯವಾಗಿ ವಿಫಲರಾಗಿದ್ದಾರೆ. ಅದರಲ್ಲೂ ಸತತ ವೈಫಲ್ಯಗಳಿಂದ ಬಳಲುತ್ತಿರುವ ಉಪನಾಯಕ ಕೆ.ಎಲ್.ರಾಹುಲ್ (KL Rahul) ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲೂ ಕೆಎಲ್ ರಾಹುಲ್ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಿರಲಿಲ್ಲ. ಇದೀಗ ಉಪನಾಯಕತ್ವದ ಜವಬ್ದಾರಿ ಹೊತ್ತಿರುವ ರಾಹುಲ್ ಪದೇ ಪದೇ ಕೈಗೊಡುತ್ತಿರುವುದರಿಂದ ಮತ್ತೊಮ್ಮೆ ಟ್ರೋಲರ್​ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ದಿನದಾಟದ ಆರಂಭದಲ್ಲೇ ಕೆಎಲ್ ರಾಹುಲ್ ನಾಥನ್ ಲಿಯಾನ್ ಎಸೆತದಲ್ಲಿ ಔಟ್ ಆದ ಕೂಡಲೇ, ಟ್ರೋಲಿಗರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ.

ತಮ್ಮ ಇನ್ನಿಂಗ್ಸ್​ನಲ್ಲಿ 41 ಎಸೆತಗಳನ್ನು ಆಡಿದ ಕೆಎಲ್ ರಾಹುಲ್ 1 ಬೌಂಡರಿ ನೆರವಿನಿಂದ 17 ರನ್ ಗಳಿಸಿದರು. ಮೊದಲ ಟೆಸ್ಟ್ ಪಂದ್ಯದಲ್ಲಿಯೂ 71 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ನಂತರ ಟಾಡ್ ಮರ್ಫಿ ಬೌಲಿಂಗ್‌ನಲ್ಲಿ ಕ್ಯಾಚ್ ಔಟ್ ಆಗಿದ್ದರು. ಹೀಗಾಗಿ ನಿರಂತರವಾಗಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ರಾಹುಲ್ ಈಗ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಹಿಂದೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ನೆಟ್ಟಿಗರು ಕೂಡ ಕೆಎಲ್ ರಾಹುಲ್ ವಿರುದ್ಧ ಮೀಮ್ಸ್ ಮೂಲಕ ಟೀಕೆ ಮಾಡುತ್ತಿದ್ದಾರೆ.

ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ ವೃತ್ತಿಜೀವನ

ಕೆಎಲ್ ರಾಹುಲ್ ಇದುವರೆಗೆ 47 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 80 ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಪಡೆದಿದ್ದಾರೆ. ಇದರಲ್ಲಿ 7 ಶತಕ ಮತ್ತು 13 ಅರ್ಧಶತಕಗಳೊಂದಿಗೆ 2641 ರನ್ ಗಳಿಸಿದ್ದಾರೆ. 199 ರನ್ ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದ್ದು, ಅವರ ಬ್ಯಾಟಿಂಗ್ ಸರಾಸರಿ 33.86 ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-2nd-test-kl-rahul-again-fail-netizen-troll-and-memes-viral-in-social-media-psr-au14-522511.html

Leave a Reply

Your email address will not be published. Required fields are marked *