IND vs AUS, T20 World Cup 2024: ಮತ್ತೆ ಟಾಸ್‌ ಸೋತ ಭಾರತ, ಆಸೀಸ್‌ಗೆ ಇವತ್ತಾದ್ರೂ ಬಿಗ್‌ ಟಾರ್ಗೆಟ್‌‌ ಕೊಡುತ್ತಾ ಟೀಂ ಇಂಡಿಯಾ?

ODI ವಿಶ್ವಕಪ್‌ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಈಗಾಗಲೇ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇಂದು ಸೂಪರ್‌ 8 ರಣರೋಚಕ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ನಾಯಕತ್ವದ ಭಾರತ (Team India) ಮತ್ತು ಮಿಚೆಲ್‌ ಮಾರ್ಷ್‌ (Mitchell Marsh) ನೇತೃತ್ವದ ಆಸ್ಟ್ರೇಲಿಯಾ (Australia) ನಡುವೆ ನಡೆಯುತ್ತಿದೆ. ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯವು ಇಂದು ರಾತ್ರಿ 8 ರಿಂದ ಸೇಂಟ್ ಲೂಸಿಯಾದ ಡ್ಯಾರೆನ್ ಸಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದು ಟೀಂ ಇಂಡಿಯಾ ಸೆಮಿಸ್‌ಗೆ ಎಂಟ್ರಿಯಾಗೋ ತವಕದಲ್ಲಿದೆ. ODI ವಿಶ್ವಕಪ್‌ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಈಗಾಗಲೇ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಟಿ20 ವಿಶ್ವಕಪ್‌‌ನಲ್ಲಿ ಭಾರತದ್ದೇ ಮೇಲುಗೈ!

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ದಾಖಲೆ ಉತ್ತಮವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ.

ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಜಯ ಕಂಡಿದೆ. ಇಂದಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಕಾಂಗರೂ ತಂಡದ ವಿರುದ್ಧ 4-2 ಮುನ್ನಡೆ ಸಾಧಿಸಲಿದೆ.

ODI ವಿಶ್ವಕಪ್‌ ಸೇಡು ತೀರಿಸಿಕೊಳ್ಳಲು ಭಾರತ ರೆಡಿ!

ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಇತಿಹಾಸ ನೋಡೋದಾದ್ರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 31 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ 19 ಟಿ20 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಯಾವುದೇ ಫಲಿತಾಂಶಗಳಿಲ್ಲದೆ ಅಂತ್ಯ ಕಂಡಿದೆ.

Source: https://kannada.news18.com/news/sports/india-vs-australia-t20-world-cup-2024-updates-astralia-won-the-toss-and-elected-to-bowl-first-vdd-1751990.html

Leave a Reply

Your email address will not be published. Required fields are marked *