IND vs AUS: ಶಮಿ, ಜಡೇಜಾ, ಅಶ್ವಿನ್ ದಾಳಿಗೆ ನಲುಗಿದ ಆಸೀಸ್; 263 ರನ್​ಗಳಿಗೆ ಆಲೌಟ್..!

india vs australia 2nd test innings report usman khawaja ravichandran ashwin ravindra jadeja mohammed shami shines

ನಾಗ್ಪುರದಲ್ಲಿ ಸ್ಪಿನ್​ಗೆ ಶರಣಾಗಿದ್ದ ಆಸ್ಟ್ರೇಲಿಯಾ ತಂಡ (India Vs Australia) ದೆಹಲಿಯಲ್ಲೂ ಅದೇ ಕಥೆ ಮುಂದುವರೆಸಿದೆ. ಅಶ್ವಿನ್ (R Ashwin), ಜಡೇಜಾ (Ravindra Jadeja) ಸ್ಪಿನ್ ದಾಳಿಗೆ ನಲುಗಿದ ಕಾಂಗರೂಗಳು ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕರಾದ ಉಸ್ಮಾನ್ ಖವಾಜಾ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ಅವರ ಅರ್ಧಶತಕವನ್ನು ಹೊರತುಪಡಿಸಿ, ಬೇರೆ ಯಾವ ಆಟಗಾರನಿಗೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ 79 ಓವರ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 263 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇನ್ನು ಭಾರತದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ (Mohammed Shami) 4 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದು ಮಿಂಚಿದರು.

ದೆಹಲಿ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ ತಂಡಕ್ಕೆ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ 50 ರನ್ ಜೊತೆಯಾಟ ನಡೆಸಿದರು. ಆದರೆ ಈ ವೇಳೆ ಸೆಟ್ ಆಗಿದ್ದ ವಾರ್ನರ್ ಕೇವಲ 15 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ವಿಕೆಟ್ ಕಳೆದುಕೊಂಡರು. ವಾರ್ನರ್ ಬಳಿಕ ಬಂದ ಇಬ್ಬರು ಆಟಗಾರರು ಕೇವಲ 3 ಎಸೆತಗಳ ಅಂತರದಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡರು. 23ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆರ್ ಅಶ್ವಿನ್ ಮಾರ್ನಸ್ ಲಬುಶೇನ್​ಗೆ ಮೊದಲು ಪೆವಿಲಿಯನ್ ದಾರಿ ತೋರಿಸಿದರೆ, ಎರಡು ಎಸೆತಗಳ ನಂತರ ಸ್ಮಿತ್ ಅವರನ್ನು 0 ರನ್‌ಗೆ ಔಟ್ ಮಾಡಿದರು.

IND vs AUS: ರಾಹುಲ್ ಹಿಡಿದ ಅದ್ಭುತ ಕ್ಯಾಚ್ ನೋಡಿ ದಂಗಾದ ಶತಕ ವಂಚಿತ ಖವಾಜ; ವಿಡಿಯೋ ನೋಡಿ

ಎರಡು ಬಾರಿ ಸ್ಮಿತ್ ಶೂನ್ಯಕ್ಕೆ ಔಟ್

ಈ ಮೂಲಕ ಸ್ಟೀವ್ ಸ್ಮಿತ್ ಅವರನ್ನು ಎರಡು ಬಾರಿ ಶೂನ್ಯಕ್ಕೆ ಔಟ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾದರು. ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿಯೂ ಸ್ಮಿತ್‌ಗೆ ಖಾತೆ ತೆರೆಯಲು ಅಶ್ವಿನ್ ಅವಕಾಶ ನೀಡಿರಲಿಲ್ಲ. ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಟ್ರಾವಿಸ್ ಹೆಡ್​ಗೆ ದೆಹಲಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ಲ. ಹೆಡ್ 30 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಮೊಹಮ್ಮದ್ ಶಮಿಗೆ ಬಲಿಯಾದರು.

ಅಶ್ವಿನ್ ದಾಖಲೆ

ಬಳಿಕ ಅಲೆಕ್ಸ್ ಕ್ಯಾರಿಯನ್ನು 0 ರನ್‌ಗೆ ಔಟ್ ಮಾಡಿದ ಅಶ್ವಿನ್, ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಕೂಡ ಮಾಡಿದರು. ಅಷ್ಟೇ ಅಲ್ಲ, ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಶ್ವಿನ್ 100 ವಿಕೆಟ್ ಕೂಡ ಪೂರೈಸಿದರು. ಆದರೆ ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಉತ್ತಮ ಬ್ಯಾಟಿಂಗ್ ಮಾಡಿದ ಖವಾಜ ದೆಹಲಿ ಟೆಸ್ಟ್‌ನಲ್ಲಿ 20ನೇ ಅರ್ಧಶತಕ ಬಾರಿಸಿದರು. ಬಳಿಕ 81 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಖವಾಜ, ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಜಡೇಜಾ ದಾಖಲೆ

ಖವಾಜ್ ಅವರ ವಿಕೆಟ್ ಪಡೆದ ತಕ್ಷಣ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 250 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ಕೂಡ ಮಾಡಿದರು. ಇದರೊಂದಿಗೆ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 2500 ರನ್ ಮತ್ತು 250 ವಿಕೆಟ್‌ಗಳನ್ನು ಗಳಿಸಿದ ಏಷ್ಯಾದ ವೇಗದ ಕ್ರಿಕೆಟಿಗ ಕೂಡ ಆಗಿದ್ದಾರೆ. ಇದರೊಂದಿಗೆ ಜಡೇಜಾ, ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರಂತಹ ಅನುಭವಿಗಳನ್ನು ಹಿಂದಿಕ್ಕಿದರು. ಬಳಿಕ ನಾಯಕನ ಜೊತೆಯಾದ ಪೀಟರ್ ಹ್ಯಾಂಡ್ಸ್‌ಕಾಂಬ್ ಅದ್ಭುತ ಅರ್ಧಶತಕ ಗಳಿಸುವುದರ ಜೊತೆಗೆ ಪ್ಯಾಟ್ ಕಮಿನ್ಸ್ ಮತ್ತು ಉಸ್ಮಾನ್ ಖವಾಜಾ ಅವರೊಂದಿಗೆ ತಲಾ 59 ರನ್​ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/india-vs-australia-2nd-test-innings-report-usman-khawaja-ravichandran-ashwin-ravindra-jadeja-mohammed-shami-shines-psr-au14-521985.html

Views: 0

Leave a Reply

Your email address will not be published. Required fields are marked *